ಇರಾನ್‌ ಜೊತೆ ಫಲಪ್ರದ ಮಾತುಕತೆ: ವಿದ್ಯುತ್‌ ಸ್ಥಾವರಗಳ ಮೇಲಿ ದಾಳಿ 5 ದಿನಗಳ ಕಾಲ ಮುಂದೂಡಿದ ಟ್ರಂಪ್

ವಾಷಿಂಗ್ಟನ್/ತೆಹ್ರಾನ್/ದುಬೈ, ಮಾರ್ಚ್ 23, 2026
ಇರಾನ್-ಅಮೆರಿಕಾ-ಇಸ್ರೇಲ್ ಸಂಘರ್ಷದ ನಾಲ್ಕನೇ ವಾರದಲ್ಲಿ ಆಶ್ಚರ್ಯಕರ ವಿದ್ಯಮಾನಗಳು ಜರುಗಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಶಕ್ತಿ ಮೂಲಸೌಕರ್ಯಗಳ ಮೇಲಿನ ಯಾವುದೇ ಸೈನಿಕ ದಾಳಿಗಳನ್ನು ಐದು ದಿನಗಳ ಕಾಲ ಮುಂದೂಡಿರುವುದಾಗಿ ಘೋಷಿಸಿದ್ದಾರೆ.

ಶನಿವಾರ ರಾತ್ರಿ ನೀಡಿದ್ದ 48 ಗಂಟೆಗಳ ಗಡುವನ್ನು ತೆರವುಗೊಳಿಸಿರುವ ಡೊನಾಲ್ಡ್‌ ಟ್ರಂಪ್‌, ಇರಾನ್‌ ಜೊತೆಗೆ ಉತ್ತಮ ಮತ್ತು ಪರಿಣಾಮಕಾರಿ ಮಾತುಕತೆ ನಡೆದಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಶನಿವಾರವಷ್ಟೇ ಟ್ರಂಪ್ ಅವರು ಇರಾನ್ ಸ್ಟ್ರೇಟ್ ಆಫ್ ಹಾರ್ಮುಜ್ ಅನ್ನು ಸಂಪೂರ್ಣವಾಗಿ ತೆರೆಯದಿದ್ದರೆ ದೊಡ್ಡ ಶಕ್ತಿ ಸ್ಥಾವರಗಳನ್ನು “ಸಂಪೂರ್ಣ ನಾಶ” ಮಾಡುವುದಾಗಿ ಎಚ್ಚರಿಸಿದ್ದರು.

ಟ್ರಂಪ್ ಅವರು ತಮ್ಮ ಟ್ರೂಥ್ ಸೋಶಿಯಲ್ ಪೋಸ್ಟ್‌ನಲ್ಲಿ “ಇರಾನ್‌ನೊಂದಿಗೆ ಇತ್ತೀಚಿನ ಎರಡು ದಿನಗಳಲ್ಲಿ ಬಹಳ ಉತ್ತಮ ಮತ್ತು ಪರಿಣಾಮಕಾರಿ ಸಂಭಾಷಣೆಗಳು ನಡೆದಿವೆ. ಇದರಿಂದಾಗಿ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಶಕ್ತಿ ಮೂಲಸೌಕರ್ಯಗಳ ಮೇಲಿನ ಯಾವುದೇ ದಾಳಿಗಳನ್ನು ಐದು ದಿನಗಳ ಕಾಲ ಸ್ಥಗಿತಗೊಳಿಸಿ ಎಂದು ಸೇನಾಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಹೊಸ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕ ಶಾಂತಿ ಭರವಸೆ ನೀಡಿದೆಯಾದರೂ ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ.

ಪ್ರಮುಖ ಬೆಳವಣಿಗೆಗಳು:
• ಟ್ರಂಪ್ ಅವರ 48 ಗಂಟೆಗಳ ಗಡುವು ಸೋಮವಾರ ರಾತ್ರಿ ಮುಗಿಯಬೇಕಿತ್ತು, ಆದರೆ ಈಗ ಐದು ದಿನಗಳ ವಿಸ್ತರಣೆಯೊಂದಿಗೆ ಶಾಂತಿ ಮಾತುಕತೆಯ ದಾರಿ ತೆರೆದುಕೊಂಡಿದೆ.
• ಇರಾನ್ ಸರ್ಕಾರ ಮತ್ತು IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ತೀವ್ರ ಪ್ರತಿಕ್ರಿಯೆ ನೀಡಿದ್ದು: ಅಮೆರಿಕಾ ದಾಳಿ ನಡೆಸಿದರೆ ಹಾರ್ಮುಜ್ ಕಾಲುವೆಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಮತ್ತು ಗಲ್ಫ್ ದೇಶಗಳ ಶಕ್ತಿ, ನೀರು ಮತ್ತು ಡಿಸ್ಯಾಲಿನೇಷನ್ ಸೌಲಭ್ಯಗಳ ಮೇಲೆ ಪ್ರತಿದಾಳಿಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದೆ.
• ಇರಾನ್ ಪಾರ್ಲಿಮೆಂಟ್ ಸ್ಪೀಕರ್ ಮೊಹಮ್ಮದ್ ಬಾಗರ್ ಘಲಿಬಾಫ್: ಇರಾನ್‌ನ ಶಕ್ತಿ ಸೌಲಭ್ಯಗಳ ಮೇಲೆ ದಾಳಿ ನಡೆಸಿದರೆ ಪ್ರಾದೇಶಿಕ ಶಕ್ತಿ ಸೌಲಭ್ಯಗಳನ್ನು ನಾಶ ಮಾಡಲಾಗುವುದು ಎಂದು ಹೇಳಿದ್ದಾರೆ.
• ಗ್ಲೋಬಲ್ ಎನರ್ಜಿ ಕ್ರೈಸಿಸ್: ಹಾರ್ಮುಜ್ ಕಾಲುವೆಯ ಮೂಲಕ ವಿಶ್ವದ 20% ತೈಲ ಮತ್ತು ಎಲ್‌ಎನ್‌ಜಿ ಸಾಗಣೆ ನಿಂತಿದ್ದು, ಐಇಎ (ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ) ಇದನ್ನು 1970ರ ದಶಕದ ತೈಲ ಸಂಕಷ್ಟಕ್ಕಿಂತಲೂ ಭಯಾನಕ ಎಂದು ಎಚ್ಚರಿಸಿದೆ. ಏಷ್ಯಾದ ಸ್ಟಾಕ್ ಮಾರ್ಕೆಟ್‌ಗಳು ಕುಸಿದಿವೆ.

ಡೊನಾಲ್ಡ್‌ ಟ್ರಂಪ್‌ ನಿರ್ಧಾರದ ನಂತರ ತಾತ್ಕಾಲಿಕ ಶಾಂತಿ ಭರವಸೆ ಇದ್ದರೂ, ಇರಾನ್ ತನ್ನ ನಿಲುವನ್ನು ಬದಲಾಯಿಸಿಲ್ಲ. ಮುಂದಿನ ಐದು ದಿನಗಳಲ್ಲಿ ಮಾತುಕತೆಗಳು ಫಲ ನೀಡದಿದ್ದರೆ ಯುದ್ಧ ಇನ್ನಷ್ಟು ತೀವ್ರಗೊಳ್ಳಬಹುದು ಎಂಬ ಆತಂಕ ಉಂಟಾಗಿದೆ.

More articles

Latest article

Most read