ಎಲ್ಲ NGOಗಳಂತೆ RSS ನೋಂದಣಿ ಮಾಡಿಸಲು ಸಮಸ್ಯೆ ಏನು ?: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

Most read

ಬೆಂಗಳೂರು: ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ NGOಗಳೆಲ್ಲವೂ ನೋಂದಣಿ ಮಾಡಿಸಿಕೊಂಡಿವೆ, ಪ್ರತಿ ವರ್ಷ ಐಟಿ ಫೈಲ್ ಮಾಡುತ್ತವೆ, ತಮ್ಮ ಆದಾಯ ಅಥವಾ ದೇಣಿಗೆಯ ಮಾಹಿತಿಗಳನ್ನು ಸರ್ಕಾರಕ್ಕೆ ತಿಳಿಸುತ್ತವೆ. ಆರ್‌ ಎಸ್‌ ಎಸ್  NGO ಆಗಿದ್ದರೆ ಈ ಪ್ರಕ್ರಿಯೆ ನಡೆಸದೆ ಇರುವುದೇಕೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಒಂದು NGO ಮುಖ್ಯಸ್ಥರಿಗೆ ಅತಿ ಭದ್ರತೆಯ ಲಿಐಸನ್ ಪ್ರೊಟೊಕಾಲ್ ಸೆಕ್ಯೂರಿಟಿ ನೀಡಿರುವುದೇಕೆ? ಒಂದೇ ಒಂದು ರೂಪಾಯಿ ತೆರಿಗೆ ನೀಡದ ಯಕಶ್ಚಿತ್ NGO ಮುಖ್ಯಸ್ಥನಿಗೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವಂತಹ ಅನಿವಾರ್ಯ ಏನಿದೆ? ಇವರ ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ?

ನಾವು ಆರ್‌ ಎಸ್‌ ಎಸ್ ನಿಂದ ಅಕೌಂಟೆಬಲಿಟಿಯನ್ನು ಕೇಳಿದರೆ ಮೈ ಮೇಲೆ ಚೇಳು ಬಿದ್ದವರಂತೆ ಆಡುವುದೇಕೆ? ಈ ದೇಶದ ಬಹುಸಂಖ್ಯಾತರು RSS ನ್ನು ಆಪ್ಪಿಕೊಂಡೂ ಇಲ್ಲ, ಒಪ್ಪಿಕೊಂಡೂ ಇಲ್ಲ. ಇವರು ಈ ದೇಶಕ್ಕಿಂತ, ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರೂ ಅಲ್ಲ, ಅತೀತರೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

More articles

Latest article