ಚೆನ್ನೈ: ಕ್ಷೇತ್ರ ವಿಂಗಡಣೆ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಾಳೆ ರಾಜ್ಯದಾದ್ಯಂತ ಜನರು ಕಪ್ಪು ಧ್ವಜಗಳನ್ನು ಹಾರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯ ರಾಜಕೀಯ ತಿರುವು ಪಡೆದುಕೊಂಡಿದೆ.
ಇದನ್ನು “ಕರಾಳ ಕಾಯ್ದೆಯ ವಿರುದ್ಧ ಕಪ್ಪು ಪ್ರತಿಭಟನೆ” ಎಂದು ಕರೆದ ಸ್ಟಾಲಿನ್, ತಮಿಳುನಾಡಿನ ಪ್ರತಿಯೊಂದು ಮನೆಯ ಸದಸ್ಯರು ಭಾಗವಹಿಸುವಂತೆ ಒತ್ತಾಯಿಸಿದ್ದಾರೆ. ಈ ವಿಷಯವನ್ನು ರಾಜ್ಯದ ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಹೋರಾಟವಾಗಿ ರೂಪಿಸಲಾಗಿದೆ. ದೆಹಲಿಯಲ್ಲಿ ತಮಿಳರು ಏನೆಂದು ತೋರಿಸಲು ಇದು ಸಮಯ ಎಂದಿರುವ ಅವರು, ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳನ್ನು ಮರುವಿಂಗಡಿಸುವ ಕ್ರಮದ ವಿರುದ್ಧ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಕೇಂದ್ರದ ವಿರುದ್ಧದ ಟೀಕಿಸಿರುವ ಅವರು, ಈ ಕ್ಷೇತ್ರ ಪುನರ್‌ವಿಂಗಡಣೆ ಕ್ರಮದಿಂದ ಭಾರತ ಕತ್ತಲೆಯ ಯುಗಕ್ಕೆ ಮರಳಲಿದೆ . ರಾಷ್ಟ್ರದ ಬೆಳವಣಿಗೆಗಾಗಿ ಜನಸಂಖ್ಯೆಯನ್ನು ನಿಯಂತ್ರಿಸಿದ್ದಕ್ಕಾಗಿ ತಮಿಳುನಾಡನ್ನು ಶಿಕ್ಷಿಸಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಅಲ್ಲದೇ, ಅದರ ಪರಿಣಾಮವಾಗಿ ಅದರ ರಾಜಕೀಯ ಪ್ರಾತಿನಿಧ್ಯವನ್ನು ಈಗ ಮೊಟಕುಗೊಳಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. .

