ವಿಚಾರವಾದಿ ಡಾ. ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಭಾರತ-ವಿಯಟ್ನಾಂ ನಡುವಣ ಮೊದಲ ವೈಜ್ಞಾನಿಕ ಶೃಂಗಸಭೆ

ಬೆಂಗಳೂರು: ಭಾರತ ಅದರಲ್ಲೂ ಕರ್ನಾಟಕ-ವಿಯಟ್ನಾಂ ನಡುವಣ ವೈಚಾರಿಕ ವಿಚಾರಗಳ ವಿನಿಮಯ ಮಾಡಿಕೊಳ್ಳುವ ಸಂಬಂಧ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರತಿನಿಧಿಗಳು ಮೊದಲ ಬಾರಿಗೆ ವಿಯಟ್ನಾಂ ಪ್ರವಾಸ ಕೈಗೊಂಡಿದ್ದು, ಅಲ್ಲಿ ನಡೆಯುವ ʻಭಾರತ-ವಿಯಟ್ನಾ ವೈಜ್ಞಾನಿಕ ಶೃಂಗಸಭೆ-2026ʼ ರಲ್ಲಿ ಭಾಗಿಯಾಗಲಿದ್ದಾರೆ.

‎ವೈಚಾರಿಕ ಚಿಂತಕ, ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಡಾ. ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ರಾಜ್ಯದೆಲ್ಲೆಡೆಯಿಂದ 70 ಮಂದಿ ಕ್ರಿಯಾಶೀಲ ಪ್ರತಿನಿಧಿಗಳ ನಿಯೋಗ ವಿಯಟ್ನಾಂ ದೇಶಕ್ಕೆ ಪ್ರವಾಸ ತೆರಳಿದೆ. ವಿಯಟ್ನಾಂಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಇಂಡೋ ನಾಮ್ ಸೈಂಟಿಫಿಕ್ ಸಮಿಟ್ ಫೆಲೋಶಿಪ್-2026” ರ ಲಾಂಛನ ಬಿಡುಗಡೆ ಮಾಡಲಾಯಿತು.

‎ಸಾನಿಧ್ಯ ವಹಿಸಿದ್ದ ಗುರುಮಿಟ್ಕಲ್ ಮುರಘಾಮಠದ ಶ್ರೀ ಶಾಂತವೀರ ಮುರುಘ ರಾಜೇಂದ್ರ ಸ್ವಾಮೀಜಿ, ಬೇಲೂರು ಮಠದ ಶ್ರೀ ಶಿವಬಸವ ಸ್ವಾಮೀಜಿ ಹಾಗೂ ಸಾಯಂಗರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಲಾಂಛನ ಬಿಡುಗಡೆ ಮತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು, ಭಾರತದ ವೈಜ್ಞಾನಿಕ ಚಟುವಟಿಕೆಗಳು ಸಾಗರೋತ್ತರಕ್ಕೆ ಕೊಂಡೊಯ್ಯುಲು ನೆರವಾಗಲಿದೆ. ಭಾರತ-ವಿಯಟ್ನಾಂ ನಡುವಿನ ವೈಚಾರಿಕ ವಿಚಾರಗಳ ಶೃಂಗಸಭೆ ಯಶಸ್ವಿಯಾಗಲಿ ಎಂದು ಆಶಿಸಿದರು.

‎ʻಮೂಢನಂಬಿಕೆ ಮುಕ್ತ ಕರ್ನಾಟಕʼ
ವೈಚಾರಿಕ ಚಿಂತಕ ಡಾ. ಹುಲಿಕಲ್ ನಟರಾಜ್, ಭಾರತ-ವಿಯಟ್ನಾಂ ಸಹಯೋಗದಲ್ಲಿ ನಡೆಯುತ್ತಿರುವ ಮೊದಲ ವೈಜ್ಞಾನಿಕ ಸಮ್ಮೇಳನವಾಗಿದೆ. ಇದರ ಉದ್ದೇಶ, ಆ ದೇಶದ ವೈಚಾರಿಕ ಚಿಂತನೆಗಳನ್ನು ಅಧ್ಯಯನ ಮಾಡಿ, ನಮ್ಮ ರಾಜ್ಯದಲ್ಲಿ ವೈಜ್ಞಾನಿಕ ವಿಚಾರಗಳನ್ನು ಮತ್ತಷ್ಟು ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಮೂಢನಂಬಿಕೆ ಮುಕ್ತ, ವೈಚಾರಿಕ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ಈ ದಿಸೆಯಲ್ಲಿ  ವೈಜ್ಞಾನಿಕ ಪರಿಷತ್‌ ತನ್ನ ವೈಜ್ಞಾನಿಕ ಚಟುವಟಿಕೆಗಳನ್ನು ವಿದೇಶಗಳಿಗೂ ವಿಸ್ತರಿಸುವ ಕೆಲಸ ಮಾಡುತ್ತಿದೆ ಎಂದರು. 

ವಿಯಟ್ನಾಂ ಐತಿಹಾಸಿಕ ರಾಷ್ಟ್ರ
‎ನಿವೃತ್ತ ಐಎಎಸ್ ಅಧಿಕಾರಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಮಹಾಪೋಷಕ ಡಾ. ಸಿ. ಸೋಮಶೇಖರ್ ಮಾತನಾಡಿ, ವಿಯಟ್ನಾಂ ಒಂದು ಐತಿಹಾಸಿಕ ರಾಷ್ಟ್ರ. ಆ ದೇಶದಲ್ಲಿ ಕಲಿಯುವಂತಹ ಅನೇಕ ವೈಚಾರಿಕ ವಿಚಾರಗಳಿವೆ; ನಂಬಿಕೆಗಳಿವೆ. ನೋಡುವಂತಹ ಅನೇಕ ವೈಜ್ಞಾನಿಕ ತಾಣಗಳಿವೆ. ವಿಯಟ್ನಾಂನಲ್ಲಿ ಈಗ ಮೊದಲ ಶೃಂಗಸಭೆಯನ್ನು ಆಯೋಜಿಸಿರುವುದು ಮಹತ್ವಪೂರ್ಣದ್ದಾಗಿದೆ. ಭಾರತ-ವಿಯಟ್ನಾಂನ ಉಭಯ ದೇಶಗಳ ರಾಯಭಾರಿಗಳ ಸಮ್ಮುಖದಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಚರ್ಚೆಯಾಗಲಿವೆ ಎಂದು ತಿಳಿಸಿದರು.

ಕರ್ನಾಟಕದ ಚಿಂತನೆಗಳು ಎಲ್ಲೆಡೆ ಪ್ರಸರಿಸಲಿ

ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಡಾ. ಎ.ಎಚ್. ರಾಜಾಸಾಬ್ ಮಾತನಾಡಿ “ವಿಯೆಟ್ನಾಂನಲ್ಲಿ ಕರ್ನಾಟಕದ ವೈಜ್ಞಾನಿಕ ಚಿಂತನೆಗಳ ಕಂಪು ಪಸರಿಸಲಿ. ಸರ್ಕಾರಗಳು ಮಾಡುವ ಕಾರ್ಯವನ್ನು ವೈಚಾರಿಕ ಚಿಂತಕ ಡಾ. ಹುಲಿಕಲ್ ನಟರಾಜ್ ಮಾಡುತ್ತಿರುವುದು ಅನುಕರಣೀಯ. ಅವರ ನೇತೃತ್ವದಲ್ಲಿ ತೆರಳುತ್ತಿರುವ ಎಲ್ಲಾ ಪ್ರತಿನಿಧಿಗಳಿಗೆ ಒಳ್ಳೆಯದಾಗಲಿ. ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸಂಶೋಧಕರಿಗೆ ನೀಡುತ್ತಿರುವ ಫೆಲೋಶಿಪ್ ಇದು ಅತ್ಯಂತ ದೊಡ್ಡ ಜವಾಬ್ದಾರಿ ಎಂದು ಹರ್ಷ ವ್ಯಕ್ತಪಡಿಸಿದರು.

ವೈಚಾರಿಕ ವಿಚಾರಗಳ ವಿನಿಯಯ ಅಗತ್ಯ

‎ಸಮಾಜಸೇವಕ, ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಲಯನ್ ರಾಜು ಚಂದ್ರಶೇಖರ್ ಮಾತನಾಡಿ, ಜನರಲ್ಲಿ ಮೌಢ್ಯತೆ ತೊಲಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ. ಕರ್ನಾಟಕ, ಭಾರತ ಮಾತ್ರವಲ್ಲ; ವಿಯಟ್ನಾಂನಂತಹ ಅನೇಕ ದೇಶಗಳಲ್ಲಿ ವೈಚಾರಿಕ ವಿಚಾರಗಳ ವಿನಿಯಯ ಅಗತ್ಯವಿದೆ. ವಿದೇಶಿಗರ ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಇತ್ತೀಚಿನ ವೈಜ್ಞಾನಿಕ ಯುಗದಲ್ಲಿ ದೇಶ-ದೇಶಗಳ ನಡುವಿನ ವೈಚಾರಿಕ ಸಮ್ಮೇಳನ ನಡೆಯುವುದು ಅವಶ್ಯ ಎಂದು ಹೇಳಿದರು.

‎ಯಾದಗಿರಿ ವೈಜ್ಞಾನಿಕ ಸಮ್ಮೇಳನಾಧ್ಯಕ್ಷ ಡಾ. ವಿಶ್ವಾರಾಧ್ಯ ಸತ್ಯಂಪೇಟೆ ಶಹಾಪೂರ, ವಿಯಟ್ನಾಂ ಪ್ರವಾಸ ಆಯೋಜಿಸಿರುವ ಟಿ.ಸಿ.ಎಸ್. ಡ್ರೀಮ್ ಹಾಲಿಡೇಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಎಂ. ಸುರೇಶ್ ಮಾತನಾಡಿ, ವಿಯಟ್ನಾ ವೈಜ್ಞಾನಿಕ ಶೃಂಗಸಭೆಯ ಉದ್ದೇಶ ಮತ್ತು ಪ್ರವಾಸದ ಬಗ್ಗೆ ಮಾಹಿತಿ ನೀಡಿದರು.

‎ಕಾರ್ಯಕ್ರಮದಲ್ಲಿ ಸಮಾಜ ಸೇವಕ, ದಾನಿ ಯಾದಗಿರಿಯ ದಿನೇಶ್ ಜೈನ್, ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷ ಅಝೀಜ್ ಅಹಮದ್ ಸೇವಾ,  ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗೌರವಾಧ್ಯಕ್ಷ ಬಾಬು ದಾನಿರಾವ್, ಪ್ರಧಾನ ಕಾರ್ಯದರ್ಶಿ ಶಾಂತನಗೌಡ, ಉಪಾಧ್ಯಕ್ಷರಾದ ಪ್ರೊ. ಸುಧಾ ಹುಚ್ಚಣ್ಣನವರ, ಪ್ರೊ. ದಾಕ್ಷಾಯಣಿ ಮಂಡಿ, ಯಾದಗಿರಿ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ, ದಾವಣಗೆರೆ ಜಿಲ್ಲಾಧ್ಯಕ್ಷ ಪ್ರೊ. ಜಗದೀಶ್, ಹಾಸನದ ಪ್ರೊ. ನಿಚಿತಾಕುಮಾರಿ, ಹಿರಿಯ ಪತ್ರಕರ್ತ ಇಂದೂಧರ್ ಸಿಣ್ಣೂರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

‎ಇದೇ ಸಂದರ್ಭದಲ್ಲಿ ʻಇಂಡೋ ನಾಮ್ ಸೈಂಟಿಫಿಕ್ ಸಮ್ಮಿಟ್ ಫೆಲೋಶಿಫ್ -2026 ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಇದಕ್ಕೂ ಮುನ್ನ ವಿಚಾರವಾದಿ ಡಾ. ಹುಲಿಕಲ್ ನಟರಾಜ್ ಅವರನ್ನು ಅಭಿನಂದಿಸಲಾಯಿತು.

More articles

Latest article

Most read