ಬೆಂಗಳೂರಿನಲ್ಲಿ ಅವಳಿ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ, ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಂಗಳೂರು: ದಕ್ಷಿಣ ಬೆಂಗಳೂರಿನ  ವಾಜರಹಳ್ಳಿಯಲ್ಲಿ ಮಂಗಳವಾರ ನಾಲ್ಕು ತಿಂಗಳ ಅವಳಿ ಶಿಶುಗಳನ್ನು ಸಾಯಿಸಿ, ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ನಡೆದಿದೆ.
ಮದುವೆಯಾಗಿ  ಸುಮಾರು 20 ವರ್ಷಗಳ ಬಳಿಕ ಐವಿಎಫ್‌ ಮೂಲಕ ಮಕ್ಕಳನ್ನು ಪಡೆದಿದ್ದ ಮಹಿಳೆಯೊಬ್ಬರು ಹೆರಿಗೆಯ ನಂತರದ ಹಾರ್ಮೋನ್‌ಗಳ ಅಸಮತೋಲನದಿಂದ ಮಾನಸಿಕವಾಗಿ ಕುಗ್ಗಿದ್ದ ಹಿನ್ನಲೆ ನಾಲ್ಕು ತಿಂಗಳ ಅವಳಿ ಮಕ್ಕಳನ್ನು ನೀರಿನಲ್ಲಿ ಮುಳಗಿಸಿ ತಾವು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.   

ರಿಯಲ್ ಎಸ್ಟೇಟ್ ಉದ್ಯಮಿ ರಾಮಲಿಂಗಪ್ಪ (50) ಅವರು ನೀಡಿರುವ ದೂರಿನ ಪ್ರಕಾರ, ಮೇ 5 ರಂದು ಐವಿಎಫ್   ಚಿಕಿತ್ಸೆಯ ಮೂಲಕ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ನಂತರ ಅವರ ಪತ್ನಿ ಉಮಾದೇವಿ (40) ಅಸಹಜ ವರ್ತನೆ ತೋರುತ್ತಿದ್ದರು ಮತ್ತು ಅದಕ್ಕಾಗಿ ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಈ ದಂಪತಿ 2002ರಲ್ಲಿ ವಿವಾಹವಾಗಿದ್ದರು.

ಹೆರಿಗೆಯ ನಂತರದ ಒಂದೂವರೆ ತಿಂಗಳ ಅವಧಿಯಲ್ಲಿ ಉಮಾದೇವಿ ಮಕ್ಕಳು ಹಾಗೂ ಸಂಸಾರದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರು ಮತ್ತು ತಮಗೆ ಆಶ್ರಮವೊಂದಕ್ಕೆ ಸೇರಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ರಾಮಲಿಂಗಪ್ಪ ತಿಳಿಸಿದ್ದಾರೆ. ನಂತರ ಅವರನ್ನು ರಘುವನಹಳ್ಳಿ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು.
ಅಲ್ಲಿ ವೈದ್ಯರು ಅವರ ವರ್ತನೆಗೆ ‘ಪ್ರಸವೋತ್ತರ ಖಿನ್ನತೆ’ (postpartum depression) ಮತ್ತು ಹೆರಿಗೆಯ ನಂತರದ ಹಾರ್ಮೋನ್ ಅಸಮತೋಲನ ಕಾರಣವಿರಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಮಂಗಳವಾರ ಮಧ್ಯಾಹ್ನ ಸುಮಾರು 2.45ರ ಸುಮಾರಿಗೆ ರಾಮಲಿಂಗಪ್ಪ ಮನೆಗೆ ಮರಳಿದಾಗ ಒಂದು ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಬಾಗಿಲನ್ನು ಬಲವಂತವಾಗಿ ತೆರೆದಾಗ, ಉಮಾದೇವಿ ದುಪಟ್ಟಾದಿಂದ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿತು ಮತ್ತು ಅವರನ್ನು ರಕ್ಷಿಸಲಾಯಿತು. ಅದೇ ಕೋಣೆಯೊಳಗೆ ಅವಳಿ ಶಿಶುಗಳು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದವು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. .
ಉಮಾದೇವಿ ಮಕ್ಕಳನ್ನು ನೀರಿನಿಂದ ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಂದಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ತಲಘಟ್ಟಪುರ ಪೊಲೀಸರು ಬಿಎನ್‌ಎಸ್ (BNS) ಸೆಕ್ಷನ್ 103ರ (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

More articles

Latest article

Most read