ಟೋಟೋ ಪ್ರಶಸ್ತಿ ವಿಜೇತ ನವೀನ್ ತೇಜಸ್ವಿ ಅವರ ‘ಬಂಗಾರಕಡ್ಡಿ ಡೇರೆಹೂವು’ ಕಥಾಸಂಕಲನ ಬಿಡುಗಡೆ

ಬೆಂಗಳೂರು: ಟೋಟೋ ಪ್ರಶಸ್ತಿ ವಿಜೇತ ನವೀನ್ ತೇಜಸ್ವಿ ಅವರ ಚೊಚ್ಚಲ ‘ಬಂಗಾರಕಡ್ಡಿ ಡೇರೆಹೂವು’ ಕಥಾಸಂಕಲನವು ನಗರದ ವಾಸವಿ ಹೈಸ್ಕೂಲ್ ಸಭಾಂಗಣದಲ್ಲಿ ಭಾನುವಾರ ಲೋಕಾರ್ಪಣೆಗೊಂಡಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಲೇಖಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ “ಸಾಗರ ತಾಲ್ಲೂಕಿಗೆ ಭೂಮಿ ಹಕ್ಕಿಗಾಗಿ ಗೇಣಿದಾರರು ಹೋರಾಟ ಕಟ್ಟಿದ ಚರಿತ್ರೆವಿದ್ದು, ಸಾಗರ- ಸೊರಬ ಸೀಮೆಯಿಂದ ಬಂದಿರುವ ಯುವಲೇಖಕ ನವೀನ್ ಅವರ ಕೃತಿಯೂ ಅಂಚಿನ ಸಮುದಾಯದ ಒಳದನಿಯಾಗಿ ಜನರ ಜೀವನಪ್ರೀತಿಯನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದೆ” ಎಂದರು.

ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಮಾತನಾಡಿ, “ಕೋಮುವಾದವು ಸೃಷ್ಟಿಸುತ್ತಿರುವ ದಾಳಕ್ಕೆ ಬಲಿಯಾಗುತ್ತಿರುವ ಒಂದು ಯುವಕರ ವರ್ಗ ಒಂದುಕಡೆಯಾದರೆ, ಅಸಮಾನ ಸಮಾಜದಲ್ಲಿ ಕಥೆ, ಸಿನಿಮಾ ಮತ್ತು ಹಾಡುಗಳ ಮೂಲಕ ಸೌಹಾರ್ದತೆಯನ್ನು ಪಸರಿಸುವ ನವೀನ್ ತರದ ಯುವಕರ ವರ್ಗ ಆಶಾವಾದ ಮೂಡಿಸುತ್ತದೆ. ನವೀನ್ ಅವರು ಮೊದಲ ಕೃತಿಯಲ್ಲೇ ಭರವಸೆ ಮೂಡಿಸಿದ್ದಾರೆ. ಅವರ ಮುಂದಿನ ಕೃತಿಗೆ ಕಾಯತ್ತೇನೆ” ಎಂದು ಶ್ಲಾಘಿಸಿದರು.

ಹಿರಿಯ ರೈತ ಹೋರಾಟಗಾರ ಶಿವಾನಂದ ಕುಗ್ವೆ ಮಾತನಾಡಿ “ಗೇಣಿ ಮತ್ತು ಜೀತದ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನವೀನ್ ತೇಜಸ್ವಿ ಇಂದು ತನ್ನೂರಿನ ಜನರ ಕಥೆಗಳನ್ನು ಹೊರತರುತ್ತಿರುವುದು ಮಹತ್ವದ್ದು. ಅಕ್ಷರ, ಕಲೆ ವಂಚಿತ ಹೊಸಬಾಳೆಯ ಮಕ್ಕಳಿಗೆ ಭೀಮಶಾಲೆ ತೆರೆದು, ಅವರನ್ನು ಭವಿಷ್ಯದ ಕಲಾನಿಧಿಯನ್ನಾಗಿ ಮಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಟ ಕಿಶೋರ್, ಯುವ ಲೇಖಕ ದಾದಾಪೀರ್ ಜೈನ್ ಉಪಸ್ಥಿತರಿದ್ದರು.

More articles

Latest article

Most read