ಆ 11 ಮಂದಿಯ ಸ್ಮಾರಣಾರ್ಥ ಸ್ಮಾರಕ ಅನಾವರಣ

ʻಮೆಮೋರಿ ಆಫ್ ಫ್ಯಾನ್ಸ್ ಜೂನ್-4 2025ʼ

ಬೆಂಗಳೂರು : ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡ 11 ಜನ ಆರ್‌ಸಿಬಿ ಅಭಿಮಾನಿಗಳ ಸ್ಮರಣಾರ್ಥವಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರ ಆವರಣದಲ್ಲಿ ನಿರ್ಮಿಸಲಾದ ಸ್ಮಾರಕವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ಅನಾವರಣಗೊಳಿಸಿ, ಗೌರವ ಸಲ್ಲಿಸಿದರು. ʻಮೆಮೋರಿ ಆಫ್ ಫ್ಯಾನ್ಸ್ ಜೂನ್-4 2025ʼ ಎಂದು ಸ್ಮಾರಕದ ಮೇಲೆ ಬರೆಯಲಾಗಿದೆ.
ಇದಕ್ಕೂ ಮೊದಲು ಸ್ಟೇಡಿಯಂ ಒಳಗಡೆ ಗಣ ಹೋಮ ನಡೆಸಲಾಯಿತು.

ಜಿ. ಪರಮೇಶ್ವರ್‌ ಮಾತನಾಡಿ, ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ಇದೇ ಸ್ಟೇಡಿಯಂ ಬಳಿ ದುರಂತ ನಡೆದಿತ್ತು. ಇದರಿಂದ ಕೆಎಸ್‌ಸಿಎ ಮತ್ತು ಸರ್ಕಾರ ಟೀಕೆಗೆ ಒಳಗಾಗಿತ್ತು. ಕುನ್ಹಾ ವರದಿ ಪ್ರಕಾರ, ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕೆಎಸ್‌ಸಿಎಗೆ ಅಭಿನಂದನೆ ಸಲ್ಲಿಸ್ತಿನಿ. ಸಾವನ್ನಪ್ಪಿದವರಿಗಾಗಿ ವಿಶೇಷ ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. ಮಾರ್ಚ್ 28 ರಂದು ನಡೆಯುವ ಐಪಿಎಲ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಇಂತಹ ದುರ್ಘಟನೆ ಮರುಕಳಿಸದ ಹಾಗೇ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರಾದ ಎನ್.ಎ.ಹ್ಯಾರೀಸ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಕುಮಾರ್, ಕೆಎಸ್‌ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್, ಆರ್‌ಸಿಬಿ ಸಿಇಒ ರಾಜೇಶ್ ಮೆನನ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಕೆಎಸ್‌ಸಿಎ ಪದಾಧಿಕಾರಿಗಳಾದ ಸಂತೋಷ್ ಮೆನನ್, ಸುಜಿತ್ ಸೋಮಸುಂದರ್, ವಿನಯ್ ಮೃತ್ಯುಂಜಯ ಮುಂತಾದವರು ಇದ್ದರು

ಚಿನ್ನಸ್ವಾಮಿ ಸ್ಟೇಡಿಐಂ ಭದ್ರತೆ ಹೀಗಿದೆ.
ಪಂದ್ಯಗಳು : 5   ಪಂದ್ಯಗಳನ್ನು ಆಯೋಜಿಸಲಾಗಿದೆ.

ಗೌರವ: ಜೂನ್ 2025 ರ ಕಾಲ್ತುಳಿತದಿಂದ ಮೃತಪಟ್ಟವರ ಸ್ಮರಣಾರ್ಥಗೌರವ ಸಲ್ಲಿಸಲು 11 ಸೀಟುಗಳು ಶಾಶ್ವತವಾಗಿ ಖಾಲಿಯಾಗಿರುತ್ತವೆ.

ಸುರಕ್ಷತಾ ನವೀಕರಣಗಳು: ಉತ್ತಮ, ಗೊತ್ತುಪಡಿಸಿದ ಹೋಲ್ಡಿಂಗ್ ಪ್ರದೇಶಗಳು ಮತ್ತು ಪ್ರವೇಶ/ನಿರ್ಗಮನ ಪ್ರೋಟೋಕಾಲ್‌ಗಳು ಸೇರಿದಂತೆ ಸುಧಾರಿತ ಜನಸಂದಣಿ ನಿರ್ವಹಣೆಗಾಗಿ   ಸುಮಾರು 7 ಕೋಟಿ ರೂ. ಹೂಡಿಕೆ ಮಾಡಲಾಗಿದೆ.

ಟಿಕೆಟ್ ಮತ್ತು ಪ್ರವೇಶ: QR ಪರಿಶೀಲನೆಯೊಂದಿಗೆ ಟಿಕೆಟ್‌ಗಳನ್ನು ವರ್ಗಾಯಿಸಲಾಗುವುದಿಲ್ಲ ಮತ್ತು ಗೇಟ್‌ಗಳು ನಾಲ್ಕು ಗಂಟೆಗಳ ಮುಂಚಿತವಾಗಿಯೇ ತೆರೆಯಲಿವೆ.

ಸಾರಿಗೆ: ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಕ್ರಿಕೆಟ್ ಟಿಕೆಟ್‌ಗ‌ ಪಡೆದವರಿಗೆ ಉಚಿತ ಮೆಟ್ರೋ ಪ್ರವೇಶವಿದೆ, ಹಾಗೆಯೇ, ಮುಂಚಿತವಾಗಿ ಬುಕ್ ಮಾಡಿದವರಿಗೆ ಪಾರ್ಕಿಂಗ್ ಸೌಲಭ್ಯವಿದೆ. 

ಅಭ್ಯಾಸ: ಅಭಿಮಾನಿಗಳನ್ನು ಗೌರವಿಸಲು ಪಂದ್ಯದ ದಿನಗಳಲ್ಲಿ ಆಟಗಾರರು ಅಭ್ಯಾಸದ ಸಮಯದಲ್ಲಿ #11 ಜೆರ್ಸಿಗಳನ್ನು ಧರಿಸುತ್ತಾರೆ.

More articles

Latest article

Most read