ಬೆಂಗಳೂರು: ಈ ಹಿಂದೆ ಬಿಡುಗಡೆಯಾಗಿದ್ದ ಅಮೃತಾಂಜನ್ ಶಾರ್ಟ್ ಮೂವಿ ಯಾರಿಗೆ ತಾನೆ ನೆನಪಿಲ್ಲ? ನಕ್ಕು ನಲಿಸಿದ್ದ ಈ ಕಿರುಚಿತ್ರ ನೋಡಿದವರ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ. ಇದೇ ಉಮೇದಿನಲ್ಲಿ ಇದೇ ತಂಡ ಇದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಈ ಬಗ್ಗೆ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ: ಅಮೃತಾಂಜನ್ ಹೆಸರಿನಲ್ಲೇ ಮೂವಿ ಮಾಡೋದಕ್ಕೆ ಕಾರಣ?
ಜ್ಯೋತಿ ರಾವ್ : ಅಮೃತಾಂಜನ್ ಶಾರ್ಟ್ ಮೂವಿಗೂ ಅಮೃತಾಂಜನ್ ಸಿನಿಮಾಗೂ ಬಹಳ ವ್ಯತ್ಯಾಸವಿದೆ. ನಾನು ಇದಕ್ಕೂ ಮೊದಲು ಸೋಡಾಬುಡ್ಡಿ ಎಂಬ ಸಿನಿಮಾ ಮಾಡಿದ್ದೆ ಅದು ಗಲ್ಲಾಪಟ್ಟಿಗೆಯಲ್ಲಿ ಸೋತು ಹೋಯ್ತು. ಆಮೇಲೆ ಕೆಲಸ ಇಲ್ಲದೆ ಇದ್ದಾಗ ಒಂದು ಶಾರ್ಟ್ ಮೂವಿ ಮಾಡಿದ್ದೆ, ಅದೇ ಅಮೃತಾಂಜನ್. ಇತಿಹಾಸದ ಥರನೇ ಆಗೋಯ್ತು. ಆಮೇಲೆ ಏನಾದ್ರು ಮಾಡ್ಬೇಕು ಅಂತ ಯೋಚ್ನೆ ಮಾಡ್ತಾ ಇದ್ದಾಗ ಅಮೃತಾಂಜನ್ ಸಿನಿಮಾವನ್ನೇ ಬಿಗ್ ಸ್ಕ್ರೀನ್ ಗೆ ಮಾಡೋಣಾ ಅಂತ ನಿರ್ಧಾರ ಮಾಡಿದೆವು. ಸಿನಿಮಾ ಫಾರ್ಮೆಟ್ ಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಮಾಡಿದ್ದೀವಿ.
ಪ್ರ:ಶಾರ್ಟ್ ಮೂವಿ ಗೆದ್ದಿದೆ… ಬಿಗ್ ಮೂವಿ ಮೇಲೆ ನಿರೀಕ್ಷೆ..?
ಜ್ಯೋತಿ ರಾವ್ಈ: ಸಿನಿಮಾದ ಮೇಲೂ 100% ನಿರೀಕ್ಷೆಯನ್ನ ಇಟ್ಟುಕೊಳ್ಳಬಹುದು. ಎಷ್ಟು ಡೀಪ್ ಆಗಿ ವರ್ಕ್ ಮಾಡಿದ್ದೀವಿ ಅಂದ್ರೆ ಒಂದು ವರ್ಷ ಕೂತು ಕಥೆ ಬರೆದಿದ್ದೀವಿ. 3 ತಿಂಗಳು ರಿಹರ್ಸಲ್ ಮಾಡಿದ್ದೀವಿ, ಸೇಮ್ ಟೀಂ ವರ್ಕ್ ಮಾಡಿದ್ದೀವಿ. ಸಿನಿಮಾ ನೋಡುವಾಗ ಮನಸ್ಸಾರೆ 40-45 ಸಲ ನಗಬಹುದು. ಪ್ರತಿ ಸೀನ್ ನಲ್ಲೂ ನಗುವಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಶಾರ್ಟ್ ಫಿಲ್ಮ್ ನಲ್ಲಿ ಏನು ಹೊಸ ವಿಷಯ ಕೊಟ್ವಿ, ಇಲ್ಲೂ ಒಂದಷ್ಟು ಹೊಸ ವಿಷಯಗಳನ್ನು ಜನರಿಗೆ ಕೊಟ್ಟಿದ್ದೀವಿ. ನಾನು ಕುಡಿಯೋದು ಬಿಟ್ಟರೆ ನೀನು ಮೇಕಪ್ ಹಾಕೋದು ಬಿಡ್ತೀಯಾ. ಈ ಡೈಲಾಗ್ ಒಂದು ಕ್ಯಾರಿ ಮಾಡಿದ್ದೀವಿ. ಬಿಟ್ರೆ ಕಥೆ ಎಳೆ ತುಂಬಾನೇ ಹೊಸದಾಗಿದೆ. ಪ್ರತಿಯೊಬ್ಬ ತಂದೆ – ತಾಯಿನೂ ಮಕ್ಕಳಿಗೆ ಈ ಥರ ಮಾಡ್ಬೇಕು ಅಂದ್ಕೊಳ್ತಾರೆ.
ಪ್ರ: ಅದೇ ಟೈಟಲ್ ನ ಸಿನಿಮಾ ಮಾಡೋಕೆ ಏನು ಚಾಲೆಂಜ್ ಅನ್ಸಿದ್ದು..?
ಜ್ಯೋತಿ ರಾವ್: ನಾವೂ ಸಿನಿಮಾ ಮಾಡೋಕೆ ಹೊರಟಾಗ ನೀವೂ ಶಾರ್ಟ್ ಫಿಲ್ಮ್ ಮೇಕರ್ಸ್ ಅಂದ್ರು, ಶಾರ್ಟ್ ಫಿಲ್ಮ್ ಮಾಡಿದಂಗೆ ಮಾಡುದ್ರೆ ಯಾರೂ ಸಿನಿಮಾ ನೋಡಲ್ಲ. ಮೊಬೈಲ್ ನೋಡೋ ವೀವರ್ಸ್ ಥಿಯೇಟರ್ ಗೆ ಬರಲ್ಲ, ಇದು ವರ್ಕೌಟ್ ಆಗಲ್ಲ ಹೀಗೆ ಸಾಕಷ್ಟು ಚಾಲೆಂಜಸ್ ಬಂತು. ನಾರ್ಮಲ್ ಆಗಿ ಹೊಸದಾಗಿ ಮಾಡ್ತೀವಿ ಅಂದಾಗ ಈ ರೀತಿಯ ಮಾತುಗಳು ಸರ್ವೇ ಸಾಮಾನ್ಯ. ಸೆನ್ಸಾರ್ ಆಗಿದೆ. ಕರೆಕ್ಷನ್ ಇದ್ರೆ ಒಳಗೆ ಕರೆದು ಹೇಳ್ತಾರೆ. ಆದರೆ ಅವರೆ ಬಂದು, ಕೈ ಕುಲುಕಿ ತುಂಬಾ ಚೆನ್ನಾಗ್ ಮಾಡಿದ್ದೀಯಾ ಸಿನಿಮಾನ ಅಂತ ಹೇಳಿದ್ರು. ಅದೊಂದು ಈಗ ಪ್ಲಸ್ ಪಾಯಿಂಟ್. ಫ್ಯಾಮಿಲಿ ಆಡಿಯನ್ಸ್ ಆಗಿರಬಹುದು, ಯೂತ್ಸ್ ಆಗಿರಬಹುದು, ಯಾರಿಗೂ ಬೋರ್ ಹೊಡೆಸಲ್ಲ. ಇದೊಂದು ಟ್ರೆಸ್ ಬಸ್ಟರ್ ಥರ ಇರುತ್ತೆ ಸಿನಿಮಾ. ಲೈಫ್ ನಲ್ಲಿ ನಿಮ್ಗೆನಾದ್ರೂ ಬೇಜಾರಾಗಿದ್ರೆ ನಮ್ಮ ಸಿನಿಮಾಗೆ ಬನ್ನಿ ಮನಸ್ಸಾರೆ ನಕ್ಕು ಹೋಗ್ತೀರಾ ಅನ್ನೋ ಭರವಸೆ ನೀಡ್ತೇವೆ.
ಪ್ರ:ಇಲ್ಲಿ ಹಾಡುಗಳು ಇದಾವಾ..?
ಜ್ಯೋತಿ ರಾವ್: ಈ ಸಿನಿಮಾದಲ್ಲಿ ಮಾಂಟೇಜಸ್ ಸಾಂಗ್ಸ್ ಇದೆ. 80% ಕಾಮಿಡಿ ಇದ್ರೆ 10-15% ಎಮೋಷನ್ಸ್ ಇದೆ. ಅಪ್ಪ ಮಗನ ಬಗ್ಗೆ ದೊಡ್ಡ ಎಮೋಷನ್ಸ್ ಇದೆ. ಕಥೆಗೆ ಏನ್ ಬೇಕೋ ಆ ಸಾಂಗ್ಸ್ ತಗೊಂಡ್ ಹೋಗಿದ್ದೀವಿ. ಬೆಂಗಳೂರು, ಮಂಗಳೂರು, ಉಡುಪಿ ಭಾಗದಲ್ಲಿ ಶೂಟ್ ಮಾಡಲಾಗಿದೆ.
ಗೆದ್ದ ಶಾರ್ಟ್ ಮೂವಿ ಹೆಸರಲ್ಲೇ ಸಿನಿಮಾ ಮಾಡಿದ್ದಾರೆ ಜ್ಯೋತಿ ರಾವ್ ಮೋಹಿತ್. ಸದ್ಯ ರಿಲೀಸ್ ಗೆ ರೆಡಿಯಾಗಿದ್ದು, ಮನಸ್ಸಾರೆ ನಗಿಸೋ ಭರವಸೆಯನ್ನ ನೀಡಿದ್ದಾರೆ. ಅವರಿಗೆ ಆಲ್ ದ ಬೆಸ್ಟ್ ಹೇಳೋಣ!

