ಇಸ್ರೇಲ್ : ಒಂದೆಡೆ ಯುದ್ಧದ ಕಾರ್ಮೋಡ, ಮತ್ತೊಂದೆಡೆ ಯುದ್ಧ ನಿಲ್ಲಿಸಲು ಶಾಂತಿ ಮಾತುಕತೆ. ಇದರ ಮಧ್ಯೆ ಇಸ್ರೇಲ್ ಅಧ್ಯಕ್ಷ ನೆತನ್ಯಾಹು x ನಲ್ಲಿ ಮಾಡಿರುವ ಟ್ವೀಟ್ ಭಾರಿ ಸದ್ದು.
ಕದನ ವಿರಾಮದ ನಂತರವೂ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದೆ. ಯುದ್ಧಕ್ಕೆ ನಾಂದಿ ಹಾಡಿದ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಓಟ ಇನ್ನೂ ಮುಂದುವರೆದಿದೆ. ಇಸ್ರೇಲ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ನೆತನ್ಯಾಹು ನಿರ್ಧಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಈ ನಡುವೆ, ಸ್ವಾರಸ್ಯಕರ ಸನ್ನಿವೇಶವೊಂದು ನೆಟ್ಟಿಗರಲ್ಲಿ ನಗು ತಂದಿದೆ.
ಇತ್ತೀಚೆಗೆ ಟರ್ಕಿಶ್ ಅಧ್ಯಕ್ಷರಿಗೆ ನೆತನ್ಯಾಹು ನೀಡಿದ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸೌತೆಕಾಯಿ ಫೋಟೋ ಒಂದು ವೈರಲ್ ಆಗುತ್ತಿದೆ. ನೆತನ್ಯಾಹು ಮಾಡಿದ್ದ ಟ್ವೀಟ್ಗೆ ಪ್ರತಿಯಾಗಿ ಟಗ್ಬರ್ಕ್ ಎಂಬುವರ ಟ್ವೀಟ್ ಭಾರಿ ಸುದ್ದು ಮಾಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಅಮೆರಿಕ-ಇರಾನ್ ಕದನ ವಿರಾಮದ ಬಗ್ಗೆ ನೀಡಿರುವ ಹೇಳೀಕೆಗಳ ಬಗ್ಗೆ ಟೀಕಿಸಿದ್ದಾರೆ. ಅಲ್ಲದೇ, ಇಸ್ರೇಲ್ ನಿಂದ ದಾಳಿಗಳು ಮುಂದುವರೆಸುವ ಬಗ್ಗೆ ಪ್ರತಿಜ್ಞೆ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಟಗ್ಬರ್ಕ್ ಅವರು ಸೌತೆಕಾಯಿ ಫೋಟೋ ಹಾಕಿ ಈ ಪೋಸ್ಟ್ ನೆತನ್ಯಾಹು ಅವರ ಪೋಸ್ಟ್ಗಿಂತ ಹೆಚ್ಚು ಲೈಕ್ಸ್ ಪಡೆಯಲಿದೆ ಎಂದು ಅವರ ಟ್ವೀಟ್ಗೆ ಟ್ಯಾಗ್ ಮಾಡಿದ್ದರು.
ಈ ಟ್ವೀಟ್ 4 ಲಕ್ಷದ 29 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ನೆತನ್ಯಾಹು ಅವರ ಪೋಸ್ಟ್ಗೆ ಕೇವಲ 72ಸಾವಿರ ಲೈಕ್ಸ್ ಬಂದಿದೆ.
ಇದನ್ನು ಪ್ರತಿಕ್ರಿಯಿಸಿ ಮತ್ತೊಂದು ಪೋಸ್ಟ್ ಹಾಕಿದ ಟಗ್ಬರ್ಕ್ ಅವರು, ಆ ಟ್ವೀಟ್ ಇತಿಹಾಸದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಜಗತ್ತನ್ನು ದ್ವೇಷಿಸುವ ನೆತನ್ಯಾಹು ಅವರನ್ನು ಎಷ್ಟು ತಿರಸ್ಕಾರದಿಂದ ನೋಡಲಾಗುತ್ತದೆ ಎಂಬುದನ್ನು ಈ ಸೌತೆಕಾಯಿ ಪೋಸ್ಟ್ ಹೇಳುತ್ತಿದೆ ಎಂದು ಇಸ್ರೇಲ್ ಅಧ್ಯಕ್ಷ ಬೆನ್ಜಮಿನ್ ನೆತನ್ಯಾಹು ಅವರ ಹೇಳಿಕೆಗಳನ್ನು ಸೌತೆಕಾಯಿಗೆ ಹೋಲಿಸಿ ಟೀಕಿಸಿದ್ದಾರೆ.

