ಕರಗಿಸಲಾಗದ ಅರಗಿಸಲಾಗದ ಗಾಂಧೀತನ..‌

ಗಾಂಧಿ ಎನ್ನುವುದೀಗ ಒಂದು ವ್ಯಕ್ತಿಯಾಗಿ ಉಳಿದಿಲ್ಲ ಅದೊಂದು ಮೌಲ್ಯವಾಗಿ ಬೆಳೆದಿರುವ ಕಾರಣ ಅದನ್ನು ಏಕಾಏಕಿ ಕಿತ್ತೊಗೆಯುವುದು ಸುಲಭವೇ ? ತಮ್ಮ ಸಿದ್ಧಾಂತದ ನಾಯಕರುಗಳ ಪ್ರತಿಷ್ಠಾಪನೆಗೆ, ಅವರ ಬುಲ್ ಬುಲ್ ಹಕ್ಕಿ ಪಯಣವೇ ಮೊದಲಾದ ಶೌರ ಸಾಧನೆಯ ಕೊಂಡಾಟಗಳಿಗೆ ಈ ಗಾಂಧಿ, ನೆಹರೂ, ಸಂವಿಧ ಶಿಲ್ಪಿ ಎಂದೇ ಹೆಸರಾಂತ ಅಂಬೇಡ್ಕರರಂತವರೇ ಬಹುದೊಡ್ಡ ತಡೆ. ಈ ತಡೆಗಳ ನಿವಾರಣೆಯಾಗದೇ ಅವರುಗಳು ಮುನ್ನಡೆಯುವುದಾದರೂ ಹೇಗೆ? ಶಂಕರ್‌ ಸೂರ್ನಳ್ಳಿ, ಲೇಖಕರು.

ಅಜ್ಞಾನವೇ ವರ ಎಬ ಮಾತಿದೆ. ಆದರಿಲ್ಲಿ ಯಾರದೋ ಅಜ್ಞಾನ ಮತ್ಯಾರಿಗೋ ವರವೆನಿಸಿದೆ. ಮಹಾತ್ಮಾ ಗಾಂಧೀಜಿ, ನೆಹರೂರವರ ಕುರಿತಂತ ಅಸಹನೆ ಇಂದು ನಿನ್ನೆಯದಲ್ಲ. ಒಂದು ನಿರ್ದಿಷ್ಟ ಸಿದ್ಧಾಂತದ ಒಲವುಳ್ಳ ವ್ಯಕ್ತಿಗಳು ಜಗತ್ತೇ ಗೌರವದಿಂದ ನಮಿಸುವ ಗಾಂಧೀಜಿಯವರನ್ನು  ಅದೇ ರೀತಿ ಅವರ ಸಮಕಾಲೀನರಾದ ನೆಹರೂ ಅಂಬೇಡ್ಕರರಂತಹ ಮಹನೀಯರುಗಳನ್ನು ಮತ್ತವರ ನಡೆ ನುಡಿ  ಸಿದ್ಧಾಂತಗಳನ್ನು ಅಪಮೌಲ್ಯಗೊಳಿಸಿ ಎಲ್ಲೆಡೆ ಬಿಂಬಿಸುತ್ತಿದಾರೆ. ಹಿಂದಿನ ಪೂರ್ವೇತಿಹಾಸ ಮತ್ತು ಆ ಕಾಲದ ಸೂಕ್ಷ್ಮ ಸಂದರ್ಭ ಸನ್ನಿವೇಶಗಳ ಅರಿವಿಲ್ಲದ ಇಂದಿನ ಯುವ ಪೀಳಿಗೆಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಇತಿಹಾಸದ ಸತ್ಯಾಸತ್ಯಗಳನ್ನು ತಮ್ಮ ಮೂಗಿನ ನೇರಕ್ಕೆ ವಿರೂಪಗೊಳಿಸಿ ಯುವಜನಾಂಗದ ತಲೆಯೊಳಗೆ ವ್ಯವಸ್ಥಿತವಾಗಿ ತುಂಬಲಾಗುತ್ತಿದೆ.

ಗಾಂಧಿ, ನೆಹರೂ ಕುರಿತಂತ ದ್ವೇಷ ಅದರಲ್ಲೂ ಈ ಯುವ ಪೀಳಿಗೆಯಲ್ಲಿ ಇಂದು ಎಷ್ಟರ ಮಟ್ಟಿಗೆ ಇದೆಯೆಂದರೆ,  ನೀವು ಸಾಮಾಜಿಕ ಜಾಲತಾಣಗಳ ಬಳಕೆದಾರರಾಗಿದ್ದರೆ ಇದರ ಅನುಭವ ಇದ್ದೇ ಇರುತ್ತದೆ. ಎಲ್ಲಾ ದೋಷಗಳಿಗೂ ಈ ಗಾಂಧಿ ಮತ್ತು ನೆಹರೂರವರೇ ಕಾರಣ ಎಂಬುದಾಗಲೀ, ಅವರ ವೈಯಕ್ತಿಕ ಸಂಗತಿಗಳನ್ನು ವಿಕೃತಗೊಳಿಸಿ ತಿರುಚಿ ಪ್ರಚಾರ ಪಡಿಸುವುದಾಗಲೀ ಇಲ್ಲಿ ಸಾಮಾನ್ಯ. ಅಂಬೇಡ್ಕರರ ಕುರಿತಂತೆಯೂ ಇವರುಗಳಿಗೆ  ದ್ವೇಷ ಇದ್ದಿದ್ದರೂ ಅದನ್ನು ಹೊರಹಾಕ ಹೋದರೆ ಒಂದು ವರ್ಗವೇ ಸಿಡಿದೇಳುವ ಭಯಕ್ಕೆ ಈ ತನಕ ಇದೊಂದು ಕೇವಲ ಸುಪ್ತ ದ್ವೇಷ ವಾಗಿಯಷ್ಟೇ ಇತ್ತು. ಆದರೆ ದಶಕಗಳ ಕಾಲ ನಮ್ಮದೇ ಪೂರ್ಣ ಅಧಿಕಾರ ಇನ್ನು ಮುಂದೆಯೂ ಕೂಡ ನಮ್ಮದೇ ಪರ್ಮನೆಂಟ್ ಅಧಿಕಾರ ಎಂಬ ಹುಂಬತನಕ್ಕೆ ಬಿದ್ದ ಕೆಲ ಮಂದಿ ಗಾಂಧಿ ನೆಹರೂರವರ ವಿರುದ್ಧ ದ್ವೇಷ ಕಾರಿಕೊಳ್ಳುವಂತೆ ಇದೀಗ ಅಂಬೇಡ್ಕರರ ವಿರುದ್ಧವೂ ವಿಷಕಾರತೊಡಗಿದ್ದಾರೆ.

ಗಾಂಧೀಜಿ ರಾಷ್ಟ್ರಪಿತನೇ ಅಲ್ಲ, ಗೋಡ್ಸೆ ಮಹಾತ್ಮ, ಗಾಂಧೀಜಿಯ  ಅನಾಚಾರ, ದೇಶದ್ರೋಹದ ಕೆಲಸಗಳಿಗೆ ಬೇಸತ್ತು ದೇಶ ಮತ್ತು ಸಂಸ್ಕೃತಿಯ ಉಳಿವಿಗಾಗಿ ಗಾಂಧಿ ವಧೆ ಅಂದು  ಅನಿವಾರ್ಯವಾಗಿತ್ತು ಎಂಬಂತಹ ಸಮರ್ಥನಾತ್ಮಕ ವಾದಗಳು ಅದೂ ಮುಖ್ಯವಾಗಿ ಯುವ ಪೀಳಿಗೆಗಳಲ್ಲಿ ಇವತ್ತು ಅತೀ ಸಾಮಾನ್ಯ ಎನಿಸಿ ಬಿಟ್ಟಿದೆ. ಇದು ಒಂದು ಬಗೆಯಾದರೆ, ಈ ಗಾಂಧೀ ದ್ವೇಷದ ಪ್ರತಿಫಲನವಾಗಿ ಸಂಬಂಧ ಇರಲಿ ಇಲ್ಲದಿರಲಿ ಜಾಲತಾಣಗಳಲ್ಲಿ ಗಾಂಧೀಜಿಯನ್ನು ತೀರಾ ಅಶ್ಲೀಲವಾಗಿ ನಿಂದಿಸುವ ಪರಂಪರೆಯೇ ಇದೀಗ ಸಾಮಾನ್ಯವೆನಿಸಿದೆ. ಇನ್ನು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ನೆಹರೂರವರ ಸ್ಥಿತಿಯಂತೂ ಹೇಳದಿರುವುದೇ ವಾಸಿ.

ಗಾಂಧೀಜಿಯವರ ಕುರಿತಂತೆ ಜನಪ್ರಿಯವಾದ ಮಾತೊಂದನ್ನ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಬ್ರಿಟಿಷರು ತಮ್ಮ ಸಾಮ್ರಾಜ್ಯದ ಅಸ್ತಿತ್ವವನ್ನೇ  ಅಲುಗಾಡಿಸಿದ್ದ ಗಾಂಧೀಯಂತಹ ಗಾಂಧೀಜಿಯನ್ನು ಕೊನೆಯ ತನಕ  ಏನೂ ಮಾಡದೇ ಉಳಿಸಿಕೊಂಡರೆ ನಾವು ಅವರನ್ನು ಒಂದು ವರ್ಷವೂ ಉಳಿಸಿಕೊಳ್ಳಲಾಗಲಿಲ್ಲವೆಂದು.  ಸ್ವಾತ್ರಂತ್ರ್ಯ ಸಿಕ್ಕಿ ವರ್ಷದೊಳಗೆ ನಮ್ಮವರಿಂದಲೇ ಅವರ ಹತ್ಯೆ ನಡೆಯಿತು. ಅಂದು ನಡೆದದ್ದು ಅವರ ದೈಹಿಕ ಹತ್ಯೆಯಾದರೆ ಈಗ ನಡೆಯುತ್ತಿರುವುದು  ಅವರ ಮೌಲ್ಯಗಳ ಹತ್ಯೆ. ಅವರ ಸೈದ್ಧಾಂತಿಕ ವಿರೋಧಿಗಳು ಅವರ ಮಹೋನ್ನತೆಯನ್ನು ಕುಗ್ಗಿಸುವ ಸಲುವಾಗಿ ಗಾಂಧಿ, ನೆಹರೂಗಳು ದೇಶ ದ್ರೋಹಿಗಳು, ಧರ್ಮ ವಿರೋಧಿಗಳು, ಸ್ತ್ರೀಲೋಲರು, ಮಾನಗೆಟ್ಟ ನೀಚರು ಎಂಬಂತೆ ಬಿಂಬಿಸುವ ತಿರುಚಲ್ಪಟ್ಟ ಕಥೆಗಳನ್ನು ಕಟ್ಟಿ ಹಬ್ಬಿಸುತ್ತಿವೆ. ದುರಂತವೆಂದರೆ ಶೋಷಿತ ಶೂದ್ರ ಮತ್ತು ದಲಿತವರ್ಗದಲ್ಲಿ ಮತ್ತು ಅವರುಗಳ ಮುಖೇನವೇ ಈ ತೇಜೋ ವಧೆಯ ಕಥೆಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಯಾಕೆಂದರೆ, ಇದರಿಂದ ಒಂದೇ ಕಲ್ಲಿಗೆ ಹಲವಾರು ಹಕ್ಕಿಗಳನ್ನು ಹೊಡೆದುರುಳಿಸುವ ತಂತ್ರಗಾರಿಕೆಯಿದೆ.

ಉದಾಹರಣೆಗೆ  ಇಂತಹ ಕಥೆಗಳ ಮೂಲಕ ಬಹು ಸಂಖ್ಯಾತ ಶೂದ್ರ ಹಾಗು ದಲಿತ ಸಮುದಾಯಗಳಲ್ಲಿ ಈ ಧೀಮಂತ ನಾಯಕರುಗಳ ಬಗ್ಗೆ ಅಸಹ್ಯ ಮನಸ್ಥಿತಿಯನ್ನು ಪ್ರೇರೇಪಿಸುವುದು. ದೇಶ ಮತ್ತು ಸಮಾಜಕ್ಕಾಗಿ ಹೋರಾಡಿದ ಈ ನೈಜ ನಾಯಕರುಗಳನ್ನು ಅವಮಾನಿಸುವುದರ ಮೂಲಕ ಆ ಸ್ಥಾನದಲ್ಲಿ ಸನಾತನವಾದಿ ನಾಯಕರುಗಳ ಪ್ರತಿಷ್ಠಾಪನೆಗೆ ಯತ್ನಿಸುವುದು. ಇನ್ನೂ ಮುಖ್ಯವಾಗಿ ಶೂದ್ರ ಸಮುದಾಯವನ್ನೇ ಇಲ್ಲಿ ಪ್ರೇರೇಪಿಸುವ ಮೂಲಕ ವಿಶ್ವ ವಿಖ್ಯಾತ ಧೀಮಂತ ನಾಯಕರ ತೇಜೋವಧಾ ಕಾರ್ಯದಲ್ಲಿ ಸನಾತನವಾದಿಗಳ ನಿಜ ಭಾಗೀದಾರಿಕೆಯನ್ನು ಐತಿಹಾಸಿಕವಾಗಿ ಮರೆಮಾಚುವುದು (ಮುಂದೇನಾದರೂ ಸಂದರ್ಭ ಬಂದರೆ ಅದು ಅವರುಗಳ ಕಚ್ಚಾಟ ನಮ್ಮದೇನೂ ಇಲ್ಲವೆಂಬ ಜಾರಿಕೊಳ್ಳುವಿಕೆಗೆ ಅನೂಕೂಲ) ಇತ್ಯಾದಿ.

ವಿಶ್ವದ ನೂರಕ್ಕೂ ಅಧಿಕ ದೇಶಗಳು ಗಾಂಧೀಜಿ ಭಾವ ಚಿತ್ರದ ಅಂಚೆಚೀಟಿ ಬಿಡುಗಡೆ ಗೊಳಿಸಿ ಅವರ ವ್ಯಕ್ತಿತ್ವವನ್ನು ಗೌರವಿಸಿವೆ. ಅವರ ಮುಖ ಮುದ್ರೆಯ ನಾಣ್ಯಗಳನ್ನು ನಲ್ವತ್ತಕ್ಕೂ ಅಧಿಕ ದೇಶಗಳು ಬಿಡುಗಡೆ ಗೊಳಿಸಿವೆ ಮತ್ತು ಅಷ್ಟೇ ಸಂಖ್ಯೆಯ ದೇಶಗಳು ಅವರ ಹೆಸರಿನ ರಸ್ತೆಗಳನ್ನು ಹೊಂದಿವೆ. ಎಂಭತ್ತಕ್ಕೂ ಅಧಿಕ ದೇಶಗಳಲ್ಲಿ ಅವರ ಪ್ರತಿಮೆಗಳಿವೆ (ಗಾಂಧೀಜಿ ಯಾರ ವಿರುದ್ಧ ಹೋರಾಡಿದ್ದರೋ ಆ ಇಂಗ್ಲೆಂಡ್ ದೇಶವೂ ಸೇರಿ) ಅವರ ಆತ್ಮಚರಿತ್ರೆ ನಲವತ್ತಕ್ಕೂ ಅಧಿಕ ಭಾಷೆಗಳಿಗೆ ಅನುವಾದಗೊಂಡಿವೆ. ಆದರೆ ಇಂತಹ ವಿಶ್ವ ವಿಖ್ಯಾತ ವ್ಯಕ್ತಿ  ರಾಜಕೀಯವಾಗಿ ಯಾವ ಅಧಿಕಾರದಲ್ಲೂ ಇದ್ದಿರಲಿಲ್ಲ. ಇದು ಕೇವಲ ಅವರ ವ್ಯಕ್ತಿತ್ವಕ್ಕೆ ಸಂದಂತಹ ಜಾಗತಿಕ ಗೌರವವಷ್ಟೆ. ಆದರೂ ಕೂಡ ಅವರು ಜನಿಸಿದ ನಮ್ಮ ದೇಶದಲ್ಲೇ ಒಂದು ವರ್ಗ  ಅವರನ್ನು ಅತ್ಯಂತ ಕೀಳಾಗಿ ಬಿಂಬಿಸಿ ಅವರ ಚಾರಿತ್ರ್ಯ ಹರಣ ಮಾಡುವಲ್ಲೇ ತೊಡಗಿವೆ. ಅಂಚೆಚೀಟಿಗಳಿಂದ ಹಿಡಿದು ಯೋಜನೆಗಳಲ್ಲಿನ ಅವರ ಹೆಸರುಗಳಿಗೂ ಖೊಕ್ ಕೊಡಲಾಗುತ್ತಿದೆ .

ಆದರೆ, ಗಾಂಧಿ ಎನ್ನುವುದೀಗ ಒಂದು ವ್ಯಕ್ತಿಯಾಗಿ ಉಳಿದಿಲ್ಲ ಅದೊಂದು ಮೌಲ್ಯವಾಗಿ ಬೆಳೆದಿರುವ ಕಾರಣ ಅದನ್ನು ಏಕಾಏಕಿ ಕಿತ್ತೊಗೆಯುವುದು ಸುಲಭವೇ..? ತಮ್ಮ ಸಿದ್ಧಾಂತದ ನಾಯಕರುಗಳ ಪ್ರತಿಷ್ಠಾಪನೆಗೆ, ಅವರ ಬುಲ್ ಬುಲ್ ಹಕ್ಕಿ ಪಯಣವೇ ಮೊದಲಾದ ಶೌರ ಸಾಧನೆಯ ಕೊಂಡಾಟಗಳಿಗೆ ಈ ಗಾಂಧಿ, ನೆಹರೂ, ಸಂವಿಧಾನ ಶಿಲ್ಪಿ ಎಂದೇ ಹೆಸರಾಂತ ಅಂಬೇಡ್ಕರರಂತವರೇ ಬಹುದೊಡ್ಡ ತಡೆ. ಈ ತಡೆಗಳ ನಿವಾರಣೆಯಾಗದೇ ಅವರುಗಳು ಮುನ್ನಡೆಯುವುದಾದರೂ ಹೇಗೆ? ಹಾಗಾಗಿ ಈ ಧೀಮಂತ ವ್ಯಕ್ತಿ ಮತ್ತು ವ್ಯಕ್ತಿತ್ವಗಳ ವ್ಯವಸ್ಥಿತ ತೇಜೋವಧೆ.

ಆದರೆ, ಗಾಂಧೀತನವನ್ನು ಸುಲಭಕ್ಕೆ ಕರಗಿಸಲಾದೀತೇ ಅರಗಿಸಲಾದೀತೇ..!!? 

ಶಂಕರ್ ಸೂರ್ನಳ್ಳಿ

ಲೇಖಕರು.

ಇದನ್ನೂ ಓದಿ- ದರ್ಗಾಕ್ಕೆ ಬಾಣ ಬಿಟ್ಟ ಸನ್ನೆ; ಮೆರೆದ ಮತಾಂಧತೆ

More articles

Latest article

Most read