ಬೆಂಗಳೂರು ಪಾರ್ಕಿಂಗ್‌ ನೀತಿ ಜಾರಿಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ

ಬೆಂಗಳೂರು : ನಗರದಲ್ಲಿ  ವಾಹನಗಳ ಪಾರ್ಕಿಂಗ್‌ಗಾಗಿ ಸರ್ಕಾರ 2021ರಲ್ಲಿ ರೂಪಿಸಿರುವ ಪಾರ್ಕಿಂಗ್‌ ನೀತಿಯನ್ನು ಜಾರಿಗೊಳಿಸಲು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಸಲಹೆ ಆಹ್ವಾನಿಸಿದೆ.

ನಗರದಲ್ಲಿ ನೋಂದಾಯಿತವಾಗಿರುವ 1.28 ಕೋಟಿ ವಾಹನಗಳು ಹಾಗೂ ಬೇರೆ ಕಡೆ ಸೋಂದಾಯಿತವಾಗಿ ನಗರದಲ್ಲಿ ಸಂಚರಿಸುತ್ತಿರುವ 15 ರಿಂದ  20 ಲಕ್ಷ ವಾಹನಗಳು ಇವೆ.  ಒಟ್ಟು 1.5.  ಕೋಟಿ ವಾಹನಗಳು ಇದ್ದು ಶೇ.95ರಷ್ಟು ಅವಧಿಯಲ್ಲಿ ಮನೆ, ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ವಾನಗಳು ನಿಲುಗಡೆಯಾಗಿರುತ್ತವೆ. ಹೀಗಾಗಿ ಈ ವಾಹನಗಳ ನಿರ್ವಹಣೆ ದೊಡ್ಡ ಸವಾಲಾಗಿದ್ದು ಇದನ್ನು ನಿವಾರಿಸಲು ಸರ್ಕಾರ ಪಾರ್ಕಿಂಗ್‌ ನೀತಿಯ ಕರಡು ರೂಪಿಸಿದ್ದು ಅದನ್ನು ಜಾರಿಗೆ ತರಲು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ.

ರಸ್ತೆಗಳ ಕೊರತೆ, ಕಿರಿದಾದ ರಸ್ತೆಗಳು ಮತ್ತು ಹೆಚ್ಚುತ್ತಿರುವ ಸಂಚಾರ ದಟ್ಟಣೆಯು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿವೆ. ವಾಹನಗಳ ಸಂಚಾರಕ್ಕಾಗಿ ನಿರ್ಮಿಸಲಾದ ರಸ್ತೆಗಳ ಬಹು ಭಾಗ ವಾಹನಗಳ ನಿಲುಗಡೆಗಷ್ಟೇ ಸೀಮಿತವಾಗಿದೆ. ವಾಹನಗಳ ನಿಲುಗಡೆಯಿಂದಾಗಿ ರಸ್ತೆಯ ಸಂಚಾರ ಸಾಮರ್ಥ್ಯವು ಅರ್ಧದಷ್ಟು ಕಡಿಮೆಯಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣದ ಅವಧಿಯು ಹೆಚ್ಚುತ್ತಿದೆ. ವಾಹನಗಳ ಅವ್ಯವಸ್ಥಿತ ನಿಲುಗಡೆಯಿಂದ ಪಾದಚಾರಿಗಳಿಗೆ ಅಡ್ಡಿಯುಂಟಾಗುತ್ತಿರುವುದಲ್ಲದೆ, ಮಕ್ಕಳು, ವಯಸ್ಸಾದವರು, ಮಹಿಳೆಯರು ಮತ್ತು ಸಾಮಾನ್ಯ ಜನರಿಗೆ ಹೆಚ್ಚಿನ ತೊಂದರೆಯಾಗು ಪಾದಚಾರಿಗಳ ಓಡಾಟಕ್ಕೆ ಆಗುವ ಅಡ್ಡಿಯಿಂದ ವಾಹನಗಳ ಬಳಕೆಯನ್ನು ದಿನೇದಿನೇ ಹೆಚ್ಚಿಸುತ್ತಿದೆ. ಸ್ಥಳೀಯರ, ಮಕ್ಕಳು ಮತ್ತು ವಯಸ್ಸಾದವರ ಸುರಕ್ಷಿತ ಬಳಕೆಗಾಗಿ ಇರುವ ವಸತಿ ಪ್ರದೇಶಗಳ ರಸ್ತೆಗಳು ಖಾಸಗಿ ವಾಹನಗಳ ಪಾಲಾಗುತ್ತಿವೆ. ಸಾರ್ವಜನಿಕರೆಲ್ಲರಿಗೂ ಸೇರಿದ ರಸ್ತೆಗಳು ಬಹುತೇಕ ಖಾಸಗಿ ಉಪಯೋಗಕ್ಕೆ ಸೀಮಿತವಾಗಿವೆ.

ರಸ್ತೆಗಳು ಅಮೂಲ್ಯ ಸಾರ್ವಜನಿಕ ಆಸ್ತಿ. ಇವುಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ. ಈ ಆಸ್ತಿಗಳು ಎಲ್ಲರಿಗೂ ಸಮಾನವಾಗಿ ಸಿಗಬೇಕಾದರೆ ಖಾಸಗಿ ವಾಹನಗಳ ನಿಲುಗಡೆಗಾಗಿ ಬಳಸುವುದನ್ನು ನಿಯಂತ್ರಿಸಬೇಕಾಗುತ್ತದೆ. ಖಾಸಗಿ ವಾಹನಗಳಿಗೆ ನಿಲುಗಡೆ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯು ಪ್ರಮುಖವಾಗಿ ವಾಹನ ಮಾಲೀಕರದ್ದಾಗಿದ್ದು, ಸಾರ್ವಜನಿಕ ಸ್ಥಳಗಳ ಮೇಲಿನ ಸಾರ್ವಜನಿಕರ ಹಕ್ಕುಗಳು, ಖಾಸಗಿ ನಿಲುಗಡೆಯ ಅಗತ್ಯಗಳಿಗೆ ಅಧೀನವಾಗತಕ್ಕದ್ದಲ್ಲ. ಸಾರ್ವಜನಿಕ ಸ್ಥಳಗಳ ಬಳಕೆಯಲ್ಲಿ ವಾಹನ ಮಾಲೀಕರು ಮತ್ತು ವಾಹನ ಮಾಲೀಕರಲ್ಲದವರ ಹಕ್ಕುಗಳ ನಡುವೆ ಸಮತೋಲನ ಇರಬೇಕಾಗುತ್ತದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಲ್ಲಿ  ವಾಹನಗಳ ಸರಾಸರಿ ವೇಗ ಗಂಟೆಗೆ 15ಕಿ.ಮೀ. ಇದ್ದರೆ, ಸರ್ಕಾರಿ ಬಸ್‌ಗಳ ಸರಾಸರಿ ವೇಗ ಗಂಟೆಗೆ 10 ಕಿ.ಮೀ. ಇದೆ.ಸಂಚಾರ ಹದಗೆಡಲು ಪ್ರಮುಖ ಕಾರಣಗಳಲ್ಲಿ ಅನಿಯಂತ್ರಿತ ವಾಹನ ನಿಲುಗಡೆಯು ಒಂದಾಗಿರುತ್ತದೆ. ಈ ಸಮಸ್ಯೆಗಳ ಕುರಿತು 19 ಮಾರ್ಚ್ 2026ರಂದು ಅಂದಿನ ಉಪಮುಖ್ಯಮಂತ್ರಿ ಹಾಗೂ ಪ್ರಸ್ತುತ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ, ಬೆಂಗಳೂರಿನ ಎಲ್ಲಾ ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚರ್ಚಿಸಲಾಯಿತು. ಸದರಿ ಸಭೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂಬುದನ್ನು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳು ಸೆ.10ರೊಳಗೆ ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.ಇ-ಮೇಲ್ : [email protected]ಗೆ ಸಲ್ಲಿಸಬಹುದು.

More articles

Latest article

Most read