ಕೋಲಾರದಲ್ಲಿ ಲಾರಿ-ಟ್ಯಾಂಕರ್‌ ಡಿಕ್ಕಿ

ಚಾಲಕನಿಗೆ ಗಂಭೀರ ಗಾಯ

ಕೋಲಾರ :  ರಾಷ್ಟ್ರೀಯ ಹೆದ್ದಾರಿ 75ರ ಆಮೆರಹಳ್ಳಿ ಕೆರೆ  ಸಮೀಪದ ಪೆಟ್ರೋಲ್ ಬಂಕ್ ಮುಂಭಾಗ ಟ್ಯಾಂಕರ್‌ಗಳಿಗೆ ಡಿಕ್ಕಿ ಸಂಭವಿಸಿದೆ. 

ಮುಂಜಾನೆ ನಸುಕಿನಲ್ಲಿ  ತಮಿಳುನಾಡಿನಿಂದ  ಭತ್ತವನ್ನು ತುಂಬಿಕೊಂಡು  ತುಮಕೂರಿನತ್ತ ಹೊರಟಿದ್ದ ಲಾರಿಗೆ  ಬಳ್ಳಾರಿಯಿಂದ  ಸ್ಪಿರಿಟ್ ಟ್ಯಾಂಕರ್ ಬಲವಾಗಿ ಅಪ್ಪಳಿಸಿದ ಪರಿಣಾಮ,  ಸ್ಪಿರಿಟ್ ಟ್ಯಾಂಕರ್ ನಜ್ಜು ಗುಜ್ಜಾಗಿದೆ. 

ಚಾಲಕನಿಗೆ ಗಂಭೀರ  ಸ್ವರೂಪದ  ಗಾಯಗಳಾಗಿದ್ದು, ಸ್ಪಿರಿಟ್ ಟ್ಯಾಂಕರ್ ನಲ್ಲಿ ಸ್ಪಿರಿಟ್  ಖಾಲಿಯಾಗಿದ್ದುದರಿಂದ  ಸ್ಥಳದಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಮುಂಜಾನೆ  ಸುಮಾರು ಮೂರು ಗಂಟೆ ಸಮಯದಲ್ಲಿ ಈ ರಸ್ತೆ ಅವಘಡ ನಡೆದಿದ್ದು ಭತ್ತ ತುಂಬಿದ ಲಾರಿ ಚಾಲಕ ವಿರಾಮ ಪಡೆಯಲು ಫುಟ್ಪಾತಿಗೆ ಇಳಿಯುತ್ತಿದ್ದಂತೆಯೇ  ಅತಿ ವೇಗವಾಗಿ  ಮತ್ತು ಅಜಾಗರೂಕವಾಗಿ  ಹಿಂಬದಿಯಿಂದ ಬಂದ ಸ್ಪಿರಿಟ್ ಟ್ಯಾಂಕರ್ ಬಲವಾಗಿ  ಡಿಕ್ಕಿ ಹೊಡೆದಿದೆ.  

ಘಟನೆ  ಕುರಿತು ಗ್ರಾಮಾಂತರ ಪೊಲೀಸರು ಪ್ರಕರಣದ  ದಾಖಲಿಸಿಕೊಂಡು  ತನಿಖೆ ನಡೆಸುತ್ತಿದ್ದಾರೆ

More articles

Latest article

Most read