ಆರ್‌ಸಿಬಿ ಅಭಿಮಾನಿಗಳಿಗೆ ಬೆಂಗಳೂರು ಪೊಲೀಸರಿಂದ ಗೈಡ್‌ಲೈನ್ಸ್‌

ಬೆಂಗಳೂರು : ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ‌ನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು,  ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿಯ ಅಭಿಮಾನಿಗಳಿಗೆ ಕೆಲ ಸುರಕ್ಷಿತ ಮಾರ್ಗಸೂಚಿಗಳನ್ನ ಬೆಂಗಳೂರು ಪೊಲೀಸರು ಪ್ರಕಟಿಸಿದ್ದಾರೆ.

ಫೈನಲ್ ಪಂದ್ಯದ ಫಲಿತಾಂಶದ ಬಳಿಕ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗಳನ್ನ ಮಾಡುವಂತಿಲ್ಲ. ಪಂದ್ಯದ ನೇರಪ್ರಸಾರ ವೀಕ್ಷಣೆಗಾಗಿ ರಸ್ತೆಗಳತ್ತ ಮುಖ ಮಾಡಿರುವಂತೆ ಎಲ್‌ಇಡಿ ಪರದೆಗಳನ್ನ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೇ ಅಳವಡಿಸಬಾರದು. ಈಗಾಗಲೇ ಅಳವಡಿಸಿರುವ ಎಲ್‌ಇಡಿ ಪರದೆಗಳಲ್ಲಿ ಪಂದ್ಯವನ್ನು ನೇರಪ್ರಸಾರ ಮಾಡಬಾರದು.

  • – ಪಟಾಕಿಗಳನ್ನ ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು.
  • _ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡತಕ್ಕದ್ದು.
  • _ ಸಂಚಾರ ಪೊಲೀಸರು ನೀಡುವ ಸಲಹೆ – ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
  • _ ಬೈಕ್ ರ‍್ಯಾಲಿ, ಅತಿವೇಗದ ಚಾಲನೆ, ಸ್ಟಂಟ್, ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ಮಾಡುವುದು ನಿಷಿದ್ಧ.
  • _ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವುದು, ಜಗಳವಾಡುವುದು ಅಥವಾ ಅಸಭ್ಯವಾಗಿ ವರ್ತಿಸಬಾರದು‌.
  • _ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ದ್ವೇಷಪೂರಿತ ಸಂದೇಶ ಅಥವಾ ವದಂತಿಗಳನ್ನು ಹಂಚಬಾರದು.
  • _ ಪಂದ್ಯದ ಫಲಿತಾಂಶದ ಹೆಸರಿನಲ್ಲಿ ಇತರ ತಂಡದ ಅಭಿಮಾನಿಗಳನ್ನ ಪ್ರಚೋದಿಸುವುದು, ನಿಂದಿಸುವುದು ಅಥವಾ ಜಗಳಕ್ಕೆ ಕಾರಣವಾಗುವಂತೆ ವರ್ತಿಸಬಾರದು.
  • _ ಕಾನೂನು – ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನ ಮರೆಯಬಾರದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೆ ಜೂನ್ 4ರಂದು ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು‌. ಈ ಹಿನ್ನೆಲೆ ಸಂಭ್ರಮಾಚರಣೆಗೆ ಬ್ರೇಕ್‌ ನೀಡಲಾಗಿದೆ.

More articles

Latest article

Most read