ಎಸ್‌ಐಆರ್‌ ಪರಿಷ್ಕರಣೆ – 2ನೇ ಹಂತದ ಭೌತಿಕ ಪರಿಶೀಲನೆ ಮಾಡಿ : ರಮೇಶ್‌ ಬಾಬು

ಬೆಂಗಳೂರು : ಕರಡು ಮತದಾರರ ಪಟ್ಟಿಯಿಂದ 84 ಲಕ್ಷಕ್ಕೂ ಅಧಿಕ ಮತದಾರರನ್ನು ಹೊರಗಿಡಲು ಚುನಾವಣಾ ಆಯೋಗ ಮುಂದಾಗಿರುವುದಕ್ಕೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟು ಮತದಾರರ ಸಂಖ್ಯೆಯ ಅಂದಾಜು ಶೇ.15ರಷ್ಟು ಮಂದಿಯನ್ನು ಗೈರುಹಾಜರು,  ಸ್ಥಳಾಂತರಗೊಂಡವರು, ಸಹಿ ಮಾಡಲು ನಿರಾಕರಿಸಿದವರು  ಬಹು ನೋಂದಣಿ, ಹಾಗೂ ಇತರ ಸಮಾನ ವರ್ಗೀಕರಣಗಳ ಅಡಿ ಗುರುತಿಸಲಾಗಿದೆ.  ಸಮರ್ಪಕ ಪರಿಶೀಲನೆ ಇಲ್ಲದೆ ಅಂತಿಮ ಕ್ರಮಕ್ಕೆ ಒಳಪಡಿಸಿದಲ್ಲಿ, ಹೆಚ್ಚಿನ ಸಂಖ್ಯೆಯ ನೈಜ ಮತ್ತು ಅರ್ಹ ಮತದಾರರು ತಪ್ಪಾಗಿ ಮತದಾರರ ಪಟ್ಟಿಯಿಂದ ಕೈಬಿಡಲ್ಪಡುವ ಗಂಭೀರ ಸಾಧ್ಯತೆ ಇದೆ. ಇದರಿಂದ ಅವರ ಸಂವಿಧಾನಾತ್ಮಕ ಮತದಾನದ ಹಕ್ಕಿಗೆ ದಕ್ಕೆ  ಉಂಟಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಯೋಗ  ಗೈರುಹಾಜರು,  ಸ್ಥಳಾಂತರಗೊಂಡವರು, ಸಹಿ ಹಾಕಲು ನಿರಾಕರಿಸಿದವರು ಅಥವಾ ಮತದಾರರನ್ನು ಅಳಿಸುವ ಸಾಧ್ಯತೆಯಿರುವ ಇತರ ಯಾವುದೇ ವರ್ಗಗಳಡಿ ಗುರುತಿಸಲಾದ ಎಲ್ಲಾ ಪ್ರಕರಣಗಳಲ್ಲಿ ಎರಡನೇ ಹಂತದ ಭೌತಿಕ ಪರಿಶೀಲನೆ ನಡೆಸಬೇಕು. ಒಂದು ಬಾರಿ ಮನೆ ಭೇಟಿ ಅಥವಾ ಅಪೂರ್ಣ ಪರಿಶೀಲನೆಯ ಆಧಾರದ ಮೇಲೆ ಯಾವುದೇ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯಬಾರದು. ಯಾವುದೇ ಮತದಾರರ ಹೆಸರು ತೆಗೆಯುವ ಮೊದಲು, ಸಂಬಂಧಪಟ್ಟ ಮತದಾರರಿಗೆ ಸೂಕ್ತ ನೋಟಿಸ್ ನೀಡಿ, ಸಮಂಜಸವಾದ ಅವಕಾಶವನ್ನು ಒದಗಿಸಬೇಕು. ಗ್ರಾಮ, ವಾರ್ಡ್ ಹಾಗೂ ಮತಗಟ್ಟೆ ಮಟ್ಟದಲ್ಲಿ ಸಾಕಷ್ಟು ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ, ಮತದಾರರು ತಮ್ಮ ವಿವರಗಳನ್ನು ಸರಿಪಡಿಸಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ನೆರವು ಒದಗಿಸಬೇಕು ಎಂದು ಸಲಹೆ ಮಾಡಿದ್ದಾರೆ.  

More articles

Latest article

Most read