ಸಿಜೆಐ ಬಿ ಆರ್‌ ಗವಾಯಿ ಅವರತ್ತ ಶೂ ಎಸೆತ: ಆರ್.ಎಸ್.ಎಸ್ ಬಿತ್ತುತ್ತಿರುವ ದ್ವೇಷಕ್ಕೆ ನಿದರ್ಶನ: ಹರಿಪ್ರಸಾದ್‌ ವಾಗ್ದಾಳಿ

Most read

ಬೆಂಗಳೂರು: ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆಗೂ, ಬಾಬಾರಿ ಮಸೀದಿ ಧ್ವಂಸ ಮಾಡಿದ ಸಂಘಿಗಳಿಗೂ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೇ ಶೂ ಎಸೆದ ಸನಾತನಿ ವಕೀಲನಿಗೂ ಸಾಮ್ಯತೆಗಳಿವೆ. ಯಾವ ಸಿದ್ದಾಂತ ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಿಯೋ, ಯಾವ ಸಿದ್ದಾಂತ ದೇಶದ ಭಾವೈಕ್ಯತೆಗೆ ಧಕ್ಕೆ ತರುತ್ತಿದೆಯೋ, ಯಾವ ಸಿದ್ದಾಂತ ಸಂವಿಧಾನದ ಮೇಲೆಯೇ ದಾಳಿ ನಡೆಸುತ್ತಿದಿಯೋ, ಯಾವ ಸಿದ್ದಾಂತ ದೇಶದಲ್ಲಿ ಭಯೋತ್ಪದಾನೆಯನ್ನು ಹುಟ್ಟು ಹಾಕುತ್ತಿದೆಯೋ, ಅದೇ ಸಿದ್ದಾಂತವೇ ಇಂದು ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆಯುವಂತೆ ಮಾಡಿರುವುದು ಸ್ಪಷ್ಟ ಎಂದು ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ದೇಶದ ಸುಪ್ರೀಂ ಕೋರ್ಟ್‌  ನ್ಯಾಯಾಧೀಶರ ಮೇಲೆ ಶೂ ಎಸೆದಿರುವ ದುಷ್ಕರ್ಮಿಯ ಪರದೆಯ ಹಿಂದಿನ ಸೂತ್ರದಾರರು ಯಾರು? ದೇಶದ ಅಮಾಯಕ ಜನರ ತಲೆಯಲ್ಲಿ ಮನುಷ್ಯ ವಿರೋಧಿ ಮನಸ್ಥಿತಿ ತುಂಬುತ್ತಿರುವವವರು ಯಾರು? ಅದಕ್ಕೆ ಮೂಲ ಕಾರಣವೇ ಸಮಾಜದಲ್ಲಿ ಆರ್.ಎಸ್.ಎಸ್ ಬಿತ್ತುತ್ತಿರುವ ದ್ವೇಷ….!

ಆರ್‌ಎಸ್‌ಎಸ್ ಸಿದ್ದಾಂತದ ವಿರೋಧಿಗಳಾದ  ಸಂವಿಧಾನದ ರಕ್ಷಕರು, ಪ್ರಜಾಪ್ರಭುತ್ವವಾದಿಗಳು, ಸಮಾನತಾವಾದಿಗಳು,

ಜಾತ್ಯಾತೀತವಾದಿಗಳನ್ನು ಇಲ್ಲವಾಗಿಸುವ ವಿಷಕಾರಿ,ದ್ವೇಷಮಯ ವಾತಾವರಣವನ್ನು ಸಮಾಜದಲ್ಲಿ ಆರ್.ಎಸ್.ಎಸ್ ಹುಟ್ಟು ಹಾಕಿದೆ. ಇಂತಹ ವಿಚ್ಛದ್ರಕಾರಿ ಶಕ್ತಿಗಳ ವಿರುದ್ಧ ದೇಶ ಒಟ್ಟಾಗಿ ಮುಖಾಮುಖಿಯಾಗಬೇಕಿದೆ.

ದಲಿತ ಸಮುದಾಯವನ್ನು ಪ್ರತಿನಿಧಿಸುವ ಸುಪ್ರೀಂಕೋರ್ಟ್ ನ ನ್ಯಾಯಾಧೀಶರ ಮೇಲಿನ ದಾಳಿಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಸಿಜೆಐ ಗವಾಯಿಯವರ ಬೆನ್ನಿಗೆ ದೇಶದ ಪ್ರಜ್ಞಾವಂತ ಜನರು ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.

More articles

Latest article