1 ಅಮೆರಿಕನ್‌ ಡಾಲರ್‌ ಗೆ ಇರಾನ್‌ ದೇಶದ  10,92,500 ರಿಯಾಲ್‌ ಸಮ; ಕುಸಿದು ಬಿದ್ದ ಆರ್ಥಿಕತೆ

Most read

ಟೆಹರಾನ್‌: ಇರಾನ್‌ ದೇಶದಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಯ ನಡುವೆಯೇ ಅಲ್ಲಿನ ಕರೆನ್ಸಿ ರಿಯಲ್‌ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಒಂದು ಅಮೆರಿಕನ್‌ ಡಾಲರ್‌ 10,92,500 ರಿಯಾಲ್‌ ಗೆ ಸಮವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಈ ಮಧ್ಯೆ ಸ್ಟಾರ್‌ಲಿಂಕ್ ಇರಾನ್‌ನಲ್ಲಿ ಉಚಿತ ಇಂಟರ್‌ ನೆಟ್‌ ಸೇವೆ ಒದಗಿಸುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಇರಾನ್ ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಾಗ ಸರ್ಕಾರ ಇಂಟರ್‌ ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿತ್ತು.

ಇರಾನ್‌ ದೇಶದ 47 ವರ್ಷಗಳ ಇತಿಹಾಸದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದ್ದು ಖೊಮೇನಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.  ಬೆಲೆ ಏರಿಕೆ, ನಿರುದ್ಯೋಗ, ದುಬಾರಿಯಾದ ಜೀವನ, ಮಿತಿ ಮೀರಿದ ಧಾರ್ಮಿಕತೆನ್ನು ಖಂಡಿಸಿ ಇರಾನ್‌ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಖೊಮೇನಿ ಆಡಳಿತವನ್ನು ಕಿತ್ತೊಗೆಯುವ ಪಣ ತೊಟ್ಟಿದ್ದಾರೆ.

1979 ರಲ್ಲಿ ಅಮೆರಿಕದ ಒಂದು ಡಾಲರ್‌ ಗೆ 70 ಇರಾನ್‌ ರಿಯಾಲ್‌ ಮೌಲ್ಯವನ್ನು ಹೊಂದಿತ್ತು. ಈ ವರ್ಷದ ಆರಂಭಕ್ಕೆ ಅದು 1.4 ಮಿಲಿಯನ್ ರಿಯಾಲ್‌ಗಳನ್ನು ದಾಟಿದ್ದು ನಾಲ್ಕು ದಶಕಗಳಲ್ಲಿ ಇರಾನ್‌ ಕರೆನ್ಸಿ ಸುಮಾರು 20,000 ಪಟ್ಟು ಮೌಲ್ಯವನ್ನು ಕಳೆದುಕೊಂಡಿದೆ.

ಹಣದುಬ್ಬರ ಏರಿಕೆಯಾಗಿದ್ದರೂ ಈ ವಿಚಾರವನ್ನು ಸರ್ಕಾರ ಮುಚ್ಚಿಟ್ಟಿತ್ತು. ಇದರಿಂದ ವಸ್ತುಗಳ ಬೆಲೆಗಳು ಗಗನಮುಖಿಯಾಗಿದ್ದವು.

ಇಸ್ರೇಲ್‌ ವಿರುದ್ಧ ನಡೆಯುತ್ತಿದ್ದ ಹೋರಾಟದಲ್ಲಿ ಹಮಾಸ್‌ ಗೆ ಬೆಂಬಲ ನೀಡಿದ್ದಕ್ಕೆ ತೈಲ ಮಾರಾಟ ಮಾಡಲು ಇರಾನ್‌ ಗೆ ಅಮೆರಿಕ ನಿರ್ಬಂಧ ಹೇರಿತ್ತು. ಈ ಕಾರಣಕ್ಕಾಗಿ ಇರಾನ್‌ ಆರ್ಥಿಕತೆಗೆ ಹೊಡೆತ ಬಿದ್ದಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೈಲ ರಫ್ತಿಗೆ ನಿರ್ಬಂಧ ಹೇರುವುದರ ಜತೆಗೆ ವಿದೇಶಿ ಕರೆನ್ಸಿ ಪ್ರವೇಶವನ್ನು ನಿರ್ಬಂಧಿಸಿದ್ದರು. ಇದರಿಂದ ಇರಾನ್‌ ಆರ್ಥಿಕತೆ ಕುಸಿದು ಬಿದ್ದಿದೆ.   

More articles

Latest article