ಕೃತಿ ಸನೋನ್ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ: ಮಹಿಳೆ ಧರಿಸುವ ಬಟ್ಟೆಯನ್ನು ಇನ್ನೊಬ್ಬರು ನಿಯಂತ್ರಿಸಬಾರದು

ನವದೆಹಲಿ: ರಕ್ಷಾಬಂಧನದ ಜಾಹೀರಾತಿನಲ್ಲಿ ನಟಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಉಂಟಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೃತಿ ಸನೋನ್ ಪರವಾಗಿ ನಿಂತಿದ್ದಾರೆ. ಮಹಿಳೆಯರು ಏನು ಧರಿಸಬೇಕು, ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದನ್ನು ಮತ್ತೊಬ್ಬರು ನಿಯಂತ್ರಿಸಬಾರದು ಎಂದು ಅವರು ಹೇಳಿದ್ದಾರೆ.

ರಕ್ಷಾಬಂಧನದ ಹಿನ್ನೆಲೆಯಲ್ಲಿ ಜ್ಯುವೆಲ್ಲರಿ ಬ್ರ್ಯಾಂಡ್‌ವೊಂದು ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಕೃತಿ ಸನೋನ್ ಇಂಡೋ-ವೆಸ್ಟರ್ನ್ ಶೈಲಿಯ ಉಡುಪು ಧರಿಸಿ ತಮ್ಮ ಸಹೋದರನಿಗೆ ರಾಖಿ ಕಟ್ಟುವ ದೃಶ್ಯವಿದೆ. ಇದೇ ಜಾಹೀರಾತಿನಲ್ಲಿ ತಮ್ಮ ಸಾಕು ನಾಯಿಗೂ ಕೃತಿ ರಾಖಿ ಕಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಕೆಲವರು ರಕ್ಷಾಬಂಧನದಂತಹ ಸಾಂಪ್ರದಾಯಿಕ ಹಬ್ಬದ ಸಂದರ್ಭದಲ್ಲಿ ಇಂತಹ ಉಡುಪು ಮತ್ತು ಜಾಹೀರಾತಿನ ಪರಿಕಲ್ಪನೆ ಸೂಕ್ತವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.

ಈ ವಿಚಾರವಾಗಿ ನಟಿ ಕಂಗನಾ ರಣಾವತ್ ಸೇರಿದಂತೆ ಕೆಲವರು ಕೃತಿ ಸನೋನ್ ಅವರ ಉಡುಪಿನ ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜಾಹೀರಾತಿನ ಉಡುಪು ರಕ್ಷಾಬಂಧನದಂತಹ ಕುಟುಂಬ ಹಾಗೂ ಸಾಂಪ್ರದಾಯಿಕ ಆಚರಣೆಗೆ ಹೊಂದಿಕೆಯಾಗುವುದಿಲ್ಲ ಎಂಬುದು ಟೀಕಾಕಾರರ ವಾದವಾಗಿತ್ತು.

ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಕೃತಿ ಸನೋನ್, ಹಬ್ಬಗಳ ನಿಜವಾದ ಅರ್ಥವು ನಾವು ಧರಿಸುವ ಬಟ್ಟೆಯಲ್ಲ, ಬದಲಾಗಿ ಸಂಪ್ರದಾಯದ ಬಗ್ಗೆ ಹೊಂದಿರುವ ಭಾವನೆ ಮತ್ತು ಅರ್ಥದಲ್ಲಿದೆ ಎಂದು ಹೇಳಿದ್ದಾರೆ. ಮಹಿಳೆಯೊಬ್ಬಳ ಸಂಸ್ಕೃತಿ ಮತ್ತು ಪರಂಪರೆಯನ್ನು ಆಕೆ ಧರಿಸುವ ಬಟ್ಟೆಯ ಆಧಾರದ ಮೇಲೆ ನಿರ್ಧರಿಸುವುದನ್ನು ಪ್ರಶ್ನಿಸಿದ ಅವರು, ಮಹಿಳೆಯರಿಗೆ ಏನು ಧರಿಸಬೇಕು ಎಂದು ಹೇಳುವುದನ್ನು ಸಮಾಜ ಯಾವಾಗ ನಿಲ್ಲಿಸುತ್ತದೆ ಎಂದು ಪ್ರಶ್ನಿಸಿದ್ದರು.

ಇದೀಗ ಕೃತಿ ಅವರ ಈ ಪ್ರತಿಕ್ರಿಯೆಯನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಮಹಿಳೆಯ ಸ್ವಾತಂತ್ರ್ಯವನ್ನು ಸಮರ್ಥಿಸಿದ್ದಾರೆ. “ಮಹಿಳೆ ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ” ಎಂಬ ಸಂದೇಶ ನೀಡಿರುವ ಅವರು, ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ಮಹಿಳೆಯರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಜೊತೆಗೆ ‘Smash The Patriarchy’ ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.

ರಾಹುಲ್ ಗಾಂಧಿ ಅವರ ಹೇಳಿಕೆ ಇದೀಗ ರಕ್ಷಾಬಂಧನ ಜಾಹೀರಾತಿನ ವಿವಾದಕ್ಕೆ ಮತ್ತಷ್ಟು ರಾಜಕೀಯ ಮತ್ತು ಸಾಮಾಜಿಕ ಆಯಾಮ ನೀಡಿದೆ. ಒಂದು ಕಡೆ ಸಾಂಪ್ರದಾಯಿಕ ಹಬ್ಬಗಳನ್ನು ಪ್ರತಿಬಿಂಬಿಸುವಾಗ ಸಾಂಸ್ಕೃತಿಕ ಸೂಕ್ಷ್ಮತೆಯನ್ನು ಕಾಪಾಡಬೇಕು ಎಂಬ ವಾದ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರ ಉಡುಪು ಮತ್ತು ವೈಯಕ್ತಿಕ ಆಯ್ಕೆಯ ಮೇಲೆ ಸಮಾಜದ ನಿಯಂತ್ರಣ ಇರಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

More articles

Latest article

Most read