ಫುಟ್‌ಪಾತ್‌ ತೆರವು ಪರಿಶೀಲನೆ : ರಾತ್ರಿಯಿಡೀ ನಗರದಲ್ಲಿ ರೌಂಡ್ಸ್‌ ಹಾಕಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಮಧ್ಯರಾತ್ರಿ ಹೊರವರ್ತುಲ ರಸ್ತೆ ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೂ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಲೌರಿ ಜಂಕ್ಷನ್‌ವರೆಗೂ ಎರಡು ಕಡೆಯ ಪಥದ ಸ್ಥಳ ಪರಿವೀಕ್ಷಣೆ ನಡೆಸಲಿದ್ದು, ಸದ್ಯ ಲೌರಿ ಜಂಕ್ಷನ್ ನಲ್ಲಿ ಪರಿಶೀಲನೆ ನಡೆಸಿದರು.

ಬಿ-ಸ್ಮೈಲ್ ವತಿಯಿಂದ ಸಿಲ್ಕ್ ಬೋರ್ಡ್ ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ವರೆಗೆ 17.1 ಕಿ.ಮೀ ಉದ್ದದ ರಸ್ತೆಯನ್ನು ಜಾಗತಿಕ ಮಟ್ಟದ ವಿನ್ಯಾಸಕ್ಕೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಇಂದು ಅಧಿಕಾರಿವಳ ಜೊತೆ ಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಲೌರಿ ಜಂಕ್ಷನ್ ಪರಿಶೀಲನೆ:

  • ಪಾದಚಾರಿ ಮಾರ್ಗ ಒತ್ತುವರಿ ಆಗಿದಿಯಾ ಪರಿಶೀಲಿಸಿ, ಕ್ರಮವಹಿಸಿ, ಬೆಸ್ಕಾಂ ತಂತಿಗಳು ನಾಗರಿಕರಿಗೆ ತಲೆಗೆ ತಾಗುವ ರೀತಿ ಇದ್ದು, ಅದನ್ನು ಸರಿಪಡಿಸಿ
  • ಸರ್ವೀಸ್ ರಸ್ತೆ ಸಮರ್ಪಕವಾಗಿ ದುರಸ್ತಿ ಕಾರ್ಯ ನಡೆಸಬೇಕು. ಅಭಿವೃದ್ಧಿಗೊಳಿಸುವ ವೇಳೆ ಬಸ್ ಬೇ, ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ, ಚರಂಡಿ, ಮೀಡಿಯನ್ ಒಂದೇ ಮಾದರಿಯಲ್ಲಿರುವಂತೆ ವಿನ್ಯಾಸ ರೂಪಿಸಲು ಸೂಚನೆ ನೀಡಿದರು.

ದೊಡ್ಡಾನೆಕುಂದಿ ಜಂಕ್ಷನ್:

ಅನುಮತಿ‌ ತೆಗದುಕೊಂಡಿಲ್ಲವೆಂದರೆ, ನಿಮ್ಮ ಪಾತ್ರ ಇದರಲ್ಲಿ ಇಲ್ಲವೆಂದರೆ ಕೂಡಲೆ ಜೆಸಿಬಿ ತರೆಸಿ ಕಿತ್ತಾಕಿ. ಸರ್ವೀಸ್ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿಲ್ಲ ಎಂದು ಮೆಟ್ರೋ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ವೆಹಿಕಲ್ ಮೂವ್ಮೆಂಟ್ ಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ರಸ್ತೆ ದುರಸ್ತಿ ಮಾಡುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ನೀವು ಅದನ್ನು ಸರಿಯಾಗಿ ಮಾಡಿ, ಜನ ಆಳುತ್ತಿದ್ದಾರೆ. ಕೆಲಸ ಮಾಡಲು ನಾವು ಬಂದು ಕೇಳಬೇಕಾ ? ಯಾಕೆ ರಸ್ತೆ ಅಗೆಯಲು ಬಿಟ್ಟಿದ್ದೀರಾ, ಸುಳ್ಳು ಹೇಳಲು ಇತಿ ಮಿತಿ ಇರಬೇಕು, ಬೆಸ್ಕಾಂ ಅವರಿಗೆ ಯಾಕೆ ಅಗೆಯಲು ಬಿಟ್ರಿ. ಡಾಂಬರೀಕರಣ ಮಾಡಿ 6 ತಿಂಗಳು ಆದ ಬಳಿಕ, ರಸ್ತೆ ಅಗೆಯಲು ಯಾಕೆ ಬಿಟ್ರಿ ? ರಾತ್ರೋ ರಾತ್ರಿ ಅಗೆದಿದ್ದಾರೆ, ಜೆಸಿಪಿ ತರೆಸಿ ಈಗಲೇ ಕಿತ್ತಾಕಿ, ಬೆಸ್ಕಾಂ ಇಲ್ಲವೇ ಓ.ಎಫ್.ಸಿ ಕೇಬಲ್ ಎಂದು ನೋಡೋಣ. ಹೊಸದಾಗಿ ಟಾರಾಕಿದ್ದು, ಅದನ್ನು ಅಗೆಯಲು‌ ಬಿಟ್ಟವರ್ಯಾರು ? ಎಂದು ಖಡಕ್‌ ಆಗಿ ಎಂದು ಪ್ರಶ್ನಿಸಿದರು.

ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ವಿನ್ಯಾಸ ಅಂತಿಮಗೊಳಿಸಲಾಗುವುದು: ಕೃಷ್ಣ ಬೈರೇಗೌಡ

ಹೊರ ವರ್ತುಲ ರಸ್ತೆ(ORR) ಸಮಗ್ರ ಅಭಿವೃದ್ಧಿ ಯೋಜನೆಯ ವಿನ್ಯಾಸವನ್ನು ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುವುದೆಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ರಸ್ತೆ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂಬಂಧ, ಇಂದು ಲೋರಿ ಜಂಕ್ಷನ್‌ನಿಂದ ಇಬ್ಲೂರು ಜಂಕ್ಷನ್‌ವರೆಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೊರ ವರ್ತುಲ ರಸ್ತೆ ನಗರದ ಅತ್ಯಂತ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಒಂದಾಗಿದ್ದು, ಈ ರಸ್ತೆಯನ್ನು ಸುಮಾರು ₹400–450 ಕೋಟಿ ವೆಚ್ಚದಲ್ಲಿ ಪುನರ್‌ನಿರ್ಮಿಸಿ ಅಭಿವೃದ್ಧಿಪಡಿಸಲು ಮಾನ್ಯ ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಉದ್ದೇಶಿಸಿದ್ದಾರೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೊದಲು ಸಂಚಾರ ದಟ್ಟಣೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವುದು ಅಗತ್ಯವೆಂದು ಹೇಳಿದರು.

ಹೊರ ವರ್ತುಲ ರಸ್ತೆಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳು, ಕಂಪನಿಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಇರುವುದರಿಂದ ಸ್ಥಳೀಯ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ರಸ್ತೆ ವಿನ್ಯಾಸ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿನ್ಯಾಸ ಸಿದ್ಧಪಡಿಸಿದ ನಂತರ ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ವಿನ್ಯಾಸವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಇಂದಿನ ಪರಿಶೀಲನೆಯಿಂದ ರಸ್ತೆಯ ಸಂಪೂರ್ಣ ಸ್ಥಿತಿಗತಿಗಳ ಕುರಿತು ಸ್ಪಷ್ಟ ಚಿತ್ರಣ ದೊರೆತಿದ್ದು, ಅದಕ್ಕೆ ಅನುಗುಣವಾಗಿ ರಸ್ತೆ ವಿನ್ಯಾಸವನ್ನು ಅಂತಿಮಗೊಳಿಸಿ, ಅಗತ್ಯ ಅನುಮೋದನೆಗಳ ನಂತರ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

More articles

Latest article

Most read