ಮತ ಪತ್ರದ ಮೂಲಕ ಮತದಾನ ಪದ್ಧತಿಗೆ ಮತ್ತೆ ಮರಳುವಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆಗ್ರಹ

ನವದೆಹಲಿ : ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಕುರಿತಾದ ಅನುಮಾನಗಳು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುತ್ತಿವೆ ಎಂದು ಹೇಳಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ತಕ್ಷಣವೇ ಮತಪತ್ರದ ಮೂಲಕ ಮತದಾನ ಪದ್ಧತಿಗೆ ಮರಳುವಂತೆ ಸೋಮವಾರ ಕರೆ ನೀಡಿದರು.

ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಸಂವಿಧಾನವು ಚುನಾವಣಾ ಆಯೋಗಕ್ಕೆ ವಹಿಸಿದ್ದರೆ, ಚುನಾವಣಾ ಪ್ರಕ್ರಿಯೆಯು ನ್ಯಾಯಸಮ್ಮತವಾಗಿರುವುದನ್ನು ಖಚಿತಪಡಿಸಲು ಸಂಸತ್ತು ಕಾನೂನುಗಳು ಮತ್ತು ನಿಯಮಗಳನ್ನು ರೂಪಿಸಿದೆ ಎಂದು ಮಾಯಾವತಿ ಹೇಳಿದರು.

“ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಆಯ್ಕೆಯಂತೆ ಮತ ಚಲಾಯಿಸುವ ಹಕ್ಕಿರಬೇಕು ಮತ್ತು ಅವರು ಚಲಾಯಿಸಿದ ಮತವು ತಾವು ಬೆಂಬಲಿಸಿದ ವ್ಯಕ್ತಿಗೇ ಸೇರಬೇಕು ಹಾಗೂ ಮತ ಎಣಿಕೆಯ ಪ್ರಕ್ರಿಯೆಯಲ್ಲಿ ಅದು ಪರಿಗಣನೆಗೆ ಒಳಪಡಬೇಕು. ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ರಾಜಕೀಯ ವಿವಾದದ ನಡುವೆಯೇ ಅವರ ಈ ಹೇಳಿಕೆ ಹೊರಬಿದ್ದಿದೆ.

More articles

Latest article

Most read