ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಸೋತಿದ್ದೆಷ್ಟು?, ಗೆದ್ದಿದ್ದೆಷ್ಟು?

ಬೆಂಗಳೂರು : ನಾಳೆ 19ನೇ ಆವೃತ್ತಿಯ ಐಪಿಎಲ್‌ ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ – ಎಸ್‌ಆರ್‌ಹೆಚ್‌ ತಂಡಗಳು ಸೆಣಸಲಿವೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ, ತವರು ನೆಲದಲ್ಲಿ ಐಪಿಎಲ್‌ ಆರಂಭದಿಂದ ಇದುವರೆಗೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಷ್ಟು ಮ್ಯಾಚ್‌ಗಳನ್ನು ಆಡಿದೆ ಎಂಬುದು ಕುತೂಹಲ. ಆಡಿರುವ ಮ್ಯಾಚ್‌ಗಳಲ್ಲಿ ಎಷ್ಟು ಪಂದ್ಯಗಳನ್ನು ಗೆದ್ದಿದೆ, ಎಷ್ಟು ಪಂದ್ಯಗಳನ್ನು ಸೋತಿದೆ, ಐಪಿಎಲ್‌ ಸೀಸನ್‌ಗಳಲ್ಲಿ ಸ್ಟೇಡಿಯಂ ಎಷ್ಟು ಮಹತ್ವದ್ದಾಗಿದೆ? ಎಂಬುದನ್ನು ನೋಡೋಣ.

 ಆರ್‌ಸಿಬಿ 2008 ರಿಂದ 2025 ರವರೆಗೆ ಈ ಕ್ರೀಡಾಂಗಣದಲ್ಲಿ 96 ಪಂದ್ಯಗಳನ್ನು ಆಡಿದೆ. ಅದರಲ್ಲಿ  45 ಪಂದ್ಯಗಳನ್ನು ಗೆದ್ದಿದೆ.   51 ಪಂದ್ಯಗಳನ್ನು ಸೋತಿದೆ. ಈ ಅಂಕಿ ಅಂಶಗಳನ್ನು ನೋಡಿದರೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಗೆದ್ದಿರುವುದು ಕಡಿಮೆ.

ಚಿನ್ನಸ್ವಾಮಿಯಲ್ಲಿ ಅತಿ ಹೆಚ್ಚು ಐಪಿಎಲ್‌ ಸ್ಕೋರ್
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಏಪ್ರಿಲ್ 15, 2024 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗಳಿಸಿದ 287/3 ರನ್‌ಗಳು ಅತ್ಯಧಿಕ ತಂಡದ ಮೊತ್ತವಾಗಿದೆ. ಈ ಅದ್ಭುತ ಸ್ಕೋರ್ 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ನಿರ್ಮಿಸಿದ್ದ 263/5 ರನ್‌ಗಳ ಹಿಂದಿನ  ದಾಖಲೆಯನ್ನು ಮುರಿದಿದೆ. 

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ದಾಖಲೆಗಳು:

ಈ ಕ್ರೀಡಾಂಗಣವು ತನ್ನ ಸಣ್ಣ ಬೌಂಡರಿಗಳಿಗೆ ಹೆಸರು ವಾಸಿಯಾಗಿದೆ, ಇದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಮೈದಾನಗಳಲ್ಲಿ ಒಂದಾಗಿದೆ, ಅಲ್ಲಿ ಬಹು 200+ ಸ್ಕೋರ್‌ಗಳು ದಾಖಲಾಗಿವೆ.

ತಂಡದ ಗರಿಷ್ಟ ಸ್ಕೋರ್‌ : 287/3 – SRH vs RCB (2024)

ಗರಿಷ್ಠ ವೈಯಕ್ತಿಕ ಸ್ಕೋರ್: 175* – ಕ್ರಿಸ್ ಗೇಲ್ (RCB) vs ಪುಣೆ ವಾರಿಯರ್ಸ್ (2013)

ಗರಿಷ್ಠ ಯಶಸ್ವಿ ರನ್ ಚೇಸ್: 186/3 – ಡೆಕ್ಕನ್ ಚಾರ್ಜರ್ಸ್ vs RCB

ತಂಡದ ಕಡಿಮೆ ಸ್ಕೋರ್‌ : 82 – RCB vs ಕೋಲ್ಕತ್ತಾ ನೈಟ್ ರೈಡರ್ಸ್

More articles

Latest article

Most read