ಕೋಲಾರ. ಕಳೆದ ಗುರುವಾರ ಮುಳಬಾಗಲು ತಾಲ್ಲೂಕು ಯಳಚೇಪಲ್ಲಿಯ ಗ್ರಾಮದಿಂದ ನಾಪತ್ತೆಯಾಗಿದ್ಬ ಇಬ್ಬರು ಸಹೋದರಿಯರ ಶವಗಳು ಇಂದು ಮುಂಜಾನೆ ಸಮೀಪದ ಕುಪ್ಪಂ ಪಾಳ್ಯದ ಬಾವಿಯೊಂದರಲ್ಲಿ ಪತ್ತೆಯಾಗಿವೆ.
ಧನ್ಯಭಾಯಿ ಹಾಗೂ ಚೈತ್ರಾಭಾಯಿ ಮೃತ ದುರ್ದೈವಿಗಳು. 13 ವರ್ಷದ ಇಬ್ಬರೂ ಇವರು ಯಳಚೇಪಲ್ಲಿಯ ಶಿಕ್ಷಕ ಈಶ್ವರ ರಾವ್ ಅವರ ಪುತ್ರಿಯರು. ಸಹೋದರಿಯರಿಬ್ಬರೂ ಯಳಚೇಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರ ತಂದೆಯೂ ಅದೇ ಶಾಲೆಯಲ್ಲೇ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಳಚೇಪಲ್ಲಿಯಿಂದ ಐದು ಕಿ.ಮೀ. ದೂರಲ್ಲಿರುವ ಹಳೆಯ ಬಾವಿಯಲ್ಲಿ ಇವರ ಶವಗಳು ಪತ್ತೆಯಾಗಿವೆ. ಸಹೋದರಿಯರ ನಿಗೂಢ ಸಾವು ಹಲವಾರು ಅನುಮಾನಗಳು ಹುಟ್ಟು ಹಾಕಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುರುವಾರ ಮನೆಯ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ನಂತರ ಇಬ್ಬರೂ ಬಹಿರ್ದೆಸೆಗೆ ತೆರಳಿದ್ದಾರೆ. ಆಗ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಪೋಷಕರು ಮುಳಬಾಗಲು ಗ್ರಾಮಾಂತರ ಪೋಲೀಸು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇವರು ಆಟವಾಡುವಾಗಲೂ ಶಾಲಾ ಸಮವಸ್ರ್ತ ಧರಿಸಿದ್ದರು ಎನ್ನಲಾಗಿದೆ.