ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳ ಅದಿಕಾರಿಗಳಿಗೆ ಲೋಕಾಯುಕ್ತ ಇಲಾಖೆ ಇಂದು ಶಾಕ್ ನೀಡಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳ್ಳಗೆ ಭ್ರಷ್ಟ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಬೆಂಗಳೂರು (ಎಲೆಕ್ಟ್ರಾನಿಕ್ ಸಿಟಿ) ಆರ್ ಟಿಓ ಸೂಪರಿಂಟೆಂಡೆಂಟ್ ಕುಮಾರಸ್ವಾಮಿ; ಮಂಡ್ಯ ನಗರ ಪಾಲಿಕೆ ಸಿಎಓ ಪುಟ್ಟಸ್ವಾಮಿ;
ಬೀದರ್ ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್; ಮೈಸೂರು ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ರಾಮಸ್ವಾಮಿ ಸಿ; ಧಾರವಾಡ ಕರ್ನಾಟಕ ವಿವಿಯ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ; ಧಾರವಾಡ ಪ್ರಾ.ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್; ಶಿವಮೊಗ್ಗ ಎಸ್ ಎಂಎಸ್ ಮೆಡಿಕಲ್ ಕಾಲೇಜಿನ ಎಫ್ ಡಿಎ ಲಕ್ಷ್ಮೀಪತಿ ಸಿ.ಎನ್; ದಾವಣಗೆರೆ ಎಪಿಎಂಸಿ ಸಹ ನಿರ್ದೇಶಕ ಪ್ರಭು ಜೆ.; ಮೈಸೂರು – ಮಡಿಕೇರಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಇಂಜಿನಿಯರ್ ಗಿರೀಶ್ ಡಿ.ಎಂ ಮತ್ತು ಹಾವೇರಿ ಯೋಜನಾ ನಿರ್ದೇಶಕ ಕಚೇರಿ ಇಇ ಶೇಕಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು. ಈ ಭ್ರಷ್ಟ ಅಧಿಕಾರಿಗಳ ಕಚೇರಿ, ನಿವಾಸ, ತೋಟದ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದ್ದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ

