ಬೆಳಗಾವಿಯಲ್ಲಿ ಐ.ಟಿ ಪಾರ್ಕ್, ಸೆಮಿ ಕಂಡಕ್ಟರ್ ಪಾರ್ಕ್ ಸ್ಥಾಪಿಸಲು ಕ್ರಮ : ಪ್ರಿಯಾಂಕ ಖರ್ಗೆ

ನಿರುದ್ಯೋಗಿಗಳಗೆ ಉದ್ಯೋಗ ಕಲ್ಪಿಸುವ ಉದ್ದೇಶ

ಬೆಂಗಳೂರು : ರಾಜ್ಯದ ಎರಡನೇ ರಾಜಧಾನಿಯೆಂದೇ  ಘೋಷಣೆಗೊಂಡಿರುವ ಹಾಗೂ ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಐ.ಟಿ ಪಾರ್ಕ್ ಸೆಮಿ ಕಂಡಕ್ಟರ್ ಪಾರ್ಕಗಳನ್ನು ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಗೆ ಉದ್ಯೋಗ ಕಲ್ಪಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ವಿಧಾನಸಭಾ ಸದಸ್ಯರಾದ ಅಭಯ ಪಾಟೀಲ್ ಅವರು ಬೆಳಗಾವಿಯಲ್ಲಿ ಐಟಿ ಪಾರ್ಕ್ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಗಳನ್ನು ನಿರ್ಮಿಸಿ ಅಭಿವೃದ್ಧಿಪರ ರಾಜ್ಯವನ್ನಾಗಿ ಮಾಡಬೇಕು ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕೆಂದು ಕೋರಿದ ಸಮಯದಲ್ಲಿ,  ಉತ್ತರಿಸಿದ ಸಚಿವರು  ಬೆಳಗಾವಿಯಲ್ಲಿ ಐ.ಟಿ ಪಾರ್ಕ್, ಸೆಮಿ ಕಂಡಕ್ಟರ್ ಪಾರ್ಕಗಳನ್ನು ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 

ಐ.ಟಿ ಪ್ಲಗ್ ಅಂಡ್ ಪ್ಲೇ ಮೂಲ ಸೌಕರ್ಯ ಸ್ಥಾಪನೆ, ಸ್ಟಾರ್ಟ್ ಅಪ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು. ವೇಗವರ್ಧಕ ಜಾಲಗಳು ಮತ್ತು ಸೀಡ್ ಫಂಡ್ ಬೆಂಬಲ, ಟೆಕ್ಸಿಲರೇಷನ್, ಸಮಗ್ರ ಅಭಿವೃದ್ಧಿ ಹಾಗೂ ಭವಿಷ್ಯದ ತಂತ್ರಜ್ಞಾನ, ನಿಪುಣ ಕರ್ನಾಟಕ, ಐಡಿಯಾ2ಪಿಓಸಿ ಎಲಿವೇಟ್ (ಗ್ರಾಂಟ್ ಇನ್ ಏಡ್), ರಾಜೀವ್ ಗಾಂಧಿ ಉದ್ಯಮ ಶೀಲತೆ ಕಾರ್ಯಕ್ರಮ, ಎಲಿವೇಟ್ ಮಹಿಳಾ ಉದ್ಯಮಶೀಲತೆ, ಗ್ರಾಸ್ ರೂಟ್ ಇನೋವೇಷನ್  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಬೆಳಗಾವಿಯಲ್ಲಿ ಐ,ಟಿ.ಪಾರ್ಕ್/ಸೆಮಿಕಂಡಕ್ಟರ್ ಪಾರ್ಕ್ ಗಳನ್ನು ಸ್ಥಾಪಿಸುವ ಸಂಬಂಧ ಉದ್ದೇಶಿತ ಜಮೀನನ್ನು ಸರ್ಕಾರಕ್ಕೆ ಪಡೆದು ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಸಲುವಾಗಿ  ಭಾರತ ಸರ್ಕಾರದ ಮಾನ್ಯ ರಕ್ಷಣಾ ಸಚಿವರಿಗೆ 08-01-2021 ರಂದು ಪತ್ರ ಬರೆಯಲಾಗಿದೆ.   ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಲು  ರಕ್ಷಣಾ ಇಲಾಖೆಯಿಂದ ಇನ್ನೂ ಕ್ರಮ ಕೈಗೊಂಡಿಲ್ಲವಾದ್ದರಿಂದ ಐಟಿಬಿಟಿ ಸಚಿವರು ದಿನಾಂಕ 9-9-2021 ಪುನಃ  ಪತ್ರ ಬರೆಯಲಾಗಿದೆ. ದಿನಾಂಕ 21-9-2021ರಂದು ಮುಖ್ಯಮಂತ್ರಿಗಳು ರಕ್ಷಣಾ ಸಚಿವರಿಗೆ ಹಾಗೂ ಇದೇ ದಿನಾಂಕದಂದು ಮುಖ್ಯ ಕಾರ್ಯದರ್ಶಿಯವರು ರಕ್ಷಣಾ ಕಾರ್ಯದರ್ಶಿಯವರಿಗೆ ಪತ್ರ ಬರೆದು ಜಮೀನನ್ನು ಕರ್ನಾಟಕ ಸರ್ಕಾರದ ವಶಕ್ಕೆ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

ಬೆಳಗಾವಿಯ ತಿಲಕವಾಡಿಯಲ್ಲಿರುವ ಕಲಾಮಂದಿರ ಕಟ್ಟಡದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್  ಸಹಯೋಗದೊಂದಿಗೆ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲು ಸದರಿ ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು  ಸಚಿವರು ತಿಳಿಸಿದರು.

More articles

Latest article

Most read