ವೀಸಾ ಮುಗಿದ ನಂತರವೂ ನೆಲೆಸಿದ್ದ 446 ವಿದೇಶೀಯರ ವಿರುದ್ಧ ಕ್ರಮ: ಗೃಹ ಸಚಿವ ಪ್ರಿಯಂಕ್ ಖರ್ಗೆ

ಬೆಂಗಳೂರು ಆ. 20: ವೀಸಾ ಮುಗಿದ ನಂತರವೂ ನೆಲೆಸಿದ್ದ 446 ವಿದೇಶೀಯರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಂಕ್ ಖರ್ಗೆ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಗುರುವಾರ (ಆಗಸ್ಟ್ 20) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ ಸದಸ್ಯ ಶ್ರೀ ಆರ್.ಎನ್. ಗೋಪಿನಾಥ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವ ಪ್ರಿಯಂಕ್ ಖರ್ಗೆ ಉತ್ತರಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಸ್ತುತ 5,304 ವಿದೇಶಿಯರು ನೆಲೆಸಿದ್ದು, ಅವರಲ್ಲಿ 446 ಮಂದಿ ವೀಸಾ ಅವಧಿ ಮುಗಿದ ನಂತರವೂ (ಓವರ್‌ಸ್ಟೇ) ಇಲ್ಲಿಯೇ ಉಳಿದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ವಿದೇಶಿಯರಿಗೆ ಶಾಶ್ವತ ನಿವಾಸ ಅನುಮತಿ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಅಕ್ರಮವಾಗಿ ನುಸುಳಿ ನೆಲೆಸಿರುವ ವಿದೇಶಿಯರ ನಿಖರ ಸಂಖ್ಯೆ ಲಭ್ಯವಿಲ್ಲ. ಆದರೆ ಕಳೆದ ಮೂರು ವರ್ಷಗಳಲ್ಲಿ ಒಟ್ಟು 911 ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಇವರಲ್ಲಿ ಬಾಂಗ್ಲಾದೇಶದವರು 868, ಪಾಕಿಸ್ತಾನದವರು 20, ನೈಜೀರಿಯಾದವರು 13, ಶ್ರೀಲಂಕಾದವರು 8, ಮಯನ್ಮಾರ್ ಮತ್ತು ಉಗಾಂಡಾದವರು ತಲಾ ಒಬ್ಬರು ಇದ್ದಾರೆ.

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ವಿದೇಶಿಯರ ಸಂಖ್ಯೆ 365. ಇವರಲ್ಲಿ ನೈಜೀರಿಯಾದವರು 135, ಬಾಂಗ್ಲಾದೇಶದವರು 48, ನೇಪಾಳದವರು 44, ಪಾಕಿಸ್ತಾನದವರು 20, ಐವರಿ ಕೋಸ್ಟ್ ಮತ್ತು ಉಗಾಂಡಾದವರು ತಲಾ 13, ದಕ್ಷಿಣ ಆಫ್ರಿಕಾದವರು 11 ಹಾಗೂ ಇತರ ದೇಶಗಳವರು ಸೇರಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ವೀಸಾ ಓವರ್‌ಸ್ಟೇ ಮಾಡಿದವರ ವಿರುದ್ಧ ಡಿಪಿಎಂ (ಡಿಸ್ಟ್ರಿಕ್ಟ್ ಪೊಲೀಸ್ ಮಾಡ್ಯೂಲ್) ಮತ್ತು ಎಫ್‌ಐಪಿ (ಫಾರಿನರ್ಸ್ ಐಡೆಂಟಿಫಿಕೇಶನ್ ಪೋರ್ಟಲ್)ನಲ್ಲಿ ನೋಂದಣಿ ಮಾಡಿ, ಎಫ್‌ಆರ್‌ಆರ್‌ಓ ಅಧಿಕಾರಿಗಳ ಸಮನ್ವಯದೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

More articles

Latest article

Most read