ಚಿಕ್ಕಬಳ್ಳಾಪುರ : ಅಪಘಾತದಲ್ಲಿ ನವ ವಿವಾಹಿತೆ ಸೇರಿದಂತೆ ಓರ್ವ ಸಂಬಂಧಿ ಮೃತಪಟ್ಟಿದ್ದು, ಪತಿಗೆ ಗಂಭೀರ ಗಾಯಗಳಾಗಿವೆ.
ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಕ್ರಾಸ್ ಬಳಿ ಕಂಟೇನರ್ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ 5 ತಿಂಗಳ ಹಿಂದೆ ಮದುವೆಯಾಗಿದ್ದ ರಕ್ಷಿತಾ ರೆಡ್ಡಿ(28) ಮತ್ತು ಸಂಬಂಧಿ ಪವನ್ ರೆಡ್ಡಿ(30) ಮೃತಪಟ್ಟಿದ್ದಾರೆ.
ರಕ್ಷಿತಾ ಪತಿ ರಾಜಶೇಖರರೆಡ್ಡಿ ಸ್ಥಿತಿ ಗಂಭೀರವಾಗಿದೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಿತಾ ರೆಡ್ಡಿ ಮತ್ತು ರಾಜಶೇಖರ ರೆಡ್ಡಿ ಕಳೆದ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ಸ್ವಗ್ರಾಮ ಆಂಧ್ರದ ಅನಂತಪುರದ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಶೆಟ್ಟಿಗೆರೆ ಕ್ರಾಸ್ ಬಳಿ ಕಂಟೇನರ್ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್ : ವೇಗವಾಗಿ ಬಂದ ಆಂಧ್ರ ಸಾರಿಗೆ ಬಸ್ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಗುರುವಾರ ಮುಂಜಾನೆ ನಡೆದಿದೆ.
ಅನಂತಪುರ ಮೂಲಕ ಬೆಂಗಳೂರಿಗೆ ಬರ್ತಿದ್ದ ಬಸ್ ಡಿವೈಡರ್‌ಗೆ ಡಿಕ್ಕಿಯಾದ ರಭಸಕ್ಕೆ ಮುಂಭಾಗದ ಚಕ್ರ ಮತ್ತು ಇಂಜಿನ್ ಕಿತ್ತು ಬಂದಿದೆ. ಬಸ್ನಲ್ಲಿರುವ ಪ್ರಯಾಣಿಕರೆಲ್ಲವೂ ಸುರಕ್ಷಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ನವ ವಿವಾಹಿತೆ ಸಾವು
ಗಂಭೀರವಾಗಿ ಗಾಯಗೊಂಡಿರುವ ಪತಿಗೆ ಚಿಕಿತ್ಸೆ