ಡೆತ್ ಓವರ್‌ಗಳ ಕಿಂಗ್: ಭುವಿ ಮ್ಯಾಜಿಕ್ ಬಗ್ಗೆ RCB ಬೌಲಿಂಗ್ ಕೋಚ್ ಹೇಳಿದ್ದೇನು?

ಬೆಂಗಳೂರು ಮಾರ್ಚ್‌ 28 : ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ (RCB) ಮತ್ತು ಎಸ್‌ಆರಎಚ್‌ (SRH) ಪದ್ಯದಲ್ಲಿ ತಂಡದ ಪ್ರಮುಖ ಅಸ್ತ್ರಗಳಲ್ಲಿ ಭುವನೇಶ್ವರ್ ಕುಮಾರ್ ಒಬ್ಬರು.

2025ರ ಐಪಿಎಲ್ ಆವೃತ್ತಿಯಲ್ಲಿ ಅವರು 18.35ರ ಸ್ಟ್ರೈಕ್ ರೇಟ್‌ನಲ್ಲಿ 17 ವಿಕೆಟ್ ಪಡೆಯುವ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ್ದರು. ಹೊಸ ಚೆಂಡಿನಲ್ಲಿ‌ ಮ್ಯಾಜಿಕ್ ಮಾಡುವುದರ ಜೊತೆಗೆ, ಡೆತ್ ಓವರ್‌ಗಳಲ್ಲಿಯೂ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.

ಇತ್ತೀಚೆಗೆ ಆರ್‌ಸಿಬಿ ಆಟಗಾರರ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ರನ್‌ಗಳ ಮಳೆ ಹರಿದರೂ, ಭುವನೇಶ್ವರ್ ಕುಮಾರ್ ಮಾತ್ರ ತಮ್ಮ 3 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 27 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಸ್ಥಿರ ಪ್ರದರ್ಶನ ನೀಡಿದರು. ಬ್ಯಾಟರ್‌ಗಳ ಹೊಡೆತಗಳಿಗೆ ಬ್ರೇಕ್ ಹಾಕಲು ಅವರು ಬಳಸಿದ ವೈವಿಧ್ಯಮಯ ಎಸೆತಗಳು ಗಮನ ಸೆಳೆದವು.

ಆರ್‌ಸಿಬಿ ‘ಬೋಲ್ಡ್ ಡೈರೀಸ್’ನಲ್ಲಿ ಮಾತನಾಡಿದ ತಂಡದ ಬೌಲಿಂಗ್ ಕೋಚ್ ಓಂಕಾರ ಸಾಳ್ವಿ, ಭುವನೇಶ್ವರ್ ಕುಮಾರ್ ಅವರ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಭುವಿ ಅವರ ಅನುಭವವು ತಂಡಕ್ಕೆ ಹೇಗೆ ವರದಾನವಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಓಂಕಾರ ಸಾಳ್ವಿ ಅವರು ಭುವನೇಶ್ವರ್‌ ಬಗ್ಗೆ ಏನು ಹೇಳಿದರು.

“ಖಂಡಿತವಾಗಿಯೂ, ಭುವಿ ಅವರ ಬಳಿ ಇರುವ ಅಪಾರ ಅನುಭವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಕ್ರಿಕೆಟ್ ಜೀವನದಲ್ಲಿ ಎದುರಿಸಿರುವ ಹಲವಾರು ಸನ್ನಿವೇಶಗಳು ಪಂದ್ಯದ ಒತ್ತಡದ ಕ್ಷಣಗಳನ್ನು ನಿಭಾಯಿಸಲು ಅವರಿಗೆ ಸಹಾಯ ಮಾಡುತ್ತವೆ. ಭುವಿ ಅವರ ವಿಶೇಷತೆಯೇ ಅದು. ಅವರು ವಿಷಯಗಳನ್ನು ತುಂಬಾ ಸರಳವಾಗಿಡುತ್ತಾರೆ ಮತ್ತು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವುದರ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ತಮ್ಮ ಸಾಮರ್ಥ್ಯದ ಮೇಲೆ ಅವರಿಗೆ ಸಂಪೂರ್ಣ ನಂಬಿಕೆಯಿದೆ.”

More articles

Latest article

Most read