SIT ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ವಕೀಲರ ಮಹತ್ವದ ಪತ್ರ: ತನಿಖೆಯ ಪ್ರತಿಯೊಂದು ಪ್ರಮುಖ ನಿರ್ದೇಶನಗಳು ಲಿಖಿತವಾಗಿ ಇರಲಿ

ಬೆಂಗಳೂರು/ಹೊಸದಿಲ್ಲಿ ಸೆ. 25: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (SIT) ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿರುವ (Advocate-on-Record) ಅಶುತೋಷ್ ದುಬೆ ಪತ್ರ ಬರೆದಿದ್ದು, ಹೊಸದಾಗಿ ನಡೆಯುತ್ತಿರುವ De-novo ತನಿಖೆಯಲ್ಲಿ ಯಾವುದೇ ಪ್ರಮುಖ ಮೇಲ್ವಿಚಾರಣಾ ನಿರ್ದೇಶನ, ಪೊಲೀಸ್ ಅಧಿಕಾರಿಗಳ ಸೂಚನೆ ಅಥವಾ ಕಾನೂನು ಅಭಿಪ್ರಾಯಗಳು ಮೌಖಿಕವಾಗಿ ಉಳಿಯದೆ ಅಧಿಕೃತ ದಾಖಲೆಯಲ್ಲಿ ಲಿಖಿತವಾಗಿ ದಾಖಲಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸೌಜನ್ಯ ಪ್ರಕರಣದ ನಂತರ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರು, CID ಹಾಗೂ ನಂತರ CBI ನಡೆಸಿದ್ದ ತನಿಖೆಗಳಲ್ಲಿ ಸಾಕ್ಷ್ಯ ಸಂಗ್ರಹ ಮತ್ತು ಮೌಲ್ಯಮಾಪನ ನಡೆದ ರೀತಿಯ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರವಾಗಿ ಗಮನಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ತನಿಖೆಯ ಪ್ರಕ್ರಿಯೆ ನ್ಯಾಯಾಲಯದ ಮುಂದೆ ಪರಿಶೀಲನೆಗೆ ಒಳಗಾದಾಗ ಕೆಲವು ಸಂಗತಿಗಳು ನ್ಯಾಯಾಲಯದ ಗಮನ ಸೆಳೆದಿದ್ದವು. ನಿಜವಾದ ಅಪರಾಧಿ ಅಥವಾ ಅಪರಾಧಿಗಳು ತನಿಖೆಯನ್ನು ಪ್ರಭಾವಿಸಿರಬಹುದೆಂಬ ಸಾಧ್ಯತೆಯನ್ನೂ ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ತನಿಖೆಯಲ್ಲಿನ ‘ಮೌಖಿಕ ಸೂಚನೆಗಳ’ ಬಗ್ಗೆ ಪ್ರಶ್ನೆ

ಪತ್ರದಲ್ಲಿ ಪ್ರಮುಖವಾಗಿ ತನಿಖಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ನೀಡಲಾಗುವ ಪ್ರಮುಖ ಸೂಚನೆಗಳು ಮೌಖಿಕವಾಗಿಯೇ ಉಳಿಯಬಾರದು ಎಂದು ಮನವಿ ಮಾಡಲಾಗಿದೆ. ಹಿಂದಿನ ತನಿಖೆಯ ಸಾಕ್ಷ್ಯಗಳನ್ನು ಉದಾಹರಣೆಯಾಗಿ ನೀಡಲಾಗಿದೆ.

ಮೊದಲನೆಯದಾಗಿ, PW-25 ಆಗಿದ್ದ ಅಂದಿನ PSI ಹಾಗೂ ಆರಂಭಿಕ ತನಿಖಾಧಿಕಾರಿ ಯೋಗೇಶ್ ಕುಮಾರ್ ಅವರು ಸೌಜನ್ಯ ಅವರ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ viscera ಸಂಗ್ರಹಿಸದಿರುವ ಕುರಿತು ನೀಡಿದ ಹೇಳಿಕೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮೃತದೇಹದ ಮೇಲೆ ligature mark ಕಾಣಿಸಿಕೊಂಡಿದ್ದರಿಂದ ಹಾಗೂ ಸಾವು strangulationನಿಂದ ಸಂಭವಿಸಿದೆ ಎಂದು ತಿಳಿದುಬಂದಿದ್ದರಿಂದ viscera ಸಂಗ್ರಹಿಸುವ ಅಗತ್ಯವಿಲ್ಲ ಎಂಬ ನಿರ್ಧಾರವನ್ನು “ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ” ನಡೆಸಿದ ನಂತರ ತೆಗೆದುಕೊಳ್ಳಲಾಗಿತ್ತು ಎಂದು ಯೋಗೇಶ್ ಕುಮಾರ್ ಹೇಳಿದ್ದರು.

ಆದರೆ, ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಇತ್ತು ಎಂದು ಅದೇ ಸಾಕ್ಷಿ ಹೇಳಿರುವುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ದರೂ viscera ಮತ್ತು ಜೀರ್ಣವಾಗದ ಆಹಾರದ ಮಾದರಿ ಸಂಗ್ರಹಿಸಲು ವೈದ್ಯರಿಗೆ ಯಾವುದೇ ಮನವಿ ನೀಡಲಾಗಿರಲಿಲ್ಲ ಎಂಬ ಅಂಶವನ್ನು ಪತ್ರ ಎತ್ತಿಹಿಡಿದಿದೆ.

‘ಹಿರಿಯ ಅಧಿಕಾರಿಗಳ ಸೂಚನೆ’ ಎಂದರೆ ಯಾರು? ಏನು ಸೂಚನೆ?

ಇದೇ ಅಂಶವನ್ನು ಹಿರಿಯ ನಾಯವಾದಿಗಳು ಗಂಭೀರವಾಗಿ ಪ್ರಶ್ನಿಸಿದ್ದಾರೆ.“ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ” ಎಂದು ಮಾತ್ರ ದಾಖಲಾಗಿದ್ದರೆ, ಸೂಚನೆ ನೀಡಿದವರು ಯಾರು? ಯಾವ ಹುದ್ದೆಯಲ್ಲಿ ಅವರು ಸೂಚನೆ ನೀಡಿದರು? ನಿಖರವಾಗಿ ಯಾವ ಸೂಚನೆ ನೀಡಲಾಯಿತು? ಸೂಚನೆ ಮೌಖಿಕವಾಗಿತ್ತೇ ಅಥವಾ ಲಿಖಿತವಾಗಿತ್ತೇ? ಆ ಸೂಚನೆ ನೀಡುವಾಗ ಯಾವ ದಾಖಲೆಗಳು ಅಥವಾ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿತ್ತು? ಆ ಸೂಚನೆಗೆ ಕಾರಣವೇನು? ತನಿಖಾಧಿಕಾರಿ ಸ್ವತಂತ್ರವಾಗಿ ತನ್ನ ನಿರ್ಧಾರ ಕೈಗೊಂಡರೇ? ಅಂತಿಮವಾಗಿ ಆ ಸೂಚನೆಯನ್ನು ಹೇಗೆ ಜಾರಿಗೆ ತರಲಾಯಿತು? ಎಂಬುದನ್ನು ಹಲವು ವರ್ಷಗಳ ನಂತರ ಖಚಿತಪಡಿಸಿಕೊಳ್ಳುವುದು ಕಷ್ಟವಾಗಬಹುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಒಳಉಡುಪು ಕುರಿತ ವಿಚಾರಣೆಯೂ ಪತ್ರದಲ್ಲಿ ಉಲ್ಲೇಖ

ಇದೇ ತನಿಖಾಧಿಕಾರಿ ಯೋಗೇಶ್ ಕುಮಾರ್ ಅವರ ಮತ್ತೊಂದು ಹೇಳಿಕೆಯನ್ನೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಮೃತದೇಹದ ಒಳಉಡುಪನ್ನು ಕುಟುಂಬದಿಂದ ಪಡೆಯುವ ಸಂದರ್ಭದಲ್ಲಿ, “ಮೃತರು ಯಾವ ರೀತಿಯ ಒಳಉಡುಪು ಧರಿಸುತ್ತಿದ್ದರು?” ಎಂದು ತಾವು ಶ್ರೀ ವಿಠ್ಠಲ್ ಗೌಡರನ್ನು ಕೇಳಿದ್ದಾಗಿ ಸಾಕ್ಷಿ ಹೇಳಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಂತರ ಮೃತರ ಮನೆಯಿಂದ ಒಳಉಡುಪನ್ನು ತರಿಸಲಾಗಿತ್ತು ಮತ್ತು ತಮ್ಮ ಸಿಬ್ಬಂದಿಗೆ ಅದನ್ನು ವಾಪಸ್ ನೀಡುವಂತೆ ಸೂಚಿಸಲಾಗಿತ್ತು ಎಂಬ ಹೇಳಿಕೆಯನ್ನೂ ಪತ್ರದಲ್ಲಿ ದಾಖಲಿಸಲಾಗಿದೆ.

‘ಒತ್ತಡದಲ್ಲಿ’ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು ಎಂಬ ಹೇಳಿಕೆ

ಪತ್ರದಲ್ಲಿ PW-34 ಡಾ. ರಶ್ಮಿ ಅವರ ಸಾಕ್ಷ್ಯವನ್ನೂ ಉಲ್ಲೇಖಿಸಲಾಗಿದೆ. ರಶ್ಮಿ ಅವರು ಸೌಜನ್ಯ ಅವರ ಮರಣೋತ್ತರ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಅವರ ಪ್ರಮಾಣೀಕೃತ ಹೇಳಿಕೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು “ಒತ್ತಡದಲ್ಲಿ” ನಡೆಸಲಾಗಿದೆ ಎಂದು ಹೇಳಿರುವ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪತ್ರದ ಪ್ರಕಾರ, ಹಿಂದಿನ ತನಿಖೆಯ ಸಾಕ್ಷ್ಯಗಳಲ್ಲಿ “ಒತ್ತಡದಲ್ಲಿ”, “ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ”, “ಹಿರಿಯ ಅಧಿಕಾರಿಗಳ ಸೂಚನೆಯಂತೆ” ಎಂಬ ಪದಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಪದಗಳ ಹಿಂದೆ ಇರುವ ನಿಖರ ವ್ಯಕ್ತಿ, ಸೂಚನೆ, ಕಾರಣ ಮತ್ತು ನಿರ್ಧಾರ ಪ್ರಕ್ರಿಯೆ ಅಧಿಕೃತ ದಾಖಲೆಗಳಲ್ಲಿ ಸ್ಪಷ್ಟವಾಗಿ ಲಭ್ಯವಿಲ್ಲದಿದ್ದರೆ, ಮುಂದಿನ ತನಿಖೆಯ ಸ್ವಾತಂತ್ರ್ಯವನ್ನು ನಂತರ ಪರಿಶೀಲಿಸುವುದು ಕಷ್ಟವಾಗಬಹುದು ಎಂಬುದು ಪತ್ರದ ಮುಖ್ಯ ಕಳವಳವಾಗಿದೆ.

SITಗೆ ಎರಡು ಪ್ರಮುಖ ನಿಯಮಗಳನ್ನು ರೂಪಿಸುವಂತೆ ಮನವಿ

ಈ ಹಿನ್ನೆಲೆಯಲ್ಲಿ SIT ಮುಖ್ಯಸ್ಥರು ತನಿಖಾ ತಂಡದ ಎಲ್ಲಾ ಅಧಿಕಾರಿಗಳಿಗೆ ಲಿಖಿತ ಆಂತರಿಕ ನಿಯಮಗಳನ್ನು ನೀಡಬೇಕು ಎಂದು ಅಶುತೋಷ್ ದುಬೆ ಮನವಿ ಮಾಡಿದ್ದಾರೆ.

  1. ತನಿಖೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮೇಲ್ವಿಚಾರಣಾ ಸೂಚನೆಗಳು ಲಿಖಿತವಾಗಿರಲಿ

ತನಿಖೆಯ ವಿಷಯ ಅಥವಾ ದಿಕ್ಕಿನ ಮೇಲೆ ಪರಿಣಾಮ ಬೀರುವ ಯಾವುದೇ ಸೂಚನೆ, ನಿರ್ದೇಶನ ಅಥವಾ ಸಲಹೆ — ಅದು ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಮಹಾನಿರೀಕ್ಷಕರು, ಗೃಹ ಇಲಾಖೆ, ಹಿರಿಯ ಪೊಲೀಸ್ ಅಧಿಕಾರಿಗಳು ಅಥವಾ SIT ಹೊರಗಿನ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಬಂದಿದ್ದರೂ — ಲಿಖಿತ ರೂಪದಲ್ಲಿ ನೀಡಬೇಕು ಮತ್ತು ಅಧಿಕೃತ ದಾಖಲೆಯಲ್ಲಿ ಸಂರಕ್ಷಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ಸೂಚನೆ ಮೊದಲು ಮೌಖಿಕವಾಗಿ ನೀಡಿದರೆ, ನಂತರ ಅದನ್ನು ಯಾರು ನೀಡಿದರು, ಯಾವ ಹುದ್ದೆಯಲ್ಲಿದ್ದರು, ಯಾವ ದಿನ ಮತ್ತು ಯಾವ ಸಮಯದಲ್ಲಿ ನೀಡಿದರು ಎಂಬ ವಿವರಗಳೊಂದಿಗೆ ಲಿಖಿತವಾಗಿ ದಾಖಲಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.

  1. ಸರ್ಕಾರಿ ವಕೀಲರ ಕಾನೂನು ಸಲಹೆಯೂ ಲಿಖಿತವಾಗಿರಲಿ

ತನಿಖೆಯ ನಿರ್ಧಾರಕ್ಕೆ ಪರಿಣಾಮ ಬೀರುವ ಯಾವುದೇ ಕಾನೂನು ಸಲಹೆ ಅಥವಾ ಅಭಿಪ್ರಾಯವನ್ನು ಸರ್ಕಾರಿ ಪರ ವಕೀಲರಿಂದ ಪಡೆದರೆ, ಅದನ್ನೂ ಲಿಖಿತವಾಗಿ ದಾಖಲಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಅಡ್ವೊಕೇಟ್ ಜನರಲ್, ಅಡಿಷನಲ್ ಅಡ್ವೊಕೇಟ್ ಜನರಲ್, ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಅಥವಾ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುವ ಯಾವುದೇ ವಕೀಲರಿಂದ ಸಲಹೆ ಪಡೆಯುವ ಸಂದರ್ಭದಲ್ಲಿ, ಯಾವ ಪ್ರಶ್ನೆ ಅಥವಾ ವಿಷಯವನ್ನು ವಕೀಲರ ಮುಂದೆ ಇಡಲಾಯಿತು? ಅದಕ್ಕೆ ವಕೀಲರು ನೀಡಿದ ಸಲಹೆ ಅಥವಾ ಅಭಿಪ್ರಾಯ ಏನು? ಎಂಬ ಅಂಶಗಳನ್ನು ಅಧಿಕೃತ ದಾಖಲೆಯಲ್ಲಿ ಉಳಿಸುವಂತೆ ಮನವಿ ಮಾಡಲಾಗಿದೆ.

ತನಿಖಾಧಿಕಾರಿಯ ಸ್ವತಂತ್ರ ನಿರ್ಧಾರಕ್ಕೆ ಧಕ್ಕೆ ಬರಬಾರದು

ವಕೀಲರಿಂದ ಕಾನೂನು ಅಭಿಪ್ರಾಯ ಪಡೆಯುವುದು ತನಿಖಾಧಿಕಾರಿಯ ಕಾನೂನುಬದ್ಧ ಜವಾಬ್ದಾರಿಯನ್ನು ಬದಲಿಸುವುದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

“ಹೊಸ ತನಿಖೆ ಸ್ವತಂತ್ರವಾಗಿದೆ ಎಂಬುದು ದಾಖಲೆಗಳಲ್ಲೂ ಕಾಣಬೇಕು”

De-novo ತನಿಖೆ ವಾಸ್ತವದಲ್ಲಿ ಹಿಂದಿನ ತನಿಖೆಯಿಂದ ಸ್ವತಂತ್ರವಾಗಿರಬೇಕು ಮಾತ್ರವಲ್ಲ, ಅದು ಸ್ವತಂತ್ರವಾಗಿ ನಡೆದಿರುವುದನ್ನು ಅಧಿಕೃತ ದಾಖಲೆಗಳ ಮೂಲಕವೂ ತೋರಿಸಲು ಸಾಧ್ಯವಾಗಬೇಕು ಎಂದು ವಕೀಲರು ಹೇಳಿದ್ದಾರೆ.

ಹಿಂದಿನ ಪ್ರಕರಣದ ದಾಖಲೆಗಳಲ್ಲಿ “ಒತ್ತಡದಲ್ಲಿ”, “ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ”, “ಹಿರಿಯ ಅಧಿಕಾರಿಗಳ ಸೂಚನೆಯಂತೆ” ಎಂಬ ಹೇಳಿಕೆಗಳಿರುವ ಹಿನ್ನೆಲೆಯಲ್ಲಿ, ಹೊಸ ತನಿಖೆಯಲ್ಲಿ ಯಾವುದೇ ಪ್ರಮುಖ ನಿರ್ದೇಶನ ಅಥವಾ ಕಾನೂನು ಸಲಹೆಯ ಮೂಲ ನಂತರ ಪತ್ತೆಹಚ್ಚಲು ಸಾಧ್ಯವಾಗುವಂತೆ ದಾಖಲೆ ನಿರ್ವಹಣೆ ಇರಬೇಕು ಎಂಬುದು ಪತ್ರದ ಒಟ್ಟಾರೆ ಉದ್ದೇಶವಾಗಿದೆ.

ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸತ್ಯವನ್ನು ನ್ಯಾಯಾಲಯದ ಮುಂದೆ ಅಂತಿಮವಾಗಿ ಇಡಲು ನಡೆಯುತ್ತಿರುವ De-novo ತನಿಖೆ ಸಂಪೂರ್ಣ ಸ್ವತಂತ್ರವಾಗಿ, ವೈಜ್ಞಾನಿಕವಾಗಿ, ಕಟ್ಟುನಿಟ್ಟಾಗಿ ಮತ್ತು ಕಾನೂನಿಗೆ ಅನುಗುಣವಾಗಿ ನಡೆಯಬೇಕು ಎಂಬ ಆಶಯವನ್ನು ಪತ್ರದ ಕೊನೆಯಲ್ಲಿ ವ್ಯಕ್ತಪಡಿಸಲಾಗಿದೆ. ಪತ್ರಕ್ಕೆ ಅಶುತೋಷ್ ದುಬೆ ಅವರು ಸಹಿ ಮಾಡಿದ್ದು, ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರ ಪರ Advocate-on-Record ಎಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

More articles

Latest article

Most read