ರಾಷ್ಟ್ರ ರಾಜಧಾನಿಯಲ್ಲಿ ನಿಲ್ಲದ ಅತ್ಯಾಚಾರ, 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ನವದೆಹಲಿ : ರಾಜಧಾನಿ ನವದೆಹಲಿ ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಆತ್ಯಚಾರಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದೀಗ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದ್ದು, ಪಾರ್ಕ್ ಒಂದರೊಳಗೆ ಪೊಲೀಸರೆಂದು ಸೋಗು ಹಾಕಿದ ಮೂವರು ವ್ಯಕ್ತಿಗಳು 17 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಈ ಭೀಕರ ಘಟನೆಯು ಸೋಮವಾರ ದಕ್ಷಿಣ ದೆಹಲಿಯ ಕಾಲಕಾಜಿ ಮಂದಿರದ ಬಳಿ ನಡೆದಿದೆ. ದೂರಿನ ಪ್ರಕಾರ, ಬಾಲಕಿಯು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ತನ್ನ 17 ವರ್ಷದ ಸ್ನೇಹಿತನೊಂದಿಗೆ ಕಾಲಕಾಜಿ ಮಂದಿರಕ್ಕೆ ಹೋಗಿದ್ದಳು.

ಪೂಜೆ ಸಲ್ಲಿಸಿದ ನಂತರ, ಅವರಿಬ್ಬರೂ ಸಂಜೆ 7:30 ರ ಸುಮಾರಿಗೆ ದೇವಾಲಯದ ಸಮೀಪವಿರುವ ಪಾರ್ಕ್‌ಗೆ ತೆರಳಿದರು. ಅಲ್ಲಿ 25 ರಿಂದ 30 ವರ್ಷ ವಯಸ್ಸಿನ ಮೂವರು ಆರೋಪಿಗಳು ಅವರನ್ನು ಸಮೀಪಿಸಿ, ತಾವು ಪೊಲೀಸರೆಂದು ಹೇಳಿಕೊಂಡರು.

ಆರೋಪಿಗಳು ಅವರಿಬ್ಬರಿಗೂ ಬೆದರಿಕೆ ಹಾಕಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬನು ಬಂದೂಕು ಮತ್ತು ಚಾಕುವಿನಿಂದ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದನು. ನಂತರ, ಇತರ ಇಬ್ಬರು ಆರೋಪಿಗಳು ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರು. ಬಳಿಕ ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಲ್ಕಾಜಿ ಮಂದಿರ ಮತ್ತು ಇಸ್ಕಾನ್ ದೇವಾಲಯವನ್ನು ಸಂಪರ್ಕಿಸುವ ಉದ್ಯಾನವನದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರದ ಕುರಿತು ರಾತ್ರಿ 8:45ಕ್ಕೆ ಪಿಸಿಆರ್ ಕರೆ ಬಂದಿತು ಮತ್ತು ಅದರ ಬೆನ್ನಲ್ಲೇ ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿತು ಎಂದು ಅವರು ತಿಳಿಸಿದರು.

ದೆಹಲಿಯ ನಿವಾಸಿಯಾಗಿರುವ ಆ ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದು, ಆಕೆಯ ಹೇಳಿಕೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಆರೋಪಿಯನ್ನು ಗುರುತಿಸಲು ಮತ್ತು ಘಟನೆಯ ಸರಣಿ ಕ್ರಮವನ್ನು ಪರಿಶೀಲಿಸಲು ಪೊಲೀಸರು ಉದ್ಯಾನವನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಘಟನೆ ನಡೆದ ಸಮಯದಲ್ಲಿ ಉದ್ಯಾನವನದ ಒಳಗೆ ಅಥವಾ ಸುತ್ತಮುತ್ತ ಇದ್ದಿರಬಹುದಾದ ವ್ಯಕ್ತಿಗಳ ಬಗ್ಗೆಯೂ ಅವರು ಮಾಹಿತಿ ಸಂಗ್ರಹಿಸಿದರು. ತನಿಖೆಯ ಭಾಗವಾಗಿ, ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ವಿವಿಧ ತಂಡಗಳನ್ನು ರಚಿಸಲಾಯಿತು. ಈ ಪೈಕಿ ಒಂದು ತಂಡಕ್ಕೆ, ಅಮರ್ ಕಾಲೋನಿಯ ಡಿಎಂ ಕಚೇರಿ ರಸ್ತೆಯ ಬಳಿ ಆರೋಪಿಯೊಬ್ಬನ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಾಯಿತು; ಅಲ್ಲಿ ಪೊಲೀಸ್ ತಂಡವು ಆತನನ್ನು ಸೆರೆಹಿಡಿಯಲು ಬಲೆ ಬೀಸಿತ್ತು.

More articles

Latest article

Most read