ಅಂಚೆ ಇಲಾಖೆಯಿಂದ ‘24 ಸ್ಪೀಡ್ ಪೋಸ್ಟ್’ ಸೇವೆ ಕಾರ್ಯಾರಂಭ

ಬೆಂಗಳೂರು ಸೇರಿದಂತೆ ಆರು ಮಹಾನಗರಗಳ 42 ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯ

ಬೆಂಗಳೂರು: ಭಾರತೀಯ ಅಂಚೆ ಇಲಾಖೆ ತುರ್ತು ಮತ್ತು ಸಮಯ ಮಿತಿಯೊಳಗಿನ ಸರಕುಗಳ ವಿತರಣೆಯನ್ನು ಇನ್ನಷ್ಟು ವೇಗವಾಗಿ ಹಾಗೂ ವಿಶ್ವಾಸಾರ್ಹವಾಗಿ ಮಾಡಲು ‘24 ಸ್ಪೀಡ್ ಪೋಸ್ಟ್’ ಎಂಬ ಹೊಸ ಸೇವೆಯನ್ನು ಮಾ.17ರಿಂದ ಪ್ರಾರಂಭಿಸಿದೆ.

ನವದೆಹಲಿಯ ಆಕಾಶವಾಣಿ ಭವನದ ರಂಗಭವನ ಸಭಾಂಗಣದಲ್ಲಿ ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹಾಗೂ ಸಂವಹನ ಖಾತೆ ರಾಜ್ಯ ಸಚಿವರಾದ ಡಾ. ಚಂದ್ರ ಶೇಖರ್ ಪೆಮ್ಮಸಾನಿ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಸೇವೆಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರಿನ ಜಿಪಿಒದಲ್ಲಿರುವ ಮೇಘದೂತ ಸಭಾಂಗಣದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಅವರು ಅಂಚೆ ಮಹಾಕಾರ್ಯಾಲಯದ ಆವರಣದಿಂದ ಮೊಬೈಲ್ ಥಿಯೇಟರ್ ವ್ಯಾನ್‌ಗಳಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
‘24 ಸ್ಪೀಡ್ ಪೋಸ್ಟ್’ ಸೇವೆಯು ಮರುದಿನವೇ ಖಾತರಿಯ ವಿತರಣೆಯನ್ನು ಒದಗಿಸುವ ವಿಶೇಷತೆಯನ್ನು ಹೊಂದಿದೆ. ಇದರೊಂದಿಗೆ ‘48 ಸ್ಪೀಡ್ ಪೋಸ್ಟ್’ ಸೇವೆಯೂ ಲಭ್ಯವಿದ್ದು, ನಿರ್ದಿಷ್ಟ ಪ್ರಕ್ರಿಯೆಗಳು ಹಾಗೂ ಆದ್ಯತೆಯ ವಾಯು ಸಾಗಣೆ ಮೂಲಕ ಈ ಸಮಯ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಮೊದಲ ಹಂತದಲ್ಲಿ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಹಾಗೂ ಹೈದರಾಬಾದ್ ಸೇರಿದಂತೆ ಆರು ಪ್ರಮುಖ ಮಹಾನಗರಗಳಲ್ಲಿ ಈ ಸೇವೆ ಜಾರಿಗೊಳ್ಳಲಿದೆ. ಬೆಂಗಳೂರಿನಲ್ಲಿ 24 ಸ್ಪೀಡ್ ಪೋಸ್ಟ್ ಸೇವೆಗಾಗಿ 42 ಅಂಚೆ ಕಚೇರಿಗಳನ್ನು ಗುರುತಿಸಲಾಗಿದ್ದು, 48 ಸ್ಪೀಡ್ ಪೋಸ್ಟ್ ಸೇವೆಯನ್ನು ನಗರದಲ್ಲಿನ ಎಲ್ಲಾ ಅಂಚೆ ಕಚೇರಿಗಳಲ್ಲಿ ಒದಗಿಸಲಾಗುತ್ತದೆ.

ಈ ಸೇವೆಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಓಟಿಪಿ ಆಧಾರಿತ ಸುರಕ್ಷಿತ ವಿತರಣೆ, ಎಸ್ಎಂಎಸ್ ಮೂಲಕ ಆರಂಭದಿಂದ ಅಂತ್ಯದವರೆಗೆ ಟ್ರ್ಯಾಕಿಂಗ್ ವ್ಯವಸ್ಥೆ, ವ್ಯಾಪಾರ ಗ್ರಾಹಕರಿಗೆ ‘Buy Now Pay Later’ (BNPL) ಸೌಲಭ್ಯ, ಬೃಹತ್ ಬುಕ್ಕಿಂಗ್‌ಗಳಿಗೆ ಉಚಿತ ಪಿಕಪ್, ಎಪಿಐ ಏಕೀಕರಣ, ಕೇಂದ್ರೀಕೃತ ಬಿಲ್ಲಿಂಗ್ ಹಾಗೂ ವಿಳಂಬವಾದಲ್ಲಿ ಹಣ ಹಿಂತಿರುಗಿಸುವ ಖಾತರಿ ಒಳಗೊಂಡಿವೆ. ಈ ಎಲ್ಲಾ ಸೌಲಭ್ಯಗಳು ಇಂಡಿಯಾ ಪೋಸ್ಟ್‌ನ ಪ್ರೀಮಿಯಂ ಎಕ್ಸ್‌ಪ್ರೆಸ್ ವಿತರಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿವೆ.

ಈ ಹೊಸ ಸೇವೆಯಿಂದ ವ್ಯಾಪಾರ ವಲಯ ಹಾಗೂ ಸಾಮಾನ್ಯ ಗ್ರಾಹಕರಿಗೆ ವೇಗವಾದ ಮತ್ತು ಭದ್ರತೆಯುತ ವಿತರಣಾ ವ್ಯವಸ್ಥೆ ದೊರೆಯಲಿದ್ದು, ಅಂಚೆ ಇಲಾಖೆಯ ಸೇವಾ ಗುಣಮಟ್ಟದಲ್ಲಿ ಮಹತ್ತರ ಸುಧಾರಣೆ ಕಂಡುಬರುವ ನಿರೀಕ್ಷೆಯಿದೆ ಎಂದು ಹೇಳಿದರು,

More articles

Latest article

Most read