ಇರಾನ್-ಇಸ್ರೇಲ್ ಯುದ್ಧದ ಅಪ್‌ಡೇಟ್ಸ್

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ನಿಯಂತ್ರಣ ಮೀರುತ್ತಿದೆ. ಇಂದು ಬೆಳಿಗ್ಗೆ ಇಸ್ರೇಲ್ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಸರಣಿ ವಾಯುದಾಳಿ ನಡೆಸುವ ಮೂಲಕ ಯುದ್ಧವನ್ನು ತೀವ್ರಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ.

ಟೆಹ್ರಾನ್ ಮೇಲೆ ಇಸ್ರೇಲ್‌ನಿಂದ ಸರಣಿ ಸ್ಫೋಟ

ಇಂದು ಬೆಳಿಗ್ಗೆ ಇಸ್ರೇಲ್ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್ ಮೇಲಿನ “ಆಡಳಿತಾತ್ಮಕ ಗುರಿಗಳನ್ನು” ಗುರಿಯಾಗಿಸಿ ಭೀಕರ ದಾಳಿ ನಡೆಸಿದೆ. ಟೆಹ್ರಾನ್‌ನಲ್ಲಿ ಸುಮಾರು 10ಕ್ಕೂ ಹೆಚ್ಚು ಭಾರಿ ಸ್ಫೋಟಗಳು ಸಂಭವಿಸಿದ್ದು, ನಗರದಾದ್ಯಂತ ಕಪ್ಪು ಹೊಗೆ ಆವರಿಸಿದೆ ಎಂದು ವರದಿಯಾಗಿದೆ.

ಸೌದಿ ಅರೇಬಿಯಾದ ಅಮೆರಿಕ ನೆಲೆ ಮೇಲೆ ಇರಾನ್ ಪ್ರತಿ ದಾಳಿ

ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದ್ದು, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ‘ಪ್ರಿನ್ಸ್ ಸುಲ್ತಾನ್ ಏರ್ ಬೇಸ್’ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಕನಿಷ್ಠ 10 ಅಮೆರಿಕನ್ ಸೈನಿಕರು ಗಾಯಗೊಂಡಿದ್ದು, ಹಲವು ಯುದ್ಧ ವಿಮಾನಗಳು ಜಖಂಗೊಂಡಿವೆ ಎಂದು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ.

 ಯುಎಇ (UAE) ಮೇಲೆ ಕ್ಷಿಪಣಿ ದಾಳಿ ತಡೆ

ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಯುಎಇ ವಾಯು ರಕ್ಷಣಾ ವ್ಯವಸ್ಥೆಯು ಅಬುಧಾಬಿ ಬಳಿ ಯಶಸ್ವಿಯಾಗಿ ಹೊಡೆದುರುಳಿಸಿದೆ. ಕ್ಷಿಪಣಿಯ ಅವಶೇಷಗಳು ಬಿದ್ದಿದ್ದರಿಂದ ಅಬುಧಾಬಿಯ ಕೈಗಾರಿಕಾ ವಲಯದಲ್ಲಿ (KEZAD) ಬೆಂಕಿ ಕಾಣಿಸಿಕೊಂಡಿದ್ದು, ಐವರು ಗಾಯಗೊಂಡಿದ್ದಾರೆ.

 ಸ್ಟ್ರೈಟ್ ಆಫ್ ಹಾರ್ಮುಜ್ (Strait of Hormuz) ಬಂದ್ ಎಚ್ಚರಿಕೆ

ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಅನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಇರಾನ್ ಎಚ್ಚರಿಸಿದೆ. ಒಂದು ವೇಳೆ ಇದು ಸಂಭವಿಸಿದರೆ ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರುವ ಆತಂಕ ಎದುರಾಗಿದೆ. ಈಗಾಗಲೇ ತೈಲ ಬೆಲೆಯಲ್ಲಿ ಶೇ. 40-50 ರಷ್ಟು ಏರಿಕೆಯಾಗಿದೆ.

 ಭಾರತದ ಮೇಲೆ ಪ್ರಭಾವ

ಯುದ್ಧದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯ ಬಳಿ ಭಾರತಕ್ಕೆ ಬರಬೇಕಿದ್ದ 5 ಎಲ್‌ಪಿಜಿ (LPG) ಹಡಗುಗಳು ಸ್ಥಗಿತಗೊಂಡಿವೆ. ಪರಿಸ್ಥಿತಿಯನ್ನು ಗಮನಿಸಲು ಭಾರತ ಸರ್ಕಾರವು ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಚಿವರ ಸಮಿತಿಯನ್ನು ರಚಿಸಿದೆ.

ಕುವೈತ್ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ

ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅನೇಕ ಡ್ರೋನ್ ದಾಳಿಗಳು ನಡೆದಿದ್ದು, ಅದರ ರಾಡಾರ್ ವ್ಯವಸ್ಥೆಗಳಿಗೆ ಗಮನಾರ್ಹ ಹಾನಿಯಾಗಿದೆ ಎಂದು ಕುವೈತ್ ಸುದ್ದಿ ಸಂಸ್ಥೆ ಹೇಳಿದೆ. ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದರೂ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ದೃಢಪಡಿಸಿದ್ದಾರೆ.

More articles

Latest article

Most read