ಆಳಂದ ಮತಕಳವು; ಭಾಗಿಯಾದ ಎಲ್ಲರೂ ಜೈಲಿಗೆ ಹೋಗಲಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ

Most read

ಕಲಬುರಗಿ: ಬಿಜೆಪಿ ಮತ ಕಳವು ನಡೆಸಿದೆ ಎನ್ನುವುದು ಆಳಂದ ಕ್ಷೇತ್ರದಲ್ಲಿ ಎಸ್‌ ಐಟಿ ನಡೆಸುತ್ತಿರುವ ತನಿಖೆಯಿಂದ ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸಿಹಾಕಲು ಪ್ರತಿಯೊಂದು ಅರ್ಜಿಗೆ ರೂ. 80 ಪಾವತಿಸಲಾಗಿದೆ ಎನ್ನುವ ಅಂಶ ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. ವೋಟ್‌ ಚೋರಿ ಕುರಿತು ಕಾಂಗ್ರೆಸ್‌ ಪಕ್ಷ  ಇಷ್ಟು ದಿನ ಹೇಳುತ್ತಿದ್ದ ವಿಷಯ ಎಸ್‌ಐಟಿ ತನಿಖೆಯಿಂದ ದೃಢಪಟ್ಟಿದೆ ಎಂದಿದ್ದಾರೆ.

ಎಸ್‌ ಐಟಿ ತನಿಖೆಯು ಬಿಜೆಪಿ ನಾಯಕರು ಮತ್ತು ಅವರ ಸಹಚರರ ಮತ ಕಳವು ಮಾಡುವುದರಲ್ಲಿ ನಿರತರಾಗಿರುವುದನ್ನು ತೋರಿಸುತ್ತದೆ. ಈ ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಳಂದ ಮತ ಕ್ಷೇತ್ರದಲ್ಲಿ ಸುಮಾರು 6,000ಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಯತ್ನಿಸಲಾಗಿತ್ತು. ಎಂದು ಸ್ವತಃ ರಾಹುಲ್‌ ಗಾಂಧಿ ಅವರೇ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ಇದಕ್ಕೆ ಪುರಾವೆಯಾಗಿ ಅವರು ಕೆಲವು ದಾಖಲೆಗಳನ್ನೂ ನೀಡಿದ್ದರು.

ಬಿಜೆಪಿ ಮುಖಂಡ ಬಿಜೆಪಿ ಅಭ್ಯರ್ಥಿ ಸುಭಾಷ್‌ ಗುತ್ತೇದಾರ ಅವರು ಈ ಹಗರಣದ ರೂವಾರಿ ಎನ್ನಲಾಗುತ್ತಿದೆ. ಎಸ್‌ ಐಟಿಯು ಈಗಾಗಲೇ ಗುತ್ತೇದಾರ ಮತ್ತು ಅವರ ಮಕ್ಕಳು ಮತ್ತು ಅವರ ಸಹಚರರ  ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ.

More articles

Latest article