ನಮ್ಮ ಸಂಸ್ಕೃತಿ, ಧರ್ಮ ಯಾವುದು ಎಂದು ಯತೀಂದ್ರ ತಮ್ಮ ತಾಯಿಯ ಬಳಿ ಕೇಳಲಿ : ಶೋಭಾ ಕರಂದ್ಲಾಜೆ ತಿರುಗೇಟು

ಮೈಸೂರು : ಸಚಿವ ಯತೀಂದ್ರ ಹೋಗಿ  ತನ್ನ ತಾಯಿಗೆ  ನಾವು ಯಾರು,  ನಮ್ಮ ಸಂಸ್ಕೃತಿ ಯಾವುದು,  ನಮ್ಮ ಧರ್ಮ ಯಾವುದು,  ನಾವು ಯಾವುದನ್ನು ಆಚರಣೆ  ಮಾಡುತ್ತೇವೆ ಎಂಬ ಪ್ರಶ್ನೆಯನ್ನು ಯತೀಂದ್ರ ಅವರ ತಾಯಿಯ ಬಳಿ ಕೇಳಲಿ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಕಟುವಾಗಿ ಟೀಕಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಮಾತನಾಡುತ್ತಾ ಭಾರತ ಹಿಂದು ರಾಷ್ಟ್ರ ಆಗಬಾರದು ಎಂಬ ಸಚಿವ ಯತೀಂದ್ರ ಹೇಳಿಕೆಗೆ  ಹೀಗೆ  ತಿರುಗೇಟು ನೀಡಿದ ಸಚಿವೆ, ಯತೀಂದ್ರರನ್ನು ಹೆತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿ ಅವರೇ ಮಗನಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದರು.

 ಈ ಸಂಸ್ಕೃತಿ ಈ ಧರ್ಮ ಉಳಿಸುವವರಿಗೆ ತಾಯಿ ಚಾಮುಂಡಿ ಶಕ್ತಿ ಕೊಡಲಿ. ಮಹರಾಜರು ಈ ನೆಲದ ಸಂಸ್ಕೃತಿ ಧರ್ಮವನ್ನು ಉಳಿಸಿದರು.ಇವತ್ತು ಸರ್ಕಾರ ನಡೆಸುವವರು ಕೂಡ ಅದೇ ಸ್ಥಾನದಲ್ಲಿ ಇರುತ್ತಾರೆ. ಸಂಸ್ಕೃತಿ ಉಳಿಸುವವರಿಗೆ ತಾಯಿ ಆಶೀರ್ವಾದ ಇರಲಿ ಎಂಬ ಅಶಯವನ್ನು ವ್ಯಕ್ತಪಡಿಸಿದರು.

 ಹೆಚ್ಚು ಡಿಲಿಟ್‌ ಆಗಿರುವುದು ಕರ್ನಾಟಕದಲ್ಲಿ

ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳು ಡಿಲಿಟ್ ಆಗಿರುವುದು ಕರ್ನಾಟಕದಲ್ಲಿ ಮಾತ್ರ.ಅದರಲ್ಲೂ ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮತಗಳು ಡಿಲಿಟ್ ಆಗಿವೆ. ಜನ ತಮ್ಮ ಸ್ವಂತ ಊರುಗಳಲ್ಲಿ ಮತ ಉಳಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರು ಎಲ್ಲಿದ್ದರೂ ಕನ್ನಡಿಗರೇ.ಎಲ್ಲಾದರೂ ಇರಲಿ ಮತದಾರರಾಗಿರಲಿ ಎಂದು ಎಸ್‌ಐಆರ್‌ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು.

More articles

Latest article

Most read