ಸೌಜನ್ಯ ಪ್ರಕರಣದ ಮರುತನಿಖೆಗೆ ಸೂಚಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಮಹಿಳಾ ಆಯೋಗಕ್ಕೆ ʼಕೊಂದವರು ಯಾರುʼ ಮನವಿ

ಬೆಂಗಳೂರು :  ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ ಮತ್ತು ಅಸಹಜ ಸಾವುಗಳ ತನಿಖಾ ವರದಿಯ ಮಾಹಿತಿಯನ್ನು ಕೂಡಲೇ ಸಾರ್ವಜನಿಕಗೊಳಿಸುವಂತೆ ಹಾಗೂ ಸೌಜನ್ಯ ಪ್ರಕರಣದ ಮರುತನಿಖೆಗೆ ಸಮ್ಮತಿ ಸೂಚಿಸಲು ಸರ್ಕಾರಕ್ಕೆ  ಪತ್ರ ಬರೆಯುವಂತೆ ʼಕೊಂದವರು ಯಾರುʼ ಸಂಘಟನೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿಗೆ ಮನವಿ ಸಲ್ಲಿಸಿದ್ದಾರೆ. 

ಕೊಂದವರು ಯಾರು ಸಂಘಟನೆ ಹಲವು ಆಗ್ರಹಗಳನ್ನು ಈಡೇರಿಸುವಂತೆ ಕೋರಿ  ಆಯೋಗಕ್ಕೆ ಪತ್ರ ಸಲ್ಲಿಸಿದ್ದಾರೆ. ಪತ್ರದಲ್ಲಿರುವ ಆಗ್ರಹಗಳು :  ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ ಮತ್ತು ಅಸಹಜ ಸಾವುಗಳಿಗೆ ಸಂಬಂಧಪಟ್ಟ ಎಸ್ಐಟಿ ತನಿಖಾ ವರದಿಯನ್ನು  ಪಡೆದು ಅದರ ಮಾಹಿತಿಯನ್ನು ಕೂಡಲೇ ಸಾರ್ವಜನಿಕಗೊಳಿಸುವುದು.
ಧರ್ಮಸ್ಥಳದಲ್ಲಿ ನಡೆದಿರುವ 74 ಅಸಹಜ ಸಾವುಗಳಿಗೆ ಸಂಬಂಧಿಸಿದ ತನಿಖೆಯ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ 18 ಮಾರ್ಚ್ 2026ರಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವುದನ್ನು ತ್ವರಿತಗತಿಯಲ್ಲಿ  ಪಾಲಿಸಲು ಸೂಚಿಸುವುದು ಹಾಗೂ ಸದರಿ ಮಾಹಿತಿಯನ್ನು ಆಯೋಗವು ಸಂಬಂಧಪಟ್ಟವರಿಂದ ಪಡೆದು ಬಹಿರಂಗಗೊಳಿಸುವ ವ್ಯವಸ್ಥೆ  ಮಾಡುವುದು ಹಾಗೂ

2012ರಲ್ಲಿ ಧರ್ಮಸ್ಥಳದಲ್ಲಿ ಭೀಕರವಾಗಿ ನಡೆದ ಸೌಜನ್ಯಳ ಅತ್ಯಾಚಾರ-ಕೊಲೆ ಪ್ರಕರಣದ ಮರುತನಿಖೆ ನಡೆಸಲು ರಾಜ್ಯ ಸರ್ಕಾರ ಯಾವುದೇ ಕುಂಟು ನೆಪವೊಡ್ಡಿ ಹಿಂದೆ ಸರಿಯದೆ, ಪ್ರಕರಣದ ಮರುತನಿಖೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮ್ಮತಿ ನೀಡಬೇಕೆಂದು ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ  ತಕ್ಷಣ ಸೂಚನೆ ನೀಡುವಂತೆ ಸಂಘಟನೆ ಸದಸ್ಯೆಯರು ಮನವಿ ಮಾಡಿದ್ದಾರೆ. 

ರಾಜ್ಯ ಮಹಿಳಾ ಆಯೋಗವು ಧರ್ಮಸ್ಥಳ ದೌರ್ಜನ್ಯ  ಪ್ರಕರಣಗಳ ತನಿಖೆಯಲ್ಲಿ  ಎಸ್ಐಟಿ ರಚನೆಯಿಂದ ಹಿಡಿದು ಈ ತನಕ ತೆಗೆದುಕೊಂಡಂತೆ ಈಗಲೂ ಈ ಮೇಲಿನ ದಿಟ್ಟ ಕ್ರಮಗಳನ್ನು  ಕೈಗೊಂಡಿದ್ಧೇ ಆದಲ್ಲಿ, ಧರ್ಮಸ್ಥಳದಲ್ಲಿ ಮಹಿಳೆಯರ ಮತ್ತು ಯುವತಿಯರ ಮೇಲೆ ನಡೆದಿರುವ ದೌರ್ಜನ್ಯ, ಹಿಂಸೆ, ಕೊಲೆ, ಅತ್ಯಾಚಾರ, ಅಸಹಜ ಸಾವುಗಳು ಮತ್ತು ನಾಪತ್ತೆ ಪ್ರಕರಣಗಳ ನಿಜವಾದ ಅಪರಾಧಿಗಳು ಪತ್ತೆಯಾಗಲು ಸಾಧ್ಯವಾಗುತ್ತದೆ ಮತ್ತು ಈ ದಿಶೆಯಲ್ಲಿ ಆಯೋಗವು ಈ ವರೆಗೆ ಪ್ರಾಮಾಣಿಕವಾಗಿ ಪಟ್ಟಿರುವ ಶ್ರಮವೂ ಸಾರ್ಥಕವಾಗಲಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಸಂಘಟನೆಯ ಮಧು ಭೂಷಣ್, ಜ್ಯೋತಿ ಎ., ಮಲ್ಲಿಗೆ ಸಿರಿಮನೆ, ಮಮತಾ, ಗೌರಮ್ಮ , ಅಮ್ಮುಲು, ವಿಮಲ ಕೆ.ಎಸ್. ಸೇರಿದಂತೆ ಹಲವರು ಇದ್ದರು. 

ಹಿಂದೆ ನಡೆದಿರುವುದು : ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ ಮತ್ತು ಅಸಹಜ ಸಾವುಗಳ ಸಮಗ್ರ   ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಕೋರಿ ತಾವು ಎಸ್ಐಟಿ ಮುಖ್ಯಸ್ಥರಿಗೆ ಕಳೆದ ಅಕ್ಟೋಬರ್ 31ರಂದು  ಪತ್ರ ಬರೆದಿರುವುದು ಸರಿಯಷ್ಟೇ. ತದನಂತರವೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದಶಿಯವರಿಗೆ ತಾವು  ಜ. 12 ರಂದು ಬರೆದಿರುವ ಪತ್ರದಲ್ಲಿ, ಈ ಸಂಬಂಧ ನಡೆಸಿರುವ ತನಿಖೆಯ ಯಾವುದೇ ವರದಿಯನ್ನೂ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಲಾಗಿಲ್ಲ ಎಂಬುದನ್ನು ಅವರ ಗಮನಕ್ಕೆ ತಂದು, ಈ ನಿಟ್ಟಿನಲ್ಲಿ ಎಸ್‌ಐಟಿ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕೆಂದು ಸದರಿಯವರನ್ನು ಕೋರಿರುತ್ತೀರಿ.

‘ಕೊಂದವರು ಯಾರು’ ಆಂದೋಲನದ ವತಿಯಿಂದ ನಾವೂ ಸಹ  ಫೆ.05  ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು, ಎಸ್‌ಐಟಿ ತನಿಖಾ ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೆ ತಲುಪಿಸುವ ಸಲುವಾಗಿ ಅವರು ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದೆವು. ಆದರೆ ಅವರಿಂದ ಯಾವ ಸ್ಪಂದನೆಯೂ ನಮಗೆ ಈ ತನಕ ಬಂದಿರುವುದಿಲ್ಲ.

ಕುಸುಮಾವತಿ ಅವರು ಈ ಹಿಂದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿರುವ  ಕರ್ನಾಟಕ ಉಚ್ಚ ನ್ಯಾಯಾಲಯವು, ಧರ್ಮಸ್ಥಳದಲ್ಲಿ ನಡೆದಿರುವ 74 ಅಸಹಜ ಸಾವುಗಳ ತನಿಖೆಯ ಕುರಿತು ಎಲ್ಲ ಮಾಹಿತಿಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಮಾರ್ಚ್ 18ರಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವುದು ತಮ್ಮ ಗಮನದಲ್ಲಿದೆ ಎಂದು ನಾವು ನಂಬಿದ್ದೇವೆ. ಸದರಿ ಆದೇಶವು ನಾವೆಲ್ಲರೂ ಆಶಿಸಿದಂತೆ ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳು ಮತ್ತು ನಾಪತ್ತೆ   ಪ್ರಕರಣಗಳ ಸಮಗ್ರ ತನಿಖೆಗೆ ಪುಷ್ಟಿ ನೀಡಲಿದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ. 

ಅಲ್ಲದೇ, ಕುಸುಮಾವತಿಯವರೇ ತಮ್ಮ ಮಗಳು ಸೌಜನ್ಯಳ ಪ್ರಕರಣದ ಮರುತನಿಖೆಗೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅರ್ಜಿ (ಎಸ್.ಎಲ್.ಪಿ.) ಸಲ್ಲಿಸಿದ್ದನ್ನು  ಮಾನ್ಯ  ನ್ಯಾಯಾಲಯದ ವಿಭಾಗೀಯ ಪೀಠವು ಪುರಸ್ಕರಿಸಿ, ಸಿಬಿಐಗೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಮಾರ್ಚ್ 23ರಂದು ನೋಟಿಸ್ ನೀಡಿರುವುದು ಈ ದಿಕ್ಕಿನಲ್ಲಿ ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಆದ್ದರಿಂದ, ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ಮತ್ತು ಯುವತಿಯರ ಅತ್ಯಾಚಾರ, ಕೊಲೆ, ಅಸಹಜ ಸಾವು ಮತ್ತು ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ತಮ್ಮ ಸೂಚನೆಯನ್ವಯ ಸರ್ಕಾರ ಆರಂಭಿಸಿದ ಎಸ್ಐಟಿ ತನಿಖೆಗೆ ಈಗ ತಾವೇ ಪುಷ್ಟಿ ನೀಡಿ, ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಂಘಟನೆ ಸದಸ್ಯರು ಮನವಿ ಮಾಡಿದ್ದಾರೆ. 

More articles

Latest article

Most read