ಆರ್‌ಸಿಬಿ ಫ್ಯಾನ್ಸ್‌ಗೆ ವಿಜಯ್‌ ಮಲ್ಯ ಏನಂದ್ರು ಗೊತ್ತಾ?

50 ಕೋಟಿ 16,500 ಕೋಟಿ ರೂ. ಆಗಿದ್ದಕ್ಕೆ ಖುಷಿ ಅಂದ ವಿಜಯ್‌ ಮಲ್ಯ

ಬೆಂಗಳೂರು : ಇನ್ನೇನು ಎರಡು ದಿನದಲ್ಲಿ ಐಪಿಎಲ್‌ 19 ನೇ ಆವೃತ್ತಿಗೆ ಬೆಂಗಳೂರಿನಿಂದಲೇ ಹಾಲಿ ಚಾಂಪಿಯನ್‌ ಆರ್‌ಸಿಬಿ ಕಣಕ್ಕಿಳಿಯುವ ಮೂಲಕವೇ ಅಧಿಕೃತ ಚಾಲನೆ ಸಿಗಲಿದೆ.
ಮುಖ್ಯವಾಗಿ ಆರ್‌ಸಿಬಿ ತಂಡ ಊಹಿಸಲೂ ಅಸಾಧ್ಯವಾದಂತಹ ಮೊತ್ತಕ್ಕೆ ಮಾರಾಟವಾಗಿರುವುದು ಇಡೀ ಕ್ರಿಕೆಟ್‌ ಜಗತ್ತೆ ತಿರುಗಿ ನೋಡುವಂತೆ ಮಾಡಿದೆ. ಹೌದು, ಬಿರ್ಲಾ ಗ್ರೂಪ್‌ ಗೆ ಆರ್‌ಸಿಬಿ ತಂಡ ಬರೋಬ್ಬರಿ 16,500 ಕೋಟಿ ರೂಪಾಯಿಗೆ ಸೇಲ್‌ ಆಗಿದೆ. ಅಚ್ಚರಿ ಆದ್ರೂ ಸತ್ಯ.
ಕಳೆದ 2008 ರಲ್ಲಿ ಅಂದರೆ 18 ವರ್ಷಗಳ ಹಿಂದೆ ಈ ತಂಡವನ್ನು ವಿಜಯ್‌ ಮಲ್ಯ ಖರೀದಿಸಿದ್ದರು. ಅದು 450 ಕೋಟಿ ರೂಪಾಯಿಗೆ. ಆರ್‌ಸಿಬಿ ತಂಡಕ್ಕೆ ವರ್ಷದಿಂದ ವರ್ಷಕ್ಕೆ ಅಭಿಮಾನಿಗಳು ಹೆಚ್ಚಾಗುತ್ತಾ ಹೋದರು. ಆದರೆ, ತಂಡ ಮಾತ್ರ ಕಪ್‌ ಗೆಲ್ಲುವಲ್ಲಿ ಹಿಂದೆಯೇ ಉಳಿದಿತ್ತು.
ಅಭಿಮಾನಿಗಳಂತೂ ಬಿಟ್ಟು ಬಿಡದೇ ಸೋತ ತಂಡವನ್ನು ಮತ್ತಷ್ಟು ಚಿಯರ್‌ ಮಾಡುತ್ತಲೇ ಹೋದರೂ. ಕೊನೆಗೂ ಕಳೆದ ವರ್ಷ ಅಂದರೆ 18 ನೇ ಆವೃತ್ತಿಯಲ್ಲಿ ಆರ್‌ಸಿಬಿ ಕಪ್‌ ಗೆದ್ದು ಅಭಿಮಾನಿಗಳನ್ನು ಎಮೋಷನ್‌ ಮಾಡಿದರು.

ಇಷ್ಟು ದಿನ ಈ ತಂಡದ ಜವಾಬ್ದಾರಿ ಹೊತ್ತಿದ್ದ ವಿಜಯ್‌ ಮಲ್ಯ, ಕೊನೆಗೆ ಕಪ್‌ ಗೆಲ್ಲಿಸಿಕೊಟ್ಟ ತಂಡವನ್ನು ʼಬೆಸ್ಟ್‌ ಪ್ರೈಸ್‌ಗೆ ಸೇಲ್‌ʼ ಮಾಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಅಭಿಮಾನಿಗಳಿಗೆ ಒಂದು ಮೇಸೆಜ್‌ ಕೊಟ್ಟಿದ್ದಾರೆ.

“ಆರ್‌ಸಿಬಿಯ ಹೊಸ ಮಾಲೀಕರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಐಪಿಎಲ್‌ನ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಪಡೆದ ಅವರಿಗೆ ನಾನು ಶುಭ ಹಾರೈಸುತ್ತೇನೆ.

2008 ರಲ್ಲಿ ನಾನು ಆರ್‌ಸಿಬಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗಳಿಗೆ ಖರೀದಿಸಿದಾಗ, ಹೆಚ್ಚಿನ ಜನರು ನನ್ನನ್ನು ನೋಡಿ ನಕ್ಕರು ಮತ್ತು ನನ್ನ ಹೂಡಿಕೆಯನ್ನು ವ್ಯರ್ಥ ಯೋಜನೆ ಎಂದು ಟೀಕಿಸಿದರು.
ನನ್ನ ಬಹು ಪ್ರಚಾರದ ಹುಚ್ಚುತನದ ಹಿಂದೆ ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ನಿರ್ಮಿಸುವುದು ಇತ್ತು ಮತ್ತು ಆದ್ದರಿಂದ ನಾನು ಫ್ರಾಂಚೈಸಿಗೆ ಆರ್‌ಸಿಬಿ ಎಂದು ಹೆಸರಿಸಿದೆ.
ನನ್ನ 450 ಕೋಟಿ ರೂಪಾಯಿ ಹೂಡಿಕೆ 16,500 ಕೋಟಿ ರೂಪಾಯಿಗಳಿಗೆ ಬೆಳೆಯುವುದನ್ನು ನೋಡಲು ಅಪಾರ ಸಂತೋಷವಾಗಿದೆ. ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿಯುತ್ತದೆ. ಅವರು ಈಗ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ನನ್ನ ಆಡಳಿತದ ಸಮಯದಲ್ಲಿ ಮತ್ತು ಅದಕ್ಕೂ ಮೀರಿದ ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ, ಕೃತಜ್ಞತಾಪೂರ್ವಕ ಧನ್ಯವಾದಗಳು ಮತ್ತು ದಯವಿಟ್ಟು ಬೆಂಗಳೂರಿನ ಸಿಂಹ ಆರ್‌ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ. ನಮಸ್ಕಾರ.” ಎಂದಿದ್ದಾರೆ.

ಆರ್‌ಸಿಬಿ ತಂಡದ ಫ್ರಾಂಚೈಸಿ ಯಾರ ಪಾಲಾದರೇನೂ ಅಭಿಮಾನಿಗಳಿಗೆ ಎಂದೆಂದಿಗೂ ಆರ್‌ಸಿಬಿ ಬೆಂಗಳೂರಿನ ತಂಡವಷ್ಟೇ. ಅಭಿಮಾನಿಗಳಿಗೆ ಬೇಕಿರುವುದು ಕಪ್‌ ಮಾತ್ರ. ಅದು ಮತ್ತೆ ಮತ್ತೆ ಆರ್‌ಸಿಬಿ ಕಪ್‌ ಗೆಲ್ಲಬೇಕು ಅಷ್ಟೇ.

More articles

Latest article

Most read