17 ನೇ ಬಾರಿಗೆ ಬಜೆಟ್‌ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಅತಿ ಹೆಚ್ಚು ಆಯವ್ಯಯ ಮಂಡನೆ ಎಂಬ ದಾಖಲೆ

ಬೆಂಗಳೂರು :  ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಾರಿಗೆ ಆಯವ್ಯಯ ಮಂಡಿಸಲು ಸಿದ್ಧರಾಗಿದ್ದಾರೆ.  ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ್ದವರು ಎಂಬ ದಾಖಲೆ ನಿರ್ಮಿಸಿದ್ದಾರೆ.

ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಒಟ್ಟು 7 ಬಜೆಟ್ ಮಂಡನೆ ಮಾಡಿದ್ದರೆ, ಮುಖ್ಯಮಂತ್ರಿಯಾಗಿ ಈವರೆಗೆ 9 ಬಜೆಟ್ ಮಂಡನೆ ಮಾಡಿದ್ದಾರೆ‌. 2023-24ರಲ್ಲಿ ಬಜೆಟ್ ಮಂಡನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆಯವರ ಅತಿ ಹೆಚ್ಚು ಬಜೆಟ್ ಮಂಡನೆ ದಾಖಲೆಯನ್ನು ಮುರಿದಿದ್ದರು.

ನಾಳೆ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 17ನೇ ಬಜೆಟ್‌ ಮಂಡಿಸಲಿದ್ದು, ಎಲ್ಲರ ಚಿತ್ತ ಶಕ್ತಿ ಕೇಂದ್ರದತ್ತ ನೆಟ್ಟಿದೆ. ನಾಯಕತ್ವ ಬದಲಾವಣೆಯ ಪಟ್ಟಿನ ನಡುವೆಯೂ ಒಂದು ತಿಂಗಳ ಕಾಲ ಸರಣಿ ಸಭೆ, ಆರ್ಥಿಕ ತಜ್ಞರ ವಿಶ್ಲೇಷಣೆ, ಮಾರ್ಗದರ್ಶನಗಳನ್ನು ಪಡೆದಿರುವ ಸಿಎಂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬಜೆಟ್‌ ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ. 

ಹೆಚ್.ಡಿ. ದೇವೇಗೌಡರು ಹಾಗೂ ಜೆ.ಹೆಚ್. ಪಟೇಲ್ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು, 1995-96ನೇ ಸಾಲಿನ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ಬಳಿಕ 1996-97, 1997-98, 1998-99, 1999-2000, 2004-05, 2005-06ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಬಳಿಕ ಮುಖ್ಯಮಂತ್ರಿಯಾಗಿ 2013-14, 2014-15, 2015-16, 2016-17, 2017-18, 2018-19, ಪ್ರಸಕ್ತ 2023-24, 2024-25, 2025-26 ಸಾಲಿನಲ್ಲಿ ಬಜೆಟ್ ಮಂಡಿಸಿದ್ದಾರೆ.

More articles

Latest article

Most read