ಎಸ್‌ಐಆರ್ : ಸ್ಥಳಾಂತರಗೊಂಡ ಮತದಾರರನ್ನು ಡಿಲೀಟೆಡ್ ಎಂದು ಪರಿಗಣಿಸುವುದು ಅಪರಾಧ: ನೂರ್ ಶ್ರೀಧರ್

ಬೆಂಗಳೂರು : ಬಾಡಿಗೆ ಮನೆ ಬದಲಾಯಿಸುವುದು, ದುಡಿಯಲು ಬೇರೆಡೆ ಹೋಗುವುದು ಅಕ್ರಮವಲ್ಲ. ಇಡೀ ದೇಶವೇ ಇದ್ದ ಸ್ಥಳದಲ್ಲಿ ಉದ್ಯೋಗಗಳಲ್ಲಿದೆ ಅಲೆಮಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಬಿಎಲ್‌ಒ ಬಂದಾಗ ಮನೆಯಲ್ಲಿ ಇರಲಿಲ್ಲ, ಬೇರೆಡೆ ವರ್ಗಗೊಂಡಿದ್ದಾರೆಂಬ ಕಾರಣಕ್ಕೆ ಮತಪಟ್ಟಿಯಿಂದ ತೆಗೆಯುವುದು ಸಾಮೂಹಿಕ ಮತ ಹತ್ಯೆ ಎಂದು ಎದ್ದೇಳು ಕರ್ನಾಟಕದ ಪದಾಧಿಕಾರಿ ನೂರ್ ಶ್ರೀಧರ್ ಹೇಳಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಡಿಗೆ ಮನೆ ಬದಲಾಯಿಸುವುದು, ದುಡಿಯಲು ಬೇರೆಡೆ ಹೋಗುವುದು ಅಕ್ರಮವಲ್ಲ. ಇಡೀ ದೇಶವೇ ಇದ್ದ ಸ್ಥಳದಲ್ಲಿ ಉದ್ಯೋಗಗಳಲ್ಲಿದೆ ಅಲೆಮಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಬಿಎಲ್‌ಒ ಬಂದಾಗ ಮನೆಯಲ್ಲಿ ಇರಲಿಲ್ಲ, ಬೇರೆಡೆ ವರ್ಗಗೊಂಡಿದ್ದಾರೆಂಬ ಕಾರಣಕ್ಕೆ ಮತಪಟ್ಟಿಯಿಂದ ತೆಗೆಯುವುದು ಸಾಮೂಹಿಕ ಮತ ಹತ್ಯೆ. ಈ ಮತ ಹತ್ಯೆಯ ದೋಷಿಗಳು ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರ ಎಂದರು.

ಎಸ್‌ಐಆರ್‌ನ ಮತ ಪರಿಶೀಲನೆ ಮಾಡುವ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ತಲುಪಿದೆ. ರಾಜ್ಯದ 1.10 ಕೋಟಿ (ಶೇ.19.95) ಮತದಾರರು ಡಿಲೀಟ್ ಪಟ್ಟಿಯಲ್ಲಿದ್ದಾರೆ. ಪ್ರತಿ ಐದು ಜನರಲ್ಲಿ ಒಬ್ಬರು ಪಟ್ಟಿಯಿಂದ ಹೊರಹೋಗುವ ಎಲ್ಲ ಸಾಧ್ಯತೆಗಳೂ ಇವೆ. ಬೆಂಗಳೂರಿನ ಮತದಾರರ ಪಟ್ಟಿಯಲ್ಲಿನ ಸರಾಸರಿ ಶೇ.45-50ರಷ್ಟು ಮಂದಿ ಕಾಣೆಯಾಗಲಿದ್ದಾರೆ. ಗಡಿಭಾಗಗಳಲ್ಲಿರುವ ಹಾಗೂ ವಲಸೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿಯೂ ಬೃಹತ್ ಸಂಖ್ಯೆಯ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ನೂರ್ ಶ್ರೀಧರ್ ಆತಂಕ ವ್ಯಕ್ತಪಡಿಸಿದರು.

ಜಮಾತೆ ಇಸ್ಲಾಮ್ ಹಿಂದ್‌ನ ಪದಾಧಿಕಾರಿ ಮುಹಮ್ಮದ್ ಯೂಸಫ್ ಕನ್ನಿ ಮಾತನಾಡಿ, ನೀವು ಡಿಲೀಟ್ ಮಾಡಲು ಹೊರಟಿರುವ ಶೇ.20ರಷ್ಟು ಮತದಾರರಲ್ಲಿ ಶೇ.15ರಷ್ಟು ಜನ ಬೇರೆ ಕಡೆಗೆ ಸ್ಥಳಾಂತರಗೊಂಡಿರುವವರು ಮತ್ತು ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಮನೆಯಲ್ಲಿ ಇಲ್ಲದವರು. ಅಂದರೆ ಸತ್ತವರೂ ಅಲ್ಲ, ಎರಡು ಕಡೆ ನೊಂದಾವಣಿ ಆದವರೂ ಅಲ್ಲ. ಅವರೆಲ್ಲರೂ ಜೀವಂತ ಮತದಾರರು. ರಾಜ್ಯದ ಹೆಚ್ಚು ಕಡಿಮೆ ಒಂದು ಕೋಟಿ ಜೀವಂತ ಮತದಾರರನ್ನು ನೀವು ಡಿಲೀಟ್ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಎಎಸ್‌ಡಿಡಿಒ (ಗೈರು, ಸ್ಥಳಾಂತರ, ಮೃತರು, ನಕಲಿ, ಇತರೆ)ನಲ್ಲಿ ಅಂಕಿ ಅಂಶ ನೀಡಿದ್ದೀರಿ. ಇದರಲ್ಲಿ ‘ಇತರೆ’ ಎಂದರೆ ಯಾರು? ನೀವು ಪತ್ತೆ ಹಚ್ಚಿದ ಬಾಂಗ್ಲೇದೇಶಿ ಸೇರಿದಂತೆ ಹೊರದೇಶದ ನುಸುಳುಕೋರರ ಸಂಖ್ಯೆ ಎಷ್ಟು? ಈ ಇಡೀ ಪ್ರಕ್ರಿಯೆ ಒಳ ನುಸುಳುಕೋರರನ್ನು ಪತ್ತೆ ಹಚ್ಚಲು ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮೀತ್ ಶಾ ಹೇಳುತ್ತಿರುವಾಗ ನೀವು ಈ ಪ್ರಕ್ರಿಯೆ ಮೂಲಕ ಎಷ್ಟು ನುಸುಳುಕೋರರ ಅಕ್ರಮ ಮತಗಳನ್ನು ಪತ್ತೆ ಹೆಚ್ಚಿದಿರಿ ಎಂಬ ಲೆಕ್ಕ ಏಕೆ ನೀಡುತ್ತಿಲ್ಲ? ಎಂದು ಯೂಸಫ್ ಕನ್ನಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಚುನಾವಣಾ ಆಯೋಗ ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ನಾಗರಿಕ ಸಮಾಜ ಮುಂದಿಡುತ್ತಿರುವ ಯಾವ ಪ್ರಸ್ತಾಪಗಳನ್ನೂ ಪರಿಗಣಿಸುತ್ತಿಲ್ಲ. ಕೋಟ್ಯಾಂತರ ಜನ ಡಿಲೀಟ್ ಆಗುತ್ತಿದ್ದರೂ ಅವರ ಮಾತಿನಲ್ಲಿ ಯಾವ ಆತಂಕ, ಕಾಳಜಿಯೂ ಇಲ್ಲ. ಶೇ.100ರಷ್ಟು ಸರಿಯಾಗಿದೆ ಎಂಬ ಭ್ರಮೆ ಮೂಡಿಸುವ ಕೆಲಸ ಮಾಡುತ್ತಿದೆ. ಕೋಟ್ಯಾಂತರ ಜನರ ಮತದಾನದ ಹಕ್ಕಿನ ಜೊತೆ ಚೆಲ್ಲಾಟವಾಡುತ್ತಿದೆ. ಕೂಡಲೇ ನಮ್ಮ ಹಕ್ಕೊತ್ತಾಯಗಳನ್ನು ಪರಿಗಣಿಸದಿದ್ದಲ್ಲಿ ತೀವ್ರ ಸ್ವರೂಪದ ಪ್ರತಿರೋಧಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆಯಲ್ಲಿ ಹೋರಾಟಗಾರರು ಮುಖ್ಯಚುನಾವಣಾಧಿಕಾರಿ ಕಚೇರಿಯಿಂದ ಪ್ರತಿದಿನ ಬಿಡುಗಡೆ ಮಾಡುವ ಎಎಸ್‌ಡಿಡಿಒ ಅಂಕಿ ಅಂಶಗಳನ್ನು ಒಳಗೊಂಡಿರುವ ಪತ್ರಿಕಾ ಹೇಳಿಕೆಯನ್ನು ಹರೆದುಹಾಕುವ ಮೂಲಕ ಸಂವಿಧಾನ ವಿರೋಧಿ ಎಸ್‌ಐಆರ್‌ಅನ್ನು ರದ್ದುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟದಲ್ಲಿ ಈ ಪ್ರಮಾಣದ ಮತಗಳು ಡಿಲೀಟ್ ಆಗಲು ಕಾರಣಗಳು:
• ಎಸ್‌ಐಆರ್ ಪ್ರಕ್ರಿಯೆ ಅವೈಜ್ಞಾನಿಕ, ಅಪ್ರಜಾತಾಂತ್ರಿಕ ಮತ್ತು ದುರುದ್ದೇಶಗಳಿಂದ ಕೂಡಿದೆ.
• ಇಡೀ ಪ್ರಕ್ರಿಯೆಯನ್ನು ಬೇಜವಬ್ದಾರಿ ಮತ್ತು ಅವ್ಯವಸ್ಥಿತವಾಗಿ ನಡೆಸಲಾಗಿದೆ.
• ಸ್ಥಳಾಂತರ ಮತ್ತು ಮನೆಯಲ್ಲಿಲ್ಲದವರೆನ್ನೆಲ್ಲ ಡಿಲೀಟೆಡ್ ಮತದಾರರು ಎಂದು ಪರಿಗಣಿಸಿರುವುದು.
ಚುನಾವಣಾ ಆಯೋಗಕ್ಕೆ ಒಕ್ಕೂಟದ ಒತ್ತಾಯಗಳು:
• ಇಷ್ಟು ಡಿಲೀಷನ್ ಏಕಾಯಿತು? ಎಂಬ ಕುರಿತು ಸಮಗ್ರ ಅವಲೋಕನ ಆಗಬೇಕು. ಸಾಮಾಜಿಕ ಸಂಘಟನೆಗಳಿಗೂ ಇದರಲ್ಲಿ ವಿಚಾರ ಮಂಡಿಸಲು ಅವಕಾಶ ನೀಡಬೇಕು.
• ಸ್ಥಳಾಂತರಗೊಂಡವರನ್ನು, ಮನೆಯಲ್ಲಿ ಇಲ್ಲದಿದ್ದವರನ್ನು ಯಾವುದೇ ಕಾರಣಕ್ಕೂ ಡಿಲೀಟ್ ಪಟ್ಟಿಗೆ ಸೇರಿಸಬಾರದು. ಅವರು ಇರುವ ಸ್ಥಳಗಳಲ್ಲೇ ಗಣತಿ ನಮೂನೆ ಮತ್ತು ನಮೂನೆ 8ಅನ್ನು ಕೊಡುವ ವ್ಯವಸ್ಥೆ ಆಗಬೇಕು.
• ಮೂಲಭೂತ ದೋಷವನ್ನು ಸರಿತಿದ್ದಲು ಗಣತಿ ನಮೂನೆ ಪ್ರಕ್ರಿಯೆಯ ಅವಧಿಯನ್ನು ಕನಿಷ್ಠ ಒಂದು ತಿಂಗಳಿಗೆ ವಿಸ್ತರಿಸಬೇಕು.
• ಕರಡು ಪಟ್ಟಿ ಪ್ರಕಟವಾದ ನಂತರ ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವ ನಿರ್ದೇಶನದಂತೆ ಪ್ರತಿ ಬೂತ್ ಪ್ರದೇಶಗಳಲ್ಲಿ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಬೇಕು.

ಸುದ್ದಿಗೋಷ್ಠಿಯಲ್ಲಿ ಡಬ್ಲೂö್ಯಪಿಐನ ತಾಹೇರ್ ಹುಸೇನ್, ಎಸ್‌ಯುಸಿಐನ ಕೆ.ವಿ.ಭಟ್, ಆಮ್ ಆದ್ಮಿ ಪಾರ್ಟಿಯ ಸೀತಾರಾಮ ಗುಂಡಪ್ಪ, ಎಸ್‌ಡಿಪಿಐನ ಅಬ್ದುಲ್ ಮಜೀದ್, ಆಶೀರ್ವಾದ್ ಸೆಂಟರ್‌ನ ಫಾ.ಅರುಣ್ ಲೂಯಿಸ್, ಶಾಂತಿಗಾಗಿ ನಾಗರಿಕರ ವೇದಿಕೆಯ ಪ್ರೊ.ವಿ.ಎಸ್.ಶ್ರೀಧರ, ಎದ್ದೇಳು ಕರ್ನಾಟಕದ ತಾರಾ ರಾವ್, ಕೆ.ಎಲ್.ಅಶೋಕ್, ಅಮ್ಜದ್ ಪಾಷಾ, ದಲಿತ್ ಕ್ರಶ್ಚಿಯನ್ ಮೂವ್ಮೆಂಟ್‌ನ ಮನೋಹರ ಚಂದ್ರಪ್ರಸಾದ್, ವಿಚಾರವಾದಿಗಳ ವೇದಿಕೆಯ ನಾಗೇಶ್ ಅರಳಕುಪ್ಪೆ ಇದ್ದರು

More articles

Latest article

Most read