ಇಂದು ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ–ಸಿ 62 ರಾಕೆಟ್; ತಾಂತ್ರಿಕ ದೋಷ; ಆತಂಕದಲ್ಲಿ ಇಸ್ರೋ

Most read

ಶ್ರೀಹರಿಕೋಟ: ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ 10.18ಕ್ಕೆ ಉಡಾವಣೆಗೊಂಡ ಹೊತ್ತ ಪಿಎಸ್‌ಎಲ್‌ವಿ–ಸಿ62 ರಾಕೆಟ್‌ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.

ಈ ದೋಷ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, “PSLV-C62 ಅನ್ನು ನಿಗದಿತ ಸಮಯಕ್ಕೆ ಉಡಾವಣೆ ಮಾಡಲಾಗಿದ್ದು, 3 ಹಂತದ ವಿಭಜನೆವರೆಗೆ ಎಲ್ಲವೂ ನಿಗದಿತ ಯೋಜನೆಯಂತೆ ನಡೆಯಿತು. ಆದರೆ ಮೂರನೇ ಹಂತದ ಅಂತ್ಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಹಾರಾಟದ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದೆ. ಆದರೂ ಡೇಟಾವನ್ನು ವಿಶ್ಲೇಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ  ಇಸ್ರೋದ ಮೊದಲ ಯೋಜನೆ ಇದಾಗಿದ್ದು, ಭೂ ಸರ್ವೇಕ್ಷಣಾ ಉಪಗ್ರಹ ಹಾಗೂ ಇತರ 14 ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿ–ಸಿ62 ರಾಕೆಟ್‌ ನಭಕ್ಕೆ ಚಿಮ್ಮಿತ್ತು. 17 ನಿಮಿಷಗಳ ಪ್ರಯಾಣದ ನಂತರ, ಸುಮಾರು 511 ಕಿ.ಮೀ ಎತ್ತರದಲ್ಲಿ ಕಕ್ಷಗೆ ಸೇರಿಸುವ ಗುರಿ ಇತ್ತಾದರೂ ಮಧ್ಯದಲ್ಲಿ ಸಮಸ್ಯೆ ಉಂಟಾಗಿದೆ. ಶನಿವಾರ ವಿ. ನಾರಾಯಣನ್ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ಈ ಉಪಗ್ರಹವು ದೇಶದ ರಕ್ಷಣಾತ್ಮಕ ಉದ್ದೇಶಗಳ ಜೊತೆಗೆ ಕೃಷಿ, ನಗರ ಯೋಜನೆ ಮತ್ತು ಪರಿಸರ ಮೇಲ್ವಿಚಾರಣೆ ಸೇರಿದಂತೆ ನಾಗರಿಕ ಬಳಕೆಗೆ ಸಹ ಉಪಯುಕ್ತವಾಗಿತ್ತು. ಈ ಉಪಗ್ರಹ ನಿಖರವಾದ ಕಣ್ಗಾವಲು ಮತ್ತು ಮ್ಯಾಪಿಂಗ್‌ ಗಾಗಿ ಸುಧಾರಿತ ಇಮೇಜಿಂಗ್ ವೈಶಿಷ್ಟ್ಯಗಳನ್ನು ಹೊಂದಿತ್ತು. ಬಾಹ್ಯಾಕಾಶದಿಂದಲೂ ದಟ್ಟ ಅರಣ್ಯ ಅಥವಾ ಬಂಕರ್‌ ಗಳಲ್ಲಿ ಅಡಗಿರುವ ಶತ್ರುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿತ್ತು.

More articles

Latest article