ಪಂಜ ಸರಕಾರಿ ಪ.ಪೂ. ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ | ಸಂವಿಧಾನ ಜಾಗೃತಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ

ಪಂಜ : ಪ್ರಜಾಧ್ವನಿ ಕರ್ನಾಟಕ ಮತ್ತು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜ.26 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಪ್ರಜಾಧ್ವನಿ ಕರ್ನಾಟಕದ ಸಂಸ್ಥಾಪಕ ಸದಸ್ಯ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಜಾನಿ ಕೆ. ಪಿ. ಪ್ರಾಸ್ತಾವಿಕವಾಗಿ ಮಾತನಾಡಿ,  ಪ್ರಜಾಧ್ವನಿ ಕರ್ನಾಟಕದ ಧ್ಯೇಯೋದ್ದೇಶಗಳನ್ನು ವಿವರಿಸಿ, ಸಂವಿಧಾನದ ಉಳಿವಿಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಯ ನೆಮ್ಮದಿಯ ಬದುಕಿಗಾಗಿ ನಾವು ಇಂದು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿ ಹೇಳಿದರು. ಉಪನಿಷತ್ತಿನಲ್ಲಿ ಉಲ್ಲೇಖಿಸಲ್ಪಟ್ಟ ವಸುದೈವ ಕುಟುಂಬಕಂ ಎನ್ನುವ ಆಶಯಕ್ಕೆ ಅನುಸಾರವಾಗಿಯೇ ಸಂವಿಧಾನ ರೂಪುಗೊಂಡಿದ್ದು ಎಲ್ಲಾ ಧರ್ಮಗಳ ಒಳ್ಳೆಯ ವಿಚಾರಗಳು ಸಂವಿಧಾನದಲ್ಲಿ ಅಡಕವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಭಾಷಣಗಾರರಾದ ನಿವೃತ್ತ ಮುಖ್ಯೋಪಾಧ್ಯಾಯ ಮತ್ತು ಸಂಪನ್ಮೂಲ ವ್ಯಕ್ತಿಯಾದ ಚಿದಾನಂದ ಮಾಸ್ಟರ್ ಗೂನಡ್ಕರವರು ಮಾತನಾಡಿ ನಮ್ಮ ಭಾರತದ ಸಂವಿಧಾನವು ಯಾವುದೇ ಲೋಪ ದೋಷಗಳಿಲ್ಲದ ಒಂದು ಅದ್ಭುತ ಗ್ರಂಥವಾಗಿದೆ, ಆದರೆ ಅದರ ಸಮರ್ಪಕ ಅನುಷ್ಠಾನದಲ್ಲಿ ಲೋಪಗಳಿರುವುದರಿಂದ ಸಮಾಜದಲ್ಲಿ ಅಸಮಾನತೆ ಇನ್ನೂ ಉಳಿದುಕೊಂಡಿದೆ. ಸಂವಿಧಾನದ ಆಶಯಗಳಂತೆ ನಾವು ಸಮರ್ಥರನ್ನು ನಮ್ಮ ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿದರೆ ಸದೃಢ ಸಮಾಜವನ್ನು ಕಟ್ಟಬಹುದು ಎಂದು ಹೇಳಿದರು. ನಂತರ ಚಿದಾನಂದ ಮಾಸ್ಟರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಿಧಾನದ ಕುರಿತಾಗಿ ಸಂವಾದ ನಡೆಸಿದರು.

ಪ್ರಜಾಧ್ವನಿ ಕರ್ನಾಟಕದ ಕಾನೂನು ಸಲಹೆಗಾರರಾದ ಮೋಹನ್ ಕೆ. ಪಿ. ಕಡಬ ಇವರು ಸಂವಿಧಾನ ಜಾಗೃತಿ ಕುರಿತಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಿದಾನಂದರವರು ಮಾತನಾಡಿ, ಇವತ್ತಿನ ಈ ಸಂವಾದ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಸಾಕಷ್ಟು ಅರಿವು ಮೂಡಿಸಿದೆ ಎಂದು ಭಾವಿಸ್ತೇನೆ, ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯ, ನಮಗೆ ಕೊಟ್ಟಂತಾ ಸಂವಿಧಾನವನ್ನು ನಮ್ಮ ಪೀಳಿಗೆ ಅನುಭವಿಸುತ್ತಾ ಇದ್ದೇವೆ. ಆದರೆ ನಮ್ಮ ಮುಂದಿನ ಪೀಳಿಗೆಗೆ ಇದು ಉಳಿಯುವಂತಾಗಲು ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸಲೇಬೇಕಾದ ಅಗತ್ಯವನ್ನು ತಿಳಿಹೇಳಿದರು.

ಪ್ರಜಾಧ್ವನಿ ಕರ್ನಾಟಕದ ಉಪಾಧ್ಯಕ್ಷ ಪ್ರವೀಣ್ ಮುಂಡೋಡಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ದೇವಿಪ್ರಸಾದ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಶೇಖರ್, ಶಾಲಾ ವಿದ್ಯಾರ್ಥಿ ನಾಯಕ 10 ನೇ ತರಗತಿಯ ತೀರ್ಥೇಶ್ ಮತ್ತು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸುಚಿನ್ನ ಕಾಣಿಕೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ರಾಜ್ಯಶಾಸ್ತ್ರ ಉಪನ್ಯಾಸಕ ಉಮೇಶ್ ಎಂ. ಎಲ್ಲರನ್ನೂ ಸ್ವಾಗತಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನ ಗ್ರಂಥಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸುಳ್ಯದ ಉದಯೋನ್ಮುಖ ಗಾಯಕ ವಿನು ಕೋಲ್ಚಾರ್ ರವರು ತಮ್ಮ ಗಾಯನದ ಮೂಲಕ ಮಕ್ಕಳನ್ನು ರಂಜಿಸಿದರು.

ಪ್ರಜಾಧ್ವನಿ ಕರ್ನಾಟಕದ ಪದಾಧಿಕಾರಿಗಳಾದ ಲುಕಾಸ್ ಟಿ.ಐ ಕಾರ್ಯಕ್ರಮ ನಿರೂಪಿಸಿ, ವಸಂತ ಪೆಲತ್ತಡ್ಕ ಸಹಕರಿಸಿದರು. ಮಹೇಶ್ ಬೆಳ್ಳಾರ್ಕರ್, ಭರತ್ ಕುಕ್ಕುಜಡ್ಕ ಮತ್ತು ಮಂಜುನಾಥ್ ಮಡ್ತಿಲ ಸಂವಾದ ನಿರ್ವಹಣೆಯಲ್ಲಿ ಸಹಕರಿಸಿದರು. ಕನ್ನಡ ಶಿಕ್ಷಕಿ ಲತಾಶ್ರೀ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಜಾಧ್ವನಿ ಸದಸ್ಯರುಗಳಾದ ಶಿವಶಂಕರ್ ಕಡಬ, ಪ್ರಮೀಳಾ ಪೆಲ್ತಡ್ಕ, ಬಿಟ್ಟಿ ನೆಡುನೀಲಂ, ಸರಸ್ವತಿ ಕಾಮತ್,  ಗೋಪಾಲಕೃಷ್ಣ, ಕಾಲೇಜಿನ ವಿದ್ಯಾರ್ಥಿವೃಂದ ಮತ್ತು ಅಧ್ಯಾಪಕರುಗಳು ಉಪಸ್ಥಿತರಿದ್ದರು.

ಪ್ರಜಾಧ್ವನಿ ಕರ್ನಾಟಕ ವತಿಯಿಂದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

More articles

Latest article

Most read