ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವುದು, ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್’ (UFBU) ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ, ಸೆಪ್ಟೆಂಬರ್ 28 ರಿಂದ 30 ರವರೆಗೆ (ಸೋಮವಾರದಿಂದ ಬುಧವಾರದವರೆಗೆ) ಮೂರು ದಿನಗಳ ಕಾಲ ಬ್ಯಾಂಕ್ ಗ್ರಾಹಕರು ಶಾಖೆ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಮುಷ್ಕರದಿಂದಾಗಿ ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ) ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಖಾಸಗಿ ವಲಯದ ಬ್ಯಾಂಕುಗಳು UFBU ಮುಷ್ಕರದಲ್ಲಿ ಭಾಗಿಯಾಗಿಲ್ಲ
ಮುಷ್ಕರದಿಂದ ಬ್ಯಾಂಕ್ ಶಾಖೆಗಳನ್ನು ಮುಚ್ಚಿದರೂ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳುವುದಿಲ್ಲ, ನೆಟ್ ಬ್ಯಾಂಕಿಂಗ್, ಯುಪಿಐ (UPI), ಮೊಬೈಲ್ ಬ್ಯಾಂಕಿಂಗ್ ಆ್ಯಪ್ಗಳು ಮತ್ತು ಎಟಿಎಂ (ATM) ಸೇರಿದಂತೆ ಡಿಜಿಟಲ್ ಹಾಗೂ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯಗಳು ಎಂದಿನಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ.ಎಂದು ಬ್ಯಾಂಕ್ಗಳು ತಮ್ಮ ಹಿಂದಿನ ಸೂಚನೆಗಳಲ್ಲಿ ತಿಳಿಸಿವೆ.
ಚೆಕ್ ಕ್ಲಿಯರೆನ್ಸ್, ನಗದು ಠೇವಣಿ, ಖುದ್ದಾಗಿ ನಡೆಸಬೇಕಾದ ಕೆವೈಸಿ (KYC) ಪ್ರಕ್ರಿಯೆಗಳು, ದಾಖಲೆಗಳ ಸಲ್ಲಿಕೆ, ಪರಿಶೀಲನೆ ಮತ್ತು ಖಾತೆಗೆ ಸಂಬಂಧಿಸಿದ ಕೆಲವು ಕೋರಿಕೆಗಳಿಗಾಗಿ ಶಾಖೆಯು ಪುನಃ ತೆರೆಯುವವರೆಗೆ ಕಾಯಬೇಕಾಗುತ್ತದೆ.

