ಹೊಶಿಯಾರ್‌ಪುರ : 11 ವರ್ಷದ ಬಾಲಕಿಯ ಮೇಲೆ ಆತ್ಯಾಚಾರವೆಸಗಿದ ಆರೋಪದಡಿ ಇಲ್ಲಿನ ಸರ್ಕಾರಿ ಶಾಲೆಯೊಂದರ 52 ವರ್ಷದ ಮುಖ್ಯೋಪಾಧ್ಯಾಯರನ್ನು ಬಂಧಿಸಲಾಗಿದೆ.
ಆಗಸ್ಟ್ 11 ರಂದು ಮಧ್ಯಾಹ್ನ 1.30 ರಿಂದ 2.30 ರ ನಡುವೆ ಗ್ರಾಮದ ಸ್ಮಶಾನದ ಬಳಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ (POCSO) ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹರಿಯಾಣ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ಹಾಗೂ ಸಬ್-ಇನ್ಸ್‌ಪೆಕ್ಟರ್ ಗುರ್ಬಚನ್ ಸಿಂಗ್ ತಿಳಿಸಿದ್ದಾರೆ.

