ಹೊಸ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ:ಡಿಕೆ ಶಿವಕುಮಾರ್; ಇದು ಚುನಾವಣಾ ಆಯೋಗದ ಗೆಲವು ಎಂದ ಹರಿಪ್ರಸಾದ್‌

Most read

ಬೆಂಗಳೂರು:  ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳಿಗೆ ಪಾಠ ಕಲಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ  ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಕಳಪೆ ಸಾಧನೆ ಕುರಿತು ಫಲಿತಾಂಶವನ್ನು ಹೀಗೆ ವಿಶ್ಲೇಷಿಸಿದರು.

ಕಾಂಗ್ರೆಸ್ ಮತ್ತು ಇಂಡಿಯಾ ಬಣಕ್ಕೆ ಭವಿಷ್ಯದಲ್ಲಿ ಹೊಸ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಬಿಹಾರ ಮತದಾರರು ಈ ಆದೇಶವನ್ನು ನೀಡಿದ್ದಾರೆ. ಇದು ನಮಗೆ ಒಂದು ಪಾಠ ಎಂದು ಭಾವಿಸುತ್ಥೇವೆ ಎಂದು ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿಗೆ  ಮಹಿಳೆಯರಿಗೆ ರೂ. 10,000 ಡಿಬಿಟಿ  ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಬಿಹಾರ ವಿಧಾನಸಭಾ ಚುನಾವಣೆ: ಗೆದ್ದಿದ್ದು ಚುನಾವಣಾ ಆಯೋಗ:ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಹಾರ ವಿಧಾನಸಭಾ ಚುನಾವಣೆ ಸಾಮಾನ್ಯ ಚುನಾವಣೆ ಅಲ್ಲ. ಬಿಹಾರ ಮತದಾರರ ಬಯಕೆಗೆ ವಿರುದ್ಧವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಗೆಲುವು ಸಾಧಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಬಿಕೆ ಹರಿಪ್ರಸಾದ್‌ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದು ಬಿಜೆಪಿ, ಕಾಂಗ್ರೆಸ್‌ ಆರ್‌ ಜೆಡಿ ಅಥವಾ ಜೆಡಿಯು ನಡುವೆ ನಡೆದ ಚುನಾವಣೆ ಅಲ್ಲ. ರಾಜಕೀಯ ಹೋರಾಟಕ್ಕೂ ಮಿಗಿಲಾದ ಚುನಾವಣೆ. ಈ ಚುನಾವಣೆ ಚುನಾವಣಾ ಪ್ರಕ್ರಿಯೆಯ ಗೌರವದೊಂದಿಗೆ ಹೊಂದಾಣಿಕೆ ಮಾಡಿಕೊಂಡ ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಡೆಸಿದ ಜನರ ನಡುವಿನ ಹೋರಾಟವಾಗಿತ್ತು ಎಂದಿದ್ದಾರೆ. ಇಡೀ ದೇಶ ಬಿಹಾರ ಚುನಾವಣೆಯನ್ನು ಗಮನಿಸುತ್ತಿದೆ. ಭಾರತಕ್ಕೆ ಪಾರದರ್ಶಕ, ನ್ಯಾಯಸಮ್ಮತ ಮತ್ತು ಬದ್ಧತೆಯುಳ್ಳ ಚುನಾವಣಾ ಅಯೋಗ ಬೇಕಾಗಿದೆ. ಜನರ ಶಕ್ತಿಯನ್ನು ಹತ್ತಿಕ್ಕುವ  ಆಯೋಗ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

More articles

Latest article