ಸುನಿಲ್ ನರೈನ್ ಇತಿಹಾಸ: ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರ…​

ಬೆಂಗಳೂರು ಏ.10 : ಐಪಿಎಲ್ 2026ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಸತತ ಸೋಲುಗಳಿಂದ ಕಂಗಾಲಾಗಿದ್ದರೂ, ತಂಡದ ಅನುಭವಿ ಸ್ಪಿನ್ನರ್ ಸುನಿಲ್ ನರೈನ್ ಮಾತ್ರ ಅಪ್ರತಿಮ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ನರೈನ್, ಭಾರತದ ನೆಲದಲ್ಲಿ 200 ಟಿ20 ವಿಕೆಟ್ ಪಡೆದ ವಿಶ್ವದ ಮೊದಲ ವಿದೇಶಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾರ್ಚ್ 9ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು ಸೋಲನ್ನೊಪ್ಪಿಕೊಂಡಿತು. ಆದರೆ, ಎದುರಾಳಿ ಬ್ಯಾಟರ್‌ಗಳ ಅಬ್ಬರದ ನಡುವೆಯೂ ನರೈನ್ ಕೇವಲ 13 ರನ್ ನೀಡಿ 1 ವಿಕೆಟ್ (ಮೊಹಮ್ಮದ್ ಶಮಿ) ಪಡೆಯುವ ಮೂಲಕ ಈ ಮೈಲಿಗಲ್ಲು ತಲುಪಿದರು. ಭಾರತದಲ್ಲಿ 183 ಟಿ20 ಪಂದ್ಯಗಳನ್ನು ಆಡಿರುವ ಇವರು ಈಗ 200 ವಿಕೆಟ್‌ಗಳ ಪಡೆದುಕೊಂಡಿದ್ದಾರೆ.  

 ಭಾರತದಲ್ಲಿ ಅತಿ ಹೆಚ್ಚು ಟಿ20 ವಿಕೆಟ್ ಪಡೆದ ವಿದೇಶಿ ಆಟಗಾರರು:

ಆಟಗಾರದೇಶಪಂದ್ಯಗಳುವಿಕೆಟ್‌ಗಳು
ಸುನಿಲ್ ನರೈನ್ವೆಸ್ಟ್ ಇಂಡೀಸ್183200
ಡ್ವೇನ್ ಬ್ರಾವೋವೆಸ್ಟ್ ಇಂಡೀಸ್162190
ರಶೀದ್ ಖಾನ್ಅಫ್ಘಾನಿಸ್ತಾನ142188
ಲಸಿತ್ ಮಾಲಿಂಗಶ್ರೀಲಂಕಾ118156
ಟ್ರೆಂಟ್ ಬೌಲ್ಟ್ನ್ಯೂಜಿಲೆಂಡ್113128

ಭಾರತೀಯರಲ್ಲಿ ಚಹಾಲ್ ಮೊದಲಿಗ
​ಒಟ್ಟಾರೆಯಾಗಿ ಭಾರತದ ನೆಲದಲ್ಲಿ ಅತಿ ಹೆಚ್ಚು ಟಿ20 ವಿಕೆಟ್ ಪಡೆದ ದಾಖಲೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿದೆ. ಚಹಾಲ್ ವಿವಿಧ ತಂಡಗಳ ಪರವಾಗಿ ಒಟ್ಟು 268 ಪಂದ್ಯಗಳಲ್ಲಿ 296 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಕೆಕೆಆರ್ ತಂಡವು ಈ ಟೂರ್ನಿಯಲ್ಲಿ ತನ್ನ ಮೂರನೇ ಸೋಲನ್ನು ಅನುಭವಿಸಿ ಸಂಕಷ್ಟದಲ್ಲಿದ್ದರೂ, ಸುನಿಲ್ ನರೈನ್ ಅವರ ಈ ವೈಯಕ್ತಿಕ ಸಾಧನೆಯು ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ನರೈನ್ ಅವರ ಈ ಸ್ಪಿನ್ ಜಾದೂ ಮುಂಬರುವ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಡಲಿ ಎಂಬುದು ಅಭಿಮಾನಿಗಳ ಆಶಯ.

More articles

Latest article

Most read