ನಟಿ ತ್ರಿಷಾ ಸಂಭಾವನೆ ಇದ್ದಕ್ಕಿದ್ದಂತೆ 12 ಕೋಟಿ ರೂ.ಗೆ ಏರಿಕೆ! ಇಂಟರೆಸ್ಟಿಂಗ್‌ ಕಾರಣ ಇಲ್ಲಿದೆ…

ಚೆನ್ನೈ : ದಕ್ಷಿಣ ಭಾರತದ   ಎ-ಲಿಸ್ಟ್ ತಾರೆಗಳಲ್ಲಿ ಒಬ್ಬರಾದ ತ್ರಿಶಾ ಕೃಷ್ಣನ್ ಇದೀಗ ಬೇಡಿಕೆ ಹಾಗೂ ದುಬಾರಿಯ ನಟಿಯಾಗಿದ್ದಾರೆ.
ವಯಸ್ಸು 40 ದಾಟಿರೂ 20 ವರ್ಷ ವಯಸ್ಸಿನ ಯುವತಿಯಂತೆ ಕಾಣುವ ನಟಿ ತ್ರಿಷಾ ತಮಿಳುನಾಡಿನಲ್ಲಿ ಪ್ರಚಲಿತದಲ್ಲಿರುವ ವ್ಯಕ್ತಿಯಾಗಿ, ನಟಿಯಾಗಿ ಹಾಗೂ ಮುಖ್ಯಮಂತ್ರಿ ವಿಜಯ್‌ ಅವರ ಗೆಳತಿಯಾಗಿದ್ದಾರೆ. 

ಇತ್ತೀಚಿನ ವರದಿಗಳ ಪ್ರಕಾರ, ನಟಿ ತ್ರಿಷಾ ಸಂಭಾವನೆ ಹೆಚ್ಚಾಗಿದೆ. ಅಲ್ಲದೇ, ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.  ಪ್ರತಿ ಸಿನಿಮಾಗೂ  ಶುಲ್ಕವನ್ನು 12 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ, ಇದು ಎರಡು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.   ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.  ಅವರ ವೃತ್ತಿಜೀವನದ ಆರಂಭದಲ್ಲಿ ಕೇವಲ 500 ರೂ. ಗಳಿಸಿದ್ದರು. ಇದೀಗ 12 ಕೋಟಿ ರೂ.ತಲುಪಿರುವುದು ಚಿತ್ರರಂಗದ ಪಯಣಕ್ಕೆ ಸಾಕ್ಷಿಯಾಗಿದೆ. 

ತ್ರಿಶಾ ಕೃಷ್ಣನ್ ಸಂಭಾವನೆ ಏರಿಕೆ  ನಟನೆಯ ಶಕ್ತಿಯನ್ನು  ತೋರಿಸುತ್ತದೆ.  ಮಹಿಳಾ ನಟಿಯರಿಗೆ ಉತ್ತಮ ವೇತನ, ಸಮಾನತೆ,  ಸಕಾರಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ. ಲಿಂಗ ತಾರತಮ್ಯ, ಅಸಮಾನತೆಯು ಬಹಳ ಹಿಂದಿನಿಂದಲೂ ಚರ್ಚೆಯ ಪ್ರಮುಖ ವಿಷಯವಾಗಿತ್ತು.  ಉದ್ಯಮದಲ್ಲಿ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ತ್ರಿಶಾ ಹೆಸರಿಸಲ್ಪಟ್ಟಿರುವುದು ಪೋಷಕ ಪಾತ್ರಗಳಿಗೆ ಸೀಮಿತವಾಗಿರದೆ, ಪ್ರಮುಖ ಪಾತ್ರಗಳಲ್ಲಿ ಮಹಿಳಾ ತಾರೆಯರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.

ಸ್ಪಾಟ್‌ಲೈಟ್ ಆದ ತ್ರಿಷಾ : ತಮಿಳುನಾಡು ಮುಖ್ಯಮಂತ್ರಿ  ವಿಜಯ್ ಅವರೊಂದಿಗೆ  ಇತ್ತೀಚಿನ ದಿನಗಳಲ್ಲಿ  ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದೆ.  ದಳಪತಿ ವಿಜಯ್ ಅವರೊಂದಿಗಿನ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಸಂಬಂಧದಿಂದಾಗಿ ನಟಿ ಮತ್ತೆ ಬೆಳಕಿಗೆ ಬಂದಿದ್ದಾರೆ. ವಿಜಯ್ ಅವರ ರಾಜಕೀಯ ಪ್ರವೇಶದ ಜೊತೆಗೆ, ತ್ರಿಷಾ ಅವರೊಂದಿಗಿನ ಡೇಟಿಂಗ್ ವದಂತಿಗಳು ಹೆಚ್ಚಾಗಿವೆ.  ಈವೆಲ್ಲವೂ ತ್ರಿಷಾ ಅವರ ಮೇಲೆ ಸ್ಪಾಟ್‌ಲೈಟ್ ಬೀರಿದ್ದು, ಅವರ ಬ್ರ್ಯಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ.

‘ಪೊನ್ನಿಯಿನ್ ಸೆಲ್ವನ್’ ಸರಣಿ ಮತ್ತು ವಿಜಯ್ ಅವರ ಇತ್ತೀಚಿನ ಚಿತ್ರಗಳಲ್ಲಿ ಒಂದಾದ ‘ಲಿಯೋ’ ನಂತಹ ಚಲನಚಿತ್ರಗಳಲ್ಲಿ ತ್ರಿಶಾ ಗಮನಾರ್ಹ ಪ್ರದರ್ಶನಗಳನ್ನು ನೀಡಿದ್ದಾರೆ. ಚಲನಚಿತ್ರಗಳ ಹೊರತಾಗಿ, ತ್ರಿಷಾ ಬ್ರ್ಯಾಂಡ್  ಸಹಯೋಗಗಳು ಅವರ ಮೌಲ್ಯವನ್ನು ಹೆಚ್ಚಿಸಿವೆ.   ತಮ್ಮ ಘನತೆ ಮತ್ತು ಆಕರ್ಷಕ ಸಾರ್ವಜನಿಕ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ತ್ರಿಷಾ, ತಮ್ಮ ವೃತ್ತಿಜೀವನದಲ್ಲಿವಿವಾದಗಳಿಂದ ದೂರ ಉಳಿದಿದ್ದಾರೆ. ಈ ಸಾರ್ವಜನಿಕ ಇಮೇಜ್ ಅವರನ್ನು ಈ ಮಟ್ಟಕ್ಕೆ ತಂದಿದೆ ಎಂದರೆ ತಪ್ಪಾಗಲಾರದು.  

More articles

Latest article

Most read