ಬೈಕ್‌ ಸವಾರನ ಮೇಲೆ ಹೆಲ್ಮೆಟ್‌ ನಿಂದ ಹೊಡೆದಿದ್ದ ಬಿಜೆಪಿ ಶಾಸಕನ ಮೇಲೆ ಎಫ್‌ ಐ ಆರ್

ಕಲಬುರಗಿ‌ ಸೆ.3: ಬಿಜೆಪಿ ಪ್ರತಿಭಟನೆ ವೇಳೆ ದ್ವಿಚಕ್ರ ವಾಹನ ಸವಾರನೊಬ್ಬನ ಮೇಲೆ ದರ್ಪ ಮೆರೆದ ಆರೋಪಕ್ಕೆ ಸಂಬಂಧಿಸಿದಂತೆ ಸೇಡಂ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ರಾಜ್‌ಕುಮಾರ್‌ ಪಾಟೀಲ್‌ ತೆಲ್ಕೂರ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಬಿಜೆಪಿ ವತಿಯಿಂದ ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಕಲಬುರಗಿ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಪ್ರತಿಭಟನೆಯಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಪ್ರತಿಭಟನಾಕಾರರ ನಡುವೆ ಸ್ಕೂಟರ್‌ನಲ್ಲಿ ತೆರಳಲು ಯತ್ನಿಸಿದ ಸವಾರನನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಸ್ಥಳಕ್ಕೆ ಬಂದ ಮಾಜಿ ಶಾಸಕ ತೆಲ್ಕೂರ್ ಸವಾರನ ಹೆಲ್ಮೆಟ್‌ ಕಿತ್ತು ನೆಲಕ್ಕೆ ಬಡಿದಿದ್ದರು. ಬಳಿಕ ಸ್ಕೂಟರ್‌ನ ಟೈರ್‌ಗಳ ಗಾಳಿಯನ್ನೂ ತೆಗೆದಿರುವ ದೃಶ್ಯಗಳು ವೈರಲ್‌ ಆಗಿವೆ.

ಘಟನೆ ವೇಳೆ ಪ್ರತಿಭಟನಾಕಾರರು ಸವಾರನನ್ನು ಸುತ್ತುವರಿದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸವಾರನನ್ನು ಸ್ಥಳದಿಂದ ಕರೆದೊಯ್ದು ಪರಿಸ್ಥಿತಿ ನಿಯಂತ್ರಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಸ್ಟೇಷನ್‌ ಬಜಾರ್‌ ಠಾಣೆ ಪೊಲೀಸರು ಮಾಜಿ ಶಾಸಕ ರಾಜ್‌ಕುಮಾರ್‌ ಪಾಟೀಲ್‌ ತೆಲ್ಕೂರ್‌ ಹಾಗೂ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರತಿಭಟನೆಗೆ ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ರಸ್ತೆಯಲ್ಲಿ ನಡೆಸಿದ್ದು, ವಾಹನ ಸವಾರರನ್ನು ಅಕ್ರಮವಾಗಿ ತಡೆದು, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪಗಳೂ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿವೆ ಎಂದು ವರದಿಯಾಗಿದೆ.

ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರ ವರ್ತನೆಯೇ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬೇಡಿಕೆಗಾಗಿ ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ಹಕ್ಕು; ಆದರೆ ಸಾರ್ವಜನಿಕರ ಸಂಚಾರ ತಡೆದು, ಅವರೊಂದಿಗೆ ದೈಹಿಕವಾಗಿ ವಾಗ್ವಾದ ನಡೆಸುವುದು ಅಥವಾ ಅವರ ವಸ್ತುಗಳನ್ನು ಹಾನಿಗೊಳಿಸುವುದು ಪ್ರಶ್ನಾರ್ಹ ಎಂಬ ಆಕ್ಷೇಪಗಳು ಕೇಳಿಬಂದಿವೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮಾಜಿ ಶಾಸಕರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

More articles

Latest article

Most read