ಸಚಿವ ಸತೀಶ್‌ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ

ಬೆಂಗಳೂರು: ಸಚಿವ ಸತೀಶ್‌ ಜಾರಕಿಹೊಳಿ ಬೆಂಗಳೂರು ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದೆ. ಬೆಳ್ಳಂಬೆಳಗ್ಗೆ ಅರೆಸೇನಾ ತುಕಡಿಯ ಭದ್ರತೆಯಲ್ಲಿ ಬೆಂಗಳೂರಿನ ಕ್ರೆಸೆಂಟ್‌ ರಸ್ತೆಯಲ್ಲಿರುವ ಸರ್ಕಾರಿ ನಿವಾಸ, ಡಾಲರ್ಸ್‌ ಕಾಲೋನಿಯ ನಿವಾಸ ಸೇರಿದಂತೆ ಬೆಳಗಾವಿ, ಗೋಕಾಕ್‌, ಗೋವಾ, ಸೇರಿದಂತೆ 15 ಕಡೆ ದಾಳಿ ನಡೆದಿದೆ.

ಅನಧಿಕೃತವಾಗಿ ಅಬಕಾರಿ ಲೈಸನ್ಸ್‌ ಕೊಡಲು ಸಹಾಯ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆ ಈ ದಾಳಿ ನಡೆದಿದೆ.
ಸತೀಶ್‌ ಸಂಬಂಧಿ ಮಂಜುನಾಥ್‌ ಎಂಬುವರು ಅಬಕಾರಿ ಅಕ್ರಮದ ಮೇಲೆ ಜೂನ್‌ನಲ್ಲಿ ಇ.ಡಿ ದಾಳಿ ಮಾಡಿತ್ತು. 18 ಅನಧಿಕೃತ ಲೈಸೆನ್ಸ್‌ ಕೊಡುವುದಕ್ಕೆ ಸತೀಶ್‌ ಜಾರಕಿಹೊಳಿ ಸಹಾಯ ಮಾಡಿದ್ದರೆಂಬ ಆರೋಪ ಇದೆ.

More articles

Latest article

Most read