ಹಿರಿಯ ನಟ ಅನಂತ್‌ನಾಗ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯ ಗರಿ

ಬೆಂಗಳೂರು ಸೆ.16 : ಭಾರತೀಯ ಚಿತ್ರರಂಗದ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹಿರಿಯ ನಟ ಅನಂತ್‌ನಾಗ್ ಅವರು ಪುರಸ್ಕೃತರಾಗಿದ್ದಾರೆ. 2024ನೇ ಸಾಲಿನ ಪ್ರಶಸ್ತಿ ಗೌರವಕ್ಕೆ ಅನಂತನಾಗ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ.

 ಅನಂತ್‌ ನಾಗ್‌ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ್ದಾರೆ.   ಕನ್ನಡ, ಹಿಂದಿ, ಮರಾಠಿ ಸೇರಿದಂ ತೆ ಹಲವು ಭಾಷೆಗಳ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.  ಕಲಾತ್ಮಕ ಮತ್ತು ವಾಣಿಜ್ಯ ಮಾದರಿಯ ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ಅವರಿಗೆ ಪ್ರಶಸ್ತಿ ಒಲಿದಿರುವುದು ಕನ್ನಡ ಚಿತ್ರರಂ ಗಕ್ಕೆ ದೊರೆತ ಹೆಮ್ಮೆಯಾಗಿದೆ.

2026ರ ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜಿ.ವಿ. ಅಯ್ಯರ್ ನಿರ್ದೇಶನದ ಹಂಸಗೀತೆ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅವರು, ನಂತರ ದೊರೈ-ಭಗವಾನ್ ನಿರ್ದೇಶನದ ಸಾಲು ಸಾಲು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆಮಾತಾದರು. ‘ಚಂದನದ ಗೊಂಬೆ’, ನಾ ನಿನ್ನ ಬಿಡಲಾರೆ ಬೆಂಕಿಯ ಬಲೆಯಂತಹ ಚಿತ್ರಗಳು ಅವರನ್ನು ಸೂಪರ್ ಸ್ಟಾರ್ ಆಗಿ ಬೆಳೆಸಿದವು. ತಮ್ಮ ಸಹೋದರ ದಿವಂಗತ ಶಂಕರ್ ನಾಗ್ ಅವರೊಂದಿಗೆ ಸೇರಿ ಮಿಂಚಿನ ಓಟ, ಆಕ್ಸಿಡೆಂಟ್ ಮುಂತಾದ ಪ್ರಯೋಗಾತ್ಮಕ ಚಿತ್ರಗಳನ್ನು ನೀಡುವುದರ ಜೊತೆಗೆ, ವಿಶ್ವಾದ್ಯಂತ ಜನಪ್ರಿಯವಾದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲೂ ಅವರು ಅಭಿನಯಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು,  ಕೆಜಿಎಫ್ ಹಾಗೂ ಸರ್ಕಾರ ಹಿರಿಯ  ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರಗಳಲ್ಲಿನ ಅವರ ಪಾತ್ರಗಳು ಯುವ ಪೀಳಿಗೆಯನ್ನೂ ದೊಡ್ಡ ಮಟ್ಟದಲ್ಲಿ ಸೆಳೆದಿವೆ. ಚಿತ್ರರಂಗದ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಜನತಾ ದಳದೊಂದಿಗೆ ಗುರುತಿಸಿಕೊಂಡಿದ್ದ ಅವರು, ಜೆ.ಎಚ್. ಪಟೇಲ್ ಅವರ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

 ರಂಗಭೂಮಿ ಹಿನ್ನೆಲೆ:

ಮುಂಬೈ ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್ ನಾಗ್, ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರನ್ನು ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಗುರುತಿಸಿ ‘ಅಂಕುರ್’, ‘ನಿಶಾಂತ್’ ಮತ್ತು ‘ಮಂಥನ್’ ನಂತಹ ಹಿಂದಿಯ ಕಲಾತ್ಮಕ ಹಾಗೂ ಸಮಾಜಮುಖಿ ಚಿತ್ರಗಳಲ್ಲಿ ಅವಕಾಶ ನೀಡಿದರು.

ಚಿತ್ರ ರಂಗದ ಅನಂತ್‌ ನಾಗ್‌ ಸವೆಸಿದ ಹಾದಿ:

ಅನಂತ್ ನಾಗ್‌ ಅವರು 1948ರ ಸೆಪ್ಟಂಬರ್‌ 4ರಂದು  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಾಗರಕಟ್ಟೆಯಲ್ಲಿ ಜನಿಸಿದರು.  ಅವರು ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆ  ಸೇರಿದಂತೆ 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರೊ. ಪಿ.ವಿ.ನಂಜರಾಜ್ ಅರಸ್ ನಿರ್ದೇಶನದ ಸಂಕಲ್ಪ (1973) ಚಿತ್ರದ ಮೂಲಕ ನಾಗ್ ಬಣ್ಣ ಹಚ್ಚಿದರು. ಇದು ಅವರ ಚೊಚ್ಚಲ ಸಿನಿಮಾ. ಮೊದಲ ಚಿತ್ರ  ಸಂಕಲ್ಪ  ಏಳು ರಾಜ್ಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಶ್ಯಾಮ್ ಬೆನಗಲ್ ಅವರ ಅಂಕುರ್ (1974) ಮೂಲಕ  ಹಿಂದಿ ಚಿತ್ರರಂಗಕ್ಕೆ ಅವರ ಪ್ರವೇಶ  ಪಡೆದವರು.

ಕನ್ನಡದಲ್ಲಿ ವಾಣಿಜ್ಯವಾಗಿ ಯಶಸ್ಸು ಪಡೆದ ಮೊದಲ ಚಿತ್ರ  ಬಯಲು ದಾರಿ (1976),  ಬಳಿಕ ಕನ್ನೇಶ್ವರ ರಾಮ (1977), ನಾ ನಿನ್ನ ಬಿಡಲಾರೆ (1979), ಚಂದನದ ಗೊಂಬೆ (1979), ಬೆಂಕಿಯ ಬಲೆ (1983), ಹೆಂಡ್ತಿಗೆ ಹೇಳಬೇಡಿ (1989), ಗಣೇಶನ  ಮದುವೆ,  ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016), ರಾಜಕುಮಾರ (2017), ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು, (2018), ಕೆಜಿಎಫ್ ಅಧ್ಯಾಯ 1 (2018), ಕೆಜಿಎಫ್: ಅಧ್ಯಾಯ 2 (2022) ಮತ್ತು ಗಾಳಿಪಟ 2 (2022) ಚಿತ್ರಗಳಲ್ಲಿ ನಟಿಸಿದ್ದಾರೆ.  ಮತ್ತೊಬ್ಬ ನಟ ಶಂಕರ್‌ನಾಗ್‌ ಇವರ ಸಹೋದರ.

ಮೋದಿ ಅಭಿನಂದನೆ

ಕನ್ನಡದ ಮೇರು ನಟನಿಗೆ ಪ್ರಶಸ್ತಿ ಘೋಷಣೆಯಾದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ದಂತಕಥೆ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ಹಲವು ದಶಕಗಳಿಂದ, ಅವರ ಅಭಿನಯ, ಬಹುಮುಖ ಪ್ರತಿಭೆ ಮತ್ತು ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅಳಿಸಲಾದ ಗುರುತಾಗಿದೆ. ಅವರು ಮಾಡಿದ ಎಲ್ಲ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ಪ್ರಶಸ್ತಿ ಅವರಿಗೆ ಘೋಷಣೆಯಾಗಿದ್ದು ಒಬ್ಬ ವಿಶಿಷ್ಟ ಕಲಾವಿದನಿಗೆ ಸಿಕ್ಕ ನಿಜವಾದ ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದನೆ

ಕನ್ನಡ ಚಿತ್ರರಂಗದ ಹಿರಿಯ ನಟ, ಅಪ್ರತಿಮ ಕಲಾವಿದ ಹಾಗೂ ಬಹುಮುಖ ಪ್ರತಿಭೆಯ ಅನಂತ್‌ ನಾಗ್‌ ಅವರಿಗೆ ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 2024ನೇ ಸಾಲಿನ ದಾದಾಸಾಹೇಬ್‌ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಅಪಾರ ಕೊಡುಗೆ, ಸುದೀರ್ಘ ಕಲಾ ಪಯಣ ಹಾಗೂ ತಮ್ಮ ವಿಶಿಷ್ಟ ಅಭಿನಯದ ಮೂಲಕ ಭಾರತೀಯ ಸಿನಿರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಈ ಪ್ರತಿಷ್ಠಿತ ಗೌರವವನ್ನು ಘೋಷಿಸಿದ್ದು, ಶ್ರೀ ಅನಂತ್‌ ನಾಗ್‌ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅವರ ಕಲಾ ಪಯಣ ಮುಂದಿನ ಪೀಳಿಗೆಗಳಿಗೂ ಸದಾ ಸ್ಫೂರ್ತಿ.

ಎಚ್‌.ಡಿ.ಕುಮಾರಸ್ವಾಮಿ ಶ್ಲಾಘನೆ:

2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿರುವ ಕನ್ನಡನಾಡಿನ ಹೆಮ್ಮೆಯ ನಟರಾದ ಶ್ರೀ ಅನಂತ್ ನಾಗ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅನಂತ್ ನಾಗ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರು ಹಾಗೂ ಸಹಜ ಅಭಿನಯ, ಅಭಿವ್ಯಕ್ತಿಗೆ ಮತ್ತೊಂದು ಹೆಸರು. ಭಾರತೀಯ ಚಿತ್ರರಂಗದಲ್ಲಿ ಅಪರೂಪದ ಪ್ರತಿಭೆ. ಅಂತಹ ಸಾಧಕರಿಗೆ ದಾದಾಸಾಹೇಬ್ ಫಾಲ್ಕೆ ಗೌರವ ಸಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ವರನಟ ಡಾ.ರಾಜ್‌ಕುಮಾರ್ ಅವರ ನಂತರ ಕನ್ನಡ ಭುವನೇಶ್ವರಿಯ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಮುಡಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಶ್ರೀಯುತರಿಗೆ ಶುಭಾಶಯಗಳನ್ನು ಕೋರುತ್ತಾ, ಮುಂದಿನ ದಿನಗಳಲ್ಲಿ ಅವರಿಂದ ಕನ್ನಡ ಚಿತ್ರರಂಗಕ್ಕೆ, ನಾಡಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ.

More articles

Latest article

Most read