ದುಬೈ ಏರ್‌ ಶೋ: ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನ, ಪೈಲಟ್‌ ಸಾವು

Most read

ನವದೆಹಲಿ: ದುಬೈನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನವಾಗಿದೆ. ಅಪಘಾತದಲ್ಲಿ ಪೈಲಟ್‌ ಅಸುನೀಗಿದ್ದಾರೆ ಎಂದು ವರದಿಯಾಗಿದೆ.

ಏರ್ ಶೋದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಇಂದು ಮಧ್ಯಾಹ್ನ 2:10ರ ಸುಮಾರಿಗೆ ತೇಜಸ್ ಯುದ್ಧವಿಮಾನ ಏಕಾಏಕಿ ಪತನವಾಗಿದೆ. ಈ ವಿಮಾನವು ಆಕಾಶದಲ್ಲೇ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಉರುಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ತುರ್ತು ಸಹಾಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ಆವರಿಸಿಕೊಂಡ ರೀತಿಗೆ ಪೈಲಟ್‌ಸ್ಥಳದಲ್ಲೇ ಸುಟ್ಟುಕರಕಲಾಗಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಭಾರತೀಯ ವಾಯುಪಡೆ ತನಿಖೆಗೆ ಆದೇ‌ಶ ಮಾಡಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

More articles

Latest article