ಕೃಷಿಗೆ ಅನುದಾನ, ವಿವಿಧ ಯೋಜನೆಗಳ ಅನುಮೋದನೆಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಚಲುವರಾಯಸ್ವಾಮಿ

Most read

ನವದೆಹಲಿ: ರಾಜ್ಯದ ರೈತ ಸಮುದಾಯದ ಹಿತಕ್ಕಾಗಿ ಬಾಕಿ ಇರುವ ಹಲವು ಮಹತ್ವದ ವಿಷಯಗಳನ್ನು ತುರ್ತಾಗಿ ಪರಿಹರಿಸುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಸಚಿವರ ಜತೆ ರಾಜ್ಯದ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚುವರಿ ಅನುದಾನ, ಬಿಡುಗಡೆಯಾಗದ ನಿಧಿ, ಯೋಜನೆಗಳ ಅನುಮೋದನೆ ಹಾಗೂ ಇತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY):

ಈ ಯೋಜನೆ ಅಡಿಯಲ್ಲಿ ರೈತರ ಹೆಚ್ಚುತ್ತಿರುವ ಯಾಂತ್ರೀಕರಣ ಬೇಡಿಕೆಯನ್ನು ಗಮನಿಸಿ PM-RKVY-SMAM ಯೋಜನೆಯಡಿ  ಈ ವರ್ಷಕ್ಕೆ ಹೆಚ್ಚುವರಿ 250 ಕೋಟಿ ರೂ. ಅನುದಾನ ನೀಡಬೇಕು. ಅದೇ ರೀತಿ ಮಳೆಯ ಮೇಲೆ ಅವಲಂಬಿತವಾಗಿರುವ ಕರ್ನಾಟಕದ ಕೃಷಿಯಲ್ಲಿ ಆಗಾಗ ಬೆಳೆ ನಷ್ಟಗಳನ್ನು ತಪ್ಪಿಸಲು ಸೂಕ್ಷ್ಮ ನೀರಾವರಿ ಯೋಜನೆಗೆ (PM-RKVY-PDMC) ಹೆಚ್ಚುವರಿ 250 ಕೋಟಿ ರೂ. ಬೇಕಾಗಿರುತ್ತದೆ ಎಂದು ಹೇಳಿದರು.

ಮೂಲಸೌಕರ್ಯ ಕೇಂದ್ರಿತ ಯೋಜನೆಗಳನ್ನು ಪೂರ್ಣಗೊಳಿಸಲು PM-RKVY-DPR ಅಡಿ 9.45 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಇದಲ್ಲದೆ PM-RKVY-DPR ಮತ್ತು SMAM ಅಡಿ 2025-26ರಲ್ಲಿ ಬಿಡುಗಡೆಯಾಗಬೇಕಾದ ಬಾಕಿ ನಿಧಿಯನ್ನು ತುರ್ತಾಗಿ ನೀಡಬೇಕು.

 ಡಿಪಿಆರ್‌ನಲ್ಲಿ 21.17 ಕೋಟಿ ಮತ್ತು SMAMನಲ್ಲಿ 1.512 ಕೋಟಿ ಸೇರಿ ಒಟ್ಟು 22.682 ಕೋಟಿ ರೂಪಾಯಿ ಕೊರತೆ ಇರುವುದನ್ನು ಮನವರಿಕೆ ಮಾಡಿದರು. 2024-25ರಲ್ಲಿ ಬಾಕಿ ಇದ್ದ 152.98 ಕೋಟಿ ರೂಪಾಯಿ ಬಿಲ್‌ಗಳನ್ನು 2025-26ರಲ್ಲಿ ಪಾವತಿಸಿದ್ದರಿಂದ ಈ ವರ್ಷದ ಅನುದಾನದಲ್ಲಿ ಹೆಚ್ಚಿನ ಕೊರತೆ ಉಂಟಾಗಿದೆ.

ಡಿಜಿಟಲ್ ಕ್ರಾಪ್ ಸಮೀಕ್ಷೆಗೆ ಕೇಂದ್ರ ಅನುಮೋದಿಸಿದ 25.704 ಕೋಟಿ ರೂಪಾಯಿಯಲ್ಲಿ SCSP ಮತ್ತು TSP ಅಡಿ ಬಿಡುಗಡೆಯಾದ 3.10 ಕೋಟಿ ರೂ.ಗಳನ್ನು ಸಾಮಾನ್ಯ ಶೀರ್ಷಿಕೆಯಡಿ PFMS ಮೂಲಕ ಬಿಡುಗಡೆ ಮಾಡಿ ಹಣದ ಹರಿವನ್ನು ಸುಗಮಗೊಳಿಸಬೇಕು.

 ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕತಾ ಅಭಿಯಾನ (NFSNM) ಅಡಿ ಹಸಿರು ಗೊಬ್ಬರ ಬೀಜ ವಿತರಣೆಗೆ ಅನುಮೋದನೆ, ಎತ್ತುಗಳಿಂದ ಎಳೆಯುವ ಉಪಕರಣಗಳು, ಸ್ಥಳೀಯ ನಿರ್ದಿಷ್ಟ ಹಸ್ತಕ್ಷೇಪಗಳಿಗೆ ಅನುಮತಿ ಕೋರಿದರು. ಹಿಂಗಾರು  2025-26ಗೆ ದ್ವಿದಳ ಧಾನ್ಯಗಳ ಅತ್ಮನಿರ್ಭರತಾ ಯೋಜನೆಯ ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ನ್ಯೂಟ್ರಿಸಿರಿಯಲ್ಸ್ ಅಡಿ ಅಂತರರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ರಾಜ್ಯದ ಕೆಟಿಪಿಪಿ ಕಾಯ್ದೆಯಂತೆ ಹಣ ಬಳಸಲು ಅನುಮತಿ ಕೋರಲಾಯಿತು.

ಎನ್‌ಎಮ್‌ಇಒ-ಒಎಸ್ ಅಡಿ ಖಾಸಗಿ ಸೂರ್ಯಕಾಂತಿ ಹೈಬ್ರಿಡ್ ಬೀಜಗಳಾದ ADV-363, PAC-334, GK-2002 ಮತ್ತು GK-2008 ಬಳಸಲು ಅನುಮತಿ ಕೋರಿದರು.

 ರೈತಸಿರಿ ಯೋಜನೆಯನ್ನು ರಾಜ್ಯ ನಿಯಮಗಳಂತೆ ಮಿಲ್ಲೆಟ್ ರೈತರಿಗೆ DBT ಮೂಲಕ ಪ್ರೋತ್ಸಾಹ ನೀಡುವ ರೀತಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ಮಾಡುವಂತೆ ಮನವಿ ಮಾಡಿದರು. ಆಗಸ್ಟ್-ನವೆಂಬರ್ 2025ರ ಅವಧಿಗೆ 31,340 ಅರ್ಹ ಫಲಾನುಭವಿಗಳಿಗೆ ಪಿಎಂ ಕಿಸಾನ್ ಸಹಾಯಧನ ಬಿಡುಗಡೆಯಾಗದಿರುವುದನ್ನು ತಿಳಿಸಿ ತಕ್ಷಣ ಸರಿಪಡಿಸುವಂತೆ ಕೋರಿದರು. ಬೆಂಗಳಗ್ರಾಮ್ (ಚಣ)ಗೆ RMS 2025-26ಗೆ MSP ಅನುಷ್ಠಾನ ಹಾಗೂ ಮೆಕ್ಕೆಗೆ KMS 2025-26ಗೆ PDPS ಅನುಷ್ಠಾನಕ್ಕೆ ಅನುಮೋದನೆ ಕೋರಲಾಯಿತು.

ಜಲಾನಯನ ಅಭಿವೃದ್ಧಿ ಘಟಕ 2.0ರಲ್ಲಿ ರಾಜ್ಯ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದು, PMKSY-WDC 3.0 ಅಡಿ 10.28 ಲಕ್ಷ ಹೆಕ್ಟೇರ್ ಜಲಾನಯನ ಮತ್ತು 193 ಸ್ಪ್ರಿಂಗ್‌ಶೆಡ್ ಯೋಜನೆಗಳಿಗೆ ಅನುಮೋದನೆ ಕೋರಲಾಯಿತು. ಮಣ್ಣು ಆರೋಗ್ಯ ಕಾರ್ಯಕ್ರಮದ ಅಡಿ ರದ್ದಾಗಿರುವ 4.18 ಕೋಟಿ ರೂಪಾಯಿ ಬಿಡುಗಡೆಗೆ ಒತ್ತಾಯಿಸಿದರು. REWARD ಅಭಿಯಾನವನ್ನು ಜೂನ್ 2027ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಮಂಡ್ಯದ ಹೊಸ ಕೃಷಿ ವಿಶ್ವವಿದ್ಯಾಲಯಕ್ಕೆ ICAR ಅಡಿ ಹೊಸ AICRP ಪ್ರಸ್ತಾವಗಳು ಮತ್ತು ಅನುದಾನಗಳಿಗೆ ಬೆಂಬಲ ಕೋರಿದರು.

ಇದಲ್ಲದೆ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳ ಬಲವರ್ಧನೆಗಾಗಿ ಹೊಸ ಯೋಜನೆ ರೂಪಿಸುವುದು, ಸಬ್ಸಿಡಿ ರಸಗೊಬ್ಬರಗಳಿಗೆ ಫ್ರೈಟ್ ಆನ್ ರೋಡ್ ಸೌಲಭ್ಯ ನೀಡುವುದು ಹಾಗೂ ಫರ್ಟಿಲೈಸರ್ ಫ್ಲೈಯಿಂಗ್ ಸ್ಕ್ವಾಡ್ ವರದಿಗಳಲ್ಲಿ ಸಹಿ-ಸೀಲ್ ಅಗತ್ಯತೆಯ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು.

More articles

Latest article