ಮಸಾಲೆ ದೋಸೆಯಲ್ಲಿ ಸತ್ತಇಲಿ ಕಂಡು ಆಘಾತಗೊಂಡ ಗ್ರಾಹಕ.

ಮಹಾರಾಷ್ಟ್ರ : ಮುಂಬೈನ ಹೋಟೆಲೊಂದರಲ್ಲಿ ಗ್ರಾಹಕರೊಬ್ಬರು ತಾವು ಸೇವಿಸುತ್ತಿದ್ದ ದೋಸೆಯಲ್ಲಿ ಇಲಿ ಇರುವುದನ್ನು ಗಮನಿಸಿ ಆಘಾತಗೊಂಡು, ಹೋಟೆಲ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಆಹಾರ ಮತ್ತು ಔಷಧ ಆಡಳಿತ (FDA) ಸಂಸ್ಥೆಯು ಆ ಹೋಟೆಲ್‌ನ ಪರವಾನಗಿಯನ್ನು ರದ್ದು ಗೊಳಿಸಿದ ಘಟನೆ ನಡೆದಿದೆ

ಬೊರಿವಲಿ ವೆಸ್ಟ್‌ನ ರಾಧಾಕೃಷ್ಣ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲಿಗೆ ಅಮಿತ್ ತ್ರಿವೇದಿ ಎಂಬ ವ್ಯಕ್ತಿ ತಮ್ಮ ಇಬ್ಬರು ಸಹೋದರರು ಮತ್ತು ಮಗನೊಂದಿಗೆ ದಕ್ಷಿಣ ಭಾರತೀಯ ಶೈಲಿಯ ಆಹಾರವನ್ನು ಸವಿಯಲು ಹೋಗಿದ್ದರು.

ತ್ರಿವೇದಿ ಅವರು ಮೈಸೂರು ಮಸಾಲಾ ದೋಸೆಯನ್ನು ಆರ್ಡರ್ ಮಾಡಿದ್ದರು, ದೋಸೆಯನ್ನು ಸ್ವಲ್ಪ ತಿಂದ ನಂತರ ಪಲ್ಯದಲ್ಲಿ ಸತ್ತ ಸಣ್ಣ ಇಲಿಯೊಂದು ಇರುವುದನ್ನು ಗಮನಿಸಿ ಆಘಾತಕ್ಕೊಳಗಾದರು ತಕ್ಷಣ ಅವರಿಗೆ ವಾಂತಿಯಾಯಿತು.

ನಂತರ ತ್ರಿವೇದಿ ಬೋರಿವಲಿ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಪೊಲೀಸರು ದೂರುನ್ನು ಎಫ್‌ಡಿಎ (FDA) ಗೆ ವರ್ಗಾಯಿಸಿದ್ದಾರೆ.

ರಾಧಾಕೃಷ್ಣ ಹೋಟೆಲ್‌ನ ಪರವಾನಗಿಯನ್ನು ಸದ್ಯಕ್ಕೆ ಅಮಾನತುಗೊಳಿಸಲಾಗಿದೆ ಎಂದು ಎಫ್‌ಡಿಎ (FDA) ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

More articles

Latest article

Most read