ಬೆಂಗಳೂರು : ನಟಿ ಕ್ರಿಷಿ ತಾಪಂಡ ಮನೆಯಲ್ಲಿ ವೈಶಾಕ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಆರ್ ಆರ್ ನಗರದ ಮನೆಯಲ್ಲಿ ಘಟನೆ ನಡೆದಿದೆ.
ಕ್ರಿಷಿ ಹಾಗೂ ವೈಶಾಕ್ ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಕ್ರಿಷಿ ನಿನ್ನೆ ಮನೆಯಲ್ಲಿ ಇಲ್ಲದಾಗ ವೈಶಾಕ್ ರಾತ್ರಿ 8.30 ರ ವೇಳೆಗೆ ಕ್ರಿಷಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಕ್ರಿಷಿ ಆತನ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ವೈಶಾಕ್ ಹಲವು ದಿನಗಳಿಂದ ಮಾನಸಿಕ ಖಿನ್ನತೆಯಲ್ಲಿ ಇದ್ದರು ಎನ್ನಲಾಗಿದೆ. ಮನೆಯಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ.
ಸದ್ಯ ಮೃತದೇಹವು ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದು, ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.
ವೈಶಾಕ್ ಮೂಲತಃ ಜಯನಗರದವರು. ಅವರಿಗೆ ಮದುವೆಯಾಗಿತ್ತು. ನಂತರ ಕ್ರಿಷಿ ಪರಿಚಯವಾಗಿತ್ತು.
ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ್ದ ಎಂಬ ಆರೋಪ ಹಿನ್ನೆಲೆ ಫೆಬ್ರವರಿ ಮೊದಲ ವಾರದಲ್ಲಿ ಇತನ ಬಂಧನವೂ ಆಗಿತ್ತು ಎನ್ನಲಾಗಿತ್ತು.

